ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ರವಿಚಂದ್ರನ್ ಅಶ್ವಿನ್ ದೊಡ್ಡ ತಪ್ಪು ಮಾಡಿದ್ದಾರೆ. ಇವರು ಮಾಡಿದ ತಪ್ಪಿನಿಂದಾಗಿ ಇಂಗ್ಲೆಂಡ್‌ಗೆ ಭಾರಿ ಲಾಭವಾಗಿದೆ. ಅಶ್ವಿನ್ ಕಾರಣದಿಂದ ಇಂಗ್ಲೆಂಡ್ ಬ್ಯಾಟಿಂಗ್ ಶುರು ಮಾಡುವ ಮುನ್ನವೇ ಖಾತೆ ತೆರೆದಿದೆ. ಈಗ ಇಂಗ್ಲೆಂಡ್‌ನ ಬ್ಯಾಟಿಂಗ್ 0 ಬದಲು 5 ರನ್‌ಗಳಿಂದ ಆರಂಭವಾಗಲಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಇನಿಂಗ್ಸ್ನ 102ನೇ ಓವರ್ನಲ್ಲಿ ಆರ್. ಅಶ್ವಿನ್ ದೊಡ್ಡ ತಪ್ಪು ಮಾಡಿದರು. ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್‌ಗೆ 5 ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ರೆಹಾನ್ ಅಹ್ಮದ್ 102 ನೇ ಓವರ್ ಬೌಲ್ ಮಾಡಲು ಬಂದರು. ರೆಹಾನ್ ಅವರ ನಾಲ್ಕನೇ ಎಸೆತದಲ್ಲಿ ಅಶ್ವಿನ್ ಒಂದು ರನ್ ಗಳಿಸಿದರು. ಈ ಸಂದರ್ಭ ಅಶ್ವಿನ್ ಪಿಚ್‌ನ ಮಧ್ಯದಲ್ಲಿ ಓಡಿಕೊಂಡು ಹೋಗಿದ್ದಾರೆ.
ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದಾಗ ಸರ್ಫರಾಜ್ ಪತ್ನಿ ಏನು ಮಾಡಿದ್ರು ಗೊತ್ತೇ?
ನಿಯಮಗಳ ಪ್ರಕಾರ, ಪಿಚ್‌ನ ಮಧ್ಯದಲ್ಲಿ ಓಡುವಂತಿಲ್ಲ. ಇದರಿಂದಾಗಿ ಪಿಚ್ ಹಾಳಾಗುತ್ತದೆ. ಮೊದಲ ದಿನ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದಾರೆ. ಆಗ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅಶ್ವಿನ್ ಮಾಡಿದ ಅದೇ ತಪ್ಪಿನಿಂದಾಗಿ ಅಂಪೈರ್ 5 ರನ್ ಗಳ ದಂಡ ವಿಧಿಸಿದ್ದಾರೆ. ಹೀಗಾಗಿ ಅಂಪೈರ್ ಜೋಯೆಲ್ ವಿಲ್ಸನ್ ಟೀಮ್ ಇಂಡಿಯಾಕ್ಕೆ 5 ಪೆನಾಲ್ಟಿ ರನ್ ವಿಧಿಸಿದರು. ಇದೀಗ ಇಂಗ್ಲೆಂಡ್ ಖಾತೆಗೆ 5 ರನ್‌ಗಳು ಸೇರ್ಪಡೆಯಾಗಿದೆ.
ಮೇರಿಲ್ಬೋನ್ ಕ್ರಿಕೆಟ್ ಕ್ಲಬ್‌ನ ಕಾನೂನು 41 ರ ಅಡಿಯಲ್ಲಿ 2017 ರಿಂದ ಆಟಗಾರರ ನಡವಳಿಕೆಗಾಗಿ ಕಾನೂನು 42 ರ ಪ್ರಕಾರ ದಂಡವನ್ನು ನೀಡಲಾಗುತ್ತದೆ. ಬ್ಯಾಟಿಂಗ್ ತಂಡವು ಈರೀತಿಯ ತಪ್ಪು ಮಾಡಿ ಎಚ್ಚರಿಕೆ ನೀಡಿದ ನಂತರವೂ ಮುಂದುವರೆಸಿದರೆ ಫೀಲ್ಡಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್‌ಗಳನ್ನು ನೀಡಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಅಥವಾ ಪಿಚ್‌ಗೆ ಹಾನಿ ಮಾಡುವ ಮಾರ್ಗವೆಂದು ಇದನ್ನು ಪರಿಗಣಿಸಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಲೆವೆಲ್ 1 ಅಪರಾಧವಾಗಿದೆ.
ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?
2016ರ ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಇಂದೋರ್ ಟೆಸ್ಟ್‌ನಲ್ಲಿ, ರವೀಂದ್ರ ಜಡೇಜಾ ಮಾಡಿದ ತಪ್ಪಿಗೆ ಕಿವೀಸ್ಗೆ 5 ರನ್ ನೀಡಲಾಗಿತ್ತು. ಈ ಪಂದ್ಯದ್ಲಿ ಭಾರತ ತನ್ನ ಇನ್ನಿಂಗ್ಸ್ ಅನ್ನು 557/5 ಕ್ಕೆ ಡಿಕ್ಲೇರ್ ಮಾಡಿದ ನಂತರ, ನ್ಯೂಝಿಲೆಂಡ್ ತನ್ನ ಇನ್ನಿಂಗ್ಸ್ ಅನ್ನು 5/0 ಯಿಂದ ಪ್ರಾರಂಭಿಸಿತು. ಅಂತಿಮವಾಗಿ, ಭಾರತವು ಆ ಟೆಸ್ಟ್ ಅನ್ನು 321 ರನ್‌ಗಳಿಂದ ಗೆದ್ದುಕೊಂಡಿತು, ಅಶ್ವಿನ್ 13 ವಿಕೆಟ್‌ಗಳನ್ನು ಪಡೆದರು. ಆತಿಥೇಯರು 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ