Sarfaraz Khan: ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದಾಗ ಸರ್ಫರಾಜ್ ಪತ್ನಿ ಏನು ಮಾಡಿದ್ರು ಗೊತ್ತೇ?

Sarfaraz Khan Wife, IND vs ENG 3rd Test: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ರೋಹಿತ್ ಶರ್ಮಾ-ರವೀಂದ್ರ ಜಡೇಜಾ ಶತಕ ಸಿಡಿಸಿದರೂ ಹೈಲೇಟ್ ಆಗಿದ್ದು ಸರ್ಫರಾಜ್ ಖಾನ್. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದರು. ಈ ಸಂದರ್ಭ ಸರ್ಫರಾಜ್ ಪತ್ನಿ ರೊಮಾನಾ ಜಹೂರ್ ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ.

Sarfaraz Khan: ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದಾಗ ಸರ್ಫರಾಜ್ ಪತ್ನಿ ಏನು ಮಾಡಿದ್ರು ಗೊತ್ತೇ?
Sarfaraz Khan and His Wife
Follow us
Vinay Bhat
|

Updated on: Feb 16, 2024 | 8:32 AM

ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ (Sarfaraz Khan) ಭಾರತಕ್ಕಾಗಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಬಲಗೈ ಬ್ಯಾಟರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಇಂಗ್ಲೆಂಡ್ ಬೌಲರ್‌ಗಳ ಬೆಂಡೆತ್ತಿದರು. ಕೆಲ ದಾಖಲೆ ಕೂಡ ನಿರ್ಮಾಣ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸರಾಸರಿಯಲ್ಲಿ ರನ್ ಕಲೆಹಾಕಿ ಆ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ ವಿಶೇಷ ಸಾಧಕರ ಪಟ್ಟಿಗೆ ಸರ್ಫರಾಜ್ ಸೇರ್ಪಡೆಯಾದರು. ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಕೂಡ ಸಿಡಿಸಿದರು. ಈ ಸಂದರ್ಭ ಅವರ ಪತ್ನಿ ರೊಮಾನಾ ಜಹೂರ್ ನೀಡಿದ ರಿಯಾಕ್ಷನ್ ವಿಡಿಯೋ ವೈರಲ್ ಆಗುತ್ತಿದೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತಿ ವೇಗವಾಗಿ ಅರ್ಧ ಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ದಾಖಲೆ ಸರ್ಫರಾಜ್ ನಿರ್ಮಿಸಿದ್ದಾರೆ. ಈ ಮೈಲಿಗಲ್ಲನ್ನು ತಲುಪಿದ ನಂತರ, ಅವರು ತಮ್ಮ ತಂದೆ ಮತ್ತು ಹೆಂಡತಿ ಕುಳಿತಿದ್ದ ಸ್ಟ್ಯಾಂಡ್‌ನ ಕಡೆಗೆ ತಮ್ಮ ಬ್ಯಾಟ್ ಅನ್ನು ಎತ್ತಿ ತೋರಿಸಿದರು. ತನ್ನ ಪತಿ ಚೊಚ್ಚಲ ಟೆಸ್ಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದನ್ನು ನೋಡಿ, ರೋಮಾನಾ ಜಹೂರ್ ಪ್ರೇಕ್ಷಕ ಗ್ಯಾಲರಿಯಿಂದಲೇ ಸರ್ಫರಾಜ್‌ಗೆ ಫ್ಲೈಯಿಂಗ್ ಕಿಸ್‌ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?

ಸರ್ಫರಾಜ್ ಅರ್ಧಶತಕ ಗಳಿಸಿದಾಗ ರೋಮಾನಾ ಜಹೂರ್ ರಿಯಾಕ್ಷನ್ ವಿಡಿಯೋ:

ಸರ್ಫರಾಜ್ ಖಾನ್ ಕೇವಲ 66 ಎಸೆತಗಳಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 62 ರನ್ ಗಳಿಸಿದರು. ರವೀಂದ್ರ ಜಡೇಜಾ ಅವರ ತಪ್ಪಾದ ಕರೆಯಿಂದ ದುರದೃಷ್ಟವಶಾತ್ ನಾನ್ ಸ್ಟ್ರೈಕರ್​ನಲ್ಲಿ ರನೌಟ್ ಆಗಬೇಕಾಯಿತು. ಈ ಮೂಲಕ 65 ವರ್ಷಗಳ ನಂತರ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಅರ್ಧಶತಕ ಗಳಿಸಿದ ನಂತರ ರನೌಟ್ ಆದ ಮೊದಲ ಭಾರತೀಯರಾದರು.

ಪಂದ್ಯ ನೋಡಲು ಬರಲ್ಲ ಎಂದಿದ್ದ ಸರ್ಫರಾಜ್ ತಂದೆ: ಬರುವಂತೆ ಮಾಡಿದ್ದು ಸೂರ್ಯಕುಮಾರ್

ಮೊದಲ ದಿನದ ಆರಂಭದಲ್ಲಿ ಭಾರತವು 33 ರನ್‌ಗಳಿಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು 200 ರನ್‌ಗಳ ಜೊತೆಯಾಟ ಸಹಾಯ ಮಾಡಿತು. ರೋಹಿತ್ 131 ರನ್ ಗಳಿಸಿ ಔಟಾದರೆ, ಜಡೇಜಾ ಕೂಡ ದಿನದ ಅಂತ್ಯದ ವೇಳೆಗೆ ಶತಕ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್