IPL 2022 Auction: ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ನ ಬಹುದೊಡ್ಡ ನಿರ್ಧಾರ ರಿವೀಲ್ ಮಾಡಿದ ಆರ್. ಅಶ್ವಿನ್

R. Ashwin and Shreyas Iyer, Delhi Capitals: ಅಶ್ವಿನ್ ತಮ್ಮ​ ಯೂಟ್ಯೂಬ್​ ಚಾನೆಲ್​ ಸಂಭಾಷಣೆ ವೇಳೆ, “ಐಪಿಎಲ್ 2022 ಮೆಗಾ ಹರಾಜಿಗೂ ಮುನ್ನ ಶ್ರೇಯಸ್​ ಅಯ್ಯರ್ ಮತ್ತು ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ” ಎಂಬ ವಿಚಾರವನ್ನು ತಿಳಿಸಿದ್ದಾರೆ.

IPL 2022 Auction: ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್​ನ ಬಹುದೊಡ್ಡ ನಿರ್ಧಾರ ರಿವೀಲ್ ಮಾಡಿದ ಆರ್. ಅಶ್ವಿನ್
R Ashwin and Shreyas Iyer IPL 2022
Follow us
TV9 Web
| Updated By: Vinay Bhat

Updated on: Nov 23, 2021 | 8:33 AM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ (Indian Premier League) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ತಯಾರಿ ಆರಂಭಿಸಿದೆ. ಮುಂದಿನ ತಿಂಗಳು ಡಿಸೆಂಬರ್​ನಲ್ಲಿ ಐಪಿಎಲ್ 2022ರ ಮೆಗಾ ಹರಾಜು (IPL 2022 Mega Auction) ಪ್ರಕ್ರಿಯೆ ನಡೆಯಲಿದೆ. ನಿಯಮದಂತೆ ಎಂಟು ಮೂಲ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ರಿಟೇನ್ ಮಾಡಬಹುದಾಗಿದೆ. ಹಾಗೆಯೇ ಹೊಸತಾಗಿ ಸೇರ್ಪಡೆಯಾಗಿರುವ ಎರಡು ಹೊಸ ಫ್ರಾಂಚೈಸಿಗಳಾದ ಲಖನೌ ಹಾಗೂ ಅಹಮದಾಬಾದ್ (Ahmedabad and Lucknow) ಹರಾಜಿಗೂ ಮುಂಚಿತವಾಗಿ ಮೂವರು ಆಟಗಾರರನ್ನು ಪಡೆಯುವ ಆಯ್ಕೆಯನ್ನು ಒದಗಿಸಿದೆ. ಈಗಿರುವ ಎಂಟು ಫ್ರಾಂಚೈಸಿಗಳು ನವೆಂಬರ್ 1ರಿಂದ 30ರ ಅವಧಿಯೊಳಗೆ ಆಟಗಾರರ ರಿಟೇನ್ ದೃಢಪಡಿಸಬೇಕಿದೆ. ಹೀಗಿರುವಾಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎಂದು ರವಿಚಂದ್ರನ್ ಅಶ್ವಿನ್ (Ravichandran Ashwin) ಬಹಿರಂಗ ಪಡಿಸಿದ್ದಾರೆ.

ಅಶ್ವಿನ್ ತಮ್ಮ​ ಯೂಟ್ಯೂಬ್​ ಚಾನೆಲ್​ ಸಂಭಾಷಣೆ ವೇಳೆ, “ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಶ್ರೇಯಸ್​ ಅಯ್ಯರ್ ಮತ್ತು ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ” ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ಮೂಲಕ ಅಯ್ಯರ್ ಹಾಗೂ ಅಶ್ವಿನ್ ಮುಂದಿನ ಮೆಗಾ ಹರಾಜಿಗೆ ಲಭ್ಯರಿದ್ದಾರೆ ಎಂಬ ಸಂಗತಿ ಬಹಿರಂಗವಾಗಿದೆ.

2022ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು  ತಲಾ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ತಿಳಿಸಿದೆ. ಅದು ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಬಹುದೆಂದು ನಿಯಮದಲ್ಲಿ ತಿಳಿಸಿದೆ. ಹೀಗಾಗಿ ಡೆಲ್ಲಿ ಅಶ್ವಿನ್ ಮತ್ತು ಅಯ್ಯರ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಷಭ್ ಪಂತ್​, ಕಗಿಸೋ ರಬಾಡ, ಎನ್ರಿಚ್ ನಾಕಿಯಾರನ್ನು ಭಾಗಶಃ ರಿಟೇನ್ ಮಾಡಿಕೊಳ್ಳುವುದು ಖಚಿತ. ಇನ್ನು ನಾಯಕತ್ವವನ್ನು ಕಳೆದುಕೊಂಡಿರುವ ಶ್ರೇಯಸ್​ ಅಯ್ಯರ್ ತಾವಾಗಿಯೇ ಫ್ರಾಂಚೈಸಿಯಿಂದ ಹೊರಬರಲು ಮುಂದಾಗಿದ್ದಾರೆ. ಅವರು ಹೊಸ 2 ಫ್ರಾಂಚೈಸಿಯಲ್ಲಿ ನಾಯಕತ್ವವನ್ನು ಬಯಸುತ್ತಿರುವ ಪ್ರಮುಖರ ಲಿಸ್ಟ್​ನಲ್ಲಿದ್ದಾರೆ. ಹಾಗಾಗಿ ಫೃಥ್ವಿ ಶಾ, ಶಿಖರ್ ಧವನ್​ ಅಕ್ಷರ್ ಪಟೇಲ್ ಸೇರಿದಂತೆ ಇನ್ನು ಕೆಲವು ಉಳಿದ ಒಂದು ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪರ್ಸ್‌ನಿಂದ ಎಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂಬುದನ್ನು ಬಿಸಿಸಿಐ ತಿಳಿಸಿದೆ. ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಾದರೆ ₹42 ಕೋಟಿ, ಮೂವರು ಆಟಗಾರರಿಗೆ ₹33 ಕೋಟಿ, ಇಬ್ಬರು ಆಟಗಾರರಿಗೆ ₹24 ಕೋಟಿ ಮತ್ತು ಓರ್ವ ಆಟಗಾರನಿಗೆ ₹14 ಕೋಟಿ ಕಡಿತಗೊಳಿಸಲಾಗುವುದು. ಹಾಗೆಯೇ ಅ‌ನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳುವುದಾದರೆ ತಲಾ ₹4 ಕೋಟಿ ವ್ಯಯಿಸಬೇಕಿದೆ. ಹಾಗೊಂದು ವೇಳೆ ಆಟಗಾರರ ವೇತನವು ಮೇಲೆ ಸೂಚಿಸಿದ ಮೊತ್ತಕ್ಕಿಂತ ಹೆಚ್ಚಿದ್ದರೆ, ಅದನ್ನು ತಂಡಗಳ ಪರ್ಸ್‌ನಿಂದ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ.

Gautam Gambhir: ಟೀಮ್ ಇಂಡಿಯಾದಲ್ಲಿ ಈತ ಇನ್ನೂ ಸ್ಥಾನ ಪಡೆದಿರುವುದು ಅದೃಷ್ಟವೇ ಸರಿ ಎಂದ ಗೌತಮ್ ಗಂಭೀರ್

(Ravichandran Ashwin revealed Before IPL 2022 Mega Auction Me and Shreyas Iyer will not get retained by Delhi Capitals)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್