ದಕ್ಷಿಣ ಆಫ್ರಿಕಾ (India vs South Africa) ಸರಣಿಗಾಗಿ ಟೀಮ್ ಇಂಡಿಯಾ (Team India) ಹೊರಡುವ ಮುನ್ನ ವಿರಾಟ್ ಕೊಹ್ಲಿ (Virat Kohli) ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ನಡುವೆ ಆರಂಭವಾದ ವಿವಾದ ಇನ್ನು ಅಂತ್ಯ ಕಂಡಿಲ್ಲ. ಹೀಗಾಗಿಯೇ ಇತ್ತೀಚೆಗೆ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಕೊಹ್ಲಿಗೆ ಟಿ20 ನಾಯಕತ್ವವನ್ನು ತ್ಯಜಿಸದಂತೆ ಮನವಿ ಮಾಡಿದ್ದೆವು ಎಂದು ಪುನರಾವರ್ತಿಸಿದ್ದರು. ಇದೀಗ ಈ ಸಂಪೂರ್ಣ ವಿವಾದದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಮನಬಿಚ್ಛಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ, “ಪರಸ್ಪರ ಮಾತುಕತೆಯೊಂದಿಗೆ ಈ ಸಮಸ್ಯೆಯನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಬದಲು ಸಂವಾದ ನಡೆಸಿದ್ದರೆ ಚೆನ್ನಾಗಿರುತ್ತಿತ್ತು. ವಿರಾಟ್ ಕೊಹ್ಲಿ ತಮ್ಮ ವಿಚಾರವನ್ನು ಹೇಳಿದ್ದಾರೆ. ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಅಥವಾ ಅವರ ಕಡೆಯವರು ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕಾಗುತ್ತದೆ. ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಪ್ರಶ್ನೆಯಲ್ಲ? ಸತ್ಯ ಯಾವುದು ಎಂಬುದು ಇಲ್ಲಿ ಪ್ರಶ್ನೆ. ನಾವು ಇದನ್ನು ತಿಳಿದುಕೊಳ್ಳಲು ಬಯಸುತ್ತೇವೆ. ಆದರೆ, ಇದಕ್ಕಾಗಿ ಎರಡೂ ಕಡೆ ಸಂವಾದ ನಡೆಯಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಈ ವಿವಾದವನ್ನು ಕೊನೆಗೊಳಿಸಬಹುದು ಎಂದು ಶಾಸ್ತ್ರಿ ತಿಳಿಸಿದರು.
ಜನರಿಗೆ ಮಾತನಾಡುವ, ಬರೆಯುವ ಮತ್ತು ಊಹಿಸುವ ಹಕ್ಕಿದೆ. ಆದರೆ ನಾನು ಅದರಲ್ಲಿ ಭಾಗವಹಿಸಬೇಕು ಎಂದು ಅರ್ಥವಲ್ಲ. ನನ್ನ ಹಾಗೂ ವಿರಾಟ್ ಕೊಹ್ಲಿ ನಡುವಿನ ಸಂಬಂಧ ಅದ್ಭುತವಾಗಿತ್ತು. ಇಬ್ಬರು ಸಮಾನ ಮನಸ್ಕರು ತಮ್ಮ ಕೆಲಸವನ್ನು ವೃತ್ತಿಪರ ರೀತಿಯಲ್ಲಿ ಮಾಡುತ್ತಿದ್ದರು. ನಮ್ಮಿಬ್ಬರಿಗೂ ಸಾಮ್ಯತೆ ಇದೆ. ವಿರಾಟ್ ಆಟದ ಬಗ್ಗೆ ತುಂಬಾ ಆಕ್ರಮಣಕಾರಿ ಚಿಂತನೆಯನ್ನು ಹೊಂದಿದ್ದಾರೆ. ನನ್ನ ಆರಂಭಿಕ ಕ್ರಿಕೆಟ್ ಜೀವನದಲ್ಲಿ ನಾನು ಕೂಡ ಹೀಗೆಯೇ ಇದ್ದೆ. ಅದೇ ಉತ್ಸಾಹವನ್ನು ನಾನು ವಿರಾಟ್‌ನಲ್ಲಿ ನೋಡುತ್ತೇನೆ ಎಂದು ಶಾಸ್ತ್ರಿ ಹೇಳಿದರು.
ನಿಮ್ಮ ಮತ್ತು ವಿರಾಟ್ ಕಾಲದಲ್ಲಿ ಆಟಗಾರರು ಭಯಪಡುತ್ತಿದ್ದರೇ? ಈ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ಆ ರೀತಿ ಏನು ಇಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ರೀತಿಯ ಅಜೆಂಡಾದೊಂದಿಗೆ ಕೆಲಸ ಮಾಡಿಲ್ಲ ಎಂದು ನನಗೆ ತಿಳಿದಿದೆ. ನಾನು ಆಟಗಾರನಿಗೆ ಏನನ್ನಾದರೂ ಹೇಳಿದಾಗ, ಅದು ತಂಡದ ಲಾಭಕ್ಕಾಗಿ ಅಷ್ಟೇ. ಅಷ್ಟೇ ಅಲ್ಲದೆ ಆಟಗಾರನಿಗೂ ಅದರಿಂದ ಲಾಭವಾಗುತ್ತದೆ. ಏಕೆಂದರೆ ಅವರು ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಹೀಗಾಗಿ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿದ್ದರೂ ಅದು ತಂಡಕ್ಕಾಗಿ ಹಾಗೂ ಆಟಗಾರರ ಪ್ರದರ್ಶನಕ್ಕಾಗಿ ಮಾತ್ರ ಆಗಿತ್ತು ಎಂದು ರವಿಶಾಸ್ತ್ರಿ ತಿಳಿಸಿದರು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Ravi Shastri Said Know The Truth On Virat Kohli Contradicting Sourav Ganguly On Captaincy Issue)