IND vs ENG 3rd Test: ಪಂದ್ಯ ನೋಡಲು ಬರಲ್ಲ ಎಂದಿದ್ದ ಸರ್ಫರಾಜ್ ತಂದೆ: ಬರುವಂತೆ ಮಾಡಿದ್ದು ಸೂರ್ಯಕುಮಾರ್

Naushad and Suryakumar Yadav Message: ಸೂರ್ಯಕುಮಾರ್ ಯಾದವ್ ಇಲ್ಲದಿದ್ದರೆ, ಬಹುಶಃ ಸರ್ಫರಾಜ್ ಖಾನ್ ಅವರ ತಂದೆ ತಮ್ಮ ಮಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡುವಾಗ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ತೆಗೆದುಕೊಳ್ಳುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.

IND vs ENG 3rd Test: ಪಂದ್ಯ ನೋಡಲು ಬರಲ್ಲ ಎಂದಿದ್ದ ಸರ್ಫರಾಜ್ ತಂದೆ: ಬರುವಂತೆ ಮಾಡಿದ್ದು ಸೂರ್ಯಕುಮಾರ್
Sarfaraz Khan Father and Suryakumar Yadav
Follow us
Vinay Bhat
|

Updated on: Feb 16, 2024 | 7:51 AM

ರಾಜ್‌ಕೋಟ್‌ನಲ್ಲಿ ಶುರುವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯವು ಸರ್ಫರಾಜ್ ಖಾನ್ (Sarfaraz Khan) ಮತ್ತು ಅವರ ಕುಟುಂಬಕ್ಕೆ ಸ್ಮರಣೀಯವಾಗಿದೆ. ಸುದೀರ್ಘ ಕಾಯುವಿಕೆಯ ನಂತರ, ಸರ್ಫರಾಜ್ ಖಾನ್ ಅಂತಿಮವಾಗಿ ಟೀಮ್ ಇಂಡಿಯಾಕ್ಕೆ ಟೆಸ್ಟ್ ಕ್ರಿಕೆಟ್ ಮೂಲಕ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಚೊಚ್ಚಲ ಪಂದ್ಯದಲ್ಲಿ 62 ರನ್ ಗಳಿಸಿದರು. ಅವರ ಕುಟುಂಬದಿಂದ ಭಾವನಾತ್ಮಕ ಪ್ರತಿಕ್ರಿಯೆಯೂ ಕಂಡುಬಂದಿತು. ಅದರಲ್ಲೂ ಸರ್ಫರಾಜ್​ಗೆ ಟೆಸ್ಟ್ ಕ್ಯಾಪ್ ನೀಡುವಾಗ ಅವರ ಕುಟುಂಬ ಕಣ್ಣೀರು ಹಾಕಿತು.

ಆದರೆ, ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಇಲ್ಲದಿದ್ದರೆ, ಬಹುಶಃ ಸರ್ಫರಾಜ್ ಖಾನ್ ಅವರ ತಂದೆ ತಮ್ಮ ಮಗ ಟೆಸ್ಟ್ ಪದಾರ್ಪಣೆ ಮಾಡುವಾಗ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ತೆಗೆದುಕೊಳ್ಳುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ನಿರಂಜನ್ ಶಾ ಸ್ಟೇಡಿಯಂನಲ್ಲಿ ನೌಶಾದ್ ಖಾನ್ ಅವರು ಸರ್ಫರಾಜ್ ಅವರ ಪತ್ನಿಯೊಂದಿಗೆ ಹಾಜರಿದ್ದರು. ಮಗ ಭಾರತೀಯ ಕ್ಯಾಪ್ ತೊಟ್ಟಿದ್ದನ್ನು ನೋಡಿದ ನೌಶಾದ್ ಕಣ್ಣಲ್ಲಿ ನೀರು ಬಂದಿತ್ತು. ಪದಾರ್ಪಣೆ ಮಾಡಿದ ಸರ್ಫರಾಜ್ 62 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ರನೌಟ್ ಮಾಡಿದ ಜಡೇಜಾ ಬಗ್ಗೆ ಪಂದ್ಯದ ಬಳಿಕ ಸರ್ಫರಾಜ್ ಖಾನ್ ಏನು ಹೇಳಿದ್ರು ಗೊತ್ತೇ?

ನೌಶಾದ್​ಗೆ ಸೂರ್ಯಕುಮಾರ್ ಯಾದವ್ ಮೆಸೇಜ್

ನೌಶಾದ್ ಮೈದಾನದಕ್ಕೆ ಬಂದು ತನ್ನ ಮಗನ ಆಟ ನೋಡಬಾರದು ಎಂದು ತೀರ್ಮಾನಿಸಿದ್ದರಂತೆ. ಸ್ಟೇಡಿಯಂಗೆ ಬರಬಾರದು ಅಂದುಕೊಂಡಿದ್ದರಂತೆ. ಆದರೆ, ಅವರ ಮನಸ್ಸು ಬದಲಾಗಲು ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು. ಸೂರ್ಯಕುಮಾರ್ ಅವರ ಸಂದೇಶವು ನನ್ನನ್ನು ರಾಜ್‌ಕೋಟ್‌ಗೆ ಬರುವಂತೆ ಮಾಡಿತು ಎಂದು ನೌಶಾದ್ ಪಂದ್ಯದ ವೇಳೆ ಬಹಿರಂಗಪಡಿಸಿದರು. ಸರ್ಫರಾಜ್ ಮೇಲೆ ಒತ್ತಡ ಬೀಳಬಹುದು ಎಂಬ ಕಾರಣಕ್ಕೆ ನಾನು ಬರುವುದಿಲ್ಲ ಎಂದು ಆರಂಭದಲ್ಲಿ ಅಂದುಕೊಂಡಿದ್ದೆ. ಆದರೆ ಸೂರ್ಯನ ಸಂದೇಶ ನನ್ನ ಹೃದಯವನ್ನು ಕರಗಿಸಿತು ಎಂದು ಅವರು ಹೇಳಿದರು.

sarfaraz khan Family

ಸರ್ಫರಾಜ್ ಖಾನ್ ಅವರ ಕುಟುಂಬ.

ಭಾರತದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ನನಗೆ ಮೆಸೇಜ್ ಮಾಡಿದ್ದರು. ”ನಿಮ್ಮ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ನನ್ನನ್ನು ನಂಬಿರಿ, ನಾನು ನನ್ನ ಟೆಸ್ಟ್‌ಗೆ ಪದಾರ್ಪಣೆ ಮಾಡಿ ನನ್ನ ಟೆಸ್ಟ್ ಕ್ಯಾಪ್ ಪಡೆಯುವಾಗ, ನನ್ನ ತಂದೆ ಮತ್ತು ತಾಯಿ ನನ್ನ ಹಿಂದೆ ನಿಂತಿದ್ದರು. ಈ ಕ್ಷಣ ಬಹಳ ವಿಶೇಷವಾಗಿತ್ತು. ಆ ಕ್ಷಣಗಳು ಮತ್ತೆ ಮತ್ತೆ ಬರುವುದಿಲ್ಲ. ಹಾಗಾಗಿ ನೀವು ಹೋಗಬೇಕೆಂದು ನಾನು ಸೂಚಿಸುತ್ತೇನೆ,” ಎಂದು ಸೂರ್ಯ ಅವರು ಸರ್ಫರಾಜ್ ತಂದೆಗೆ ಸಂದೇಶ ಕಳುಹಿಸಿದ್ದರಂತೆ.

ಪಾಕ್ ತಂಡದ ನಿರ್ದೇಶಕ ಹುದ್ದೆಯಿಂದ ಮೊಹಮ್ಮದ್ ಹಫೀಜ್ ವಜಾ..!

ಸರ್ಫರಾಜ್ ಅದ್ಭುತ ಇನ್ನಿಂಗ್ಸ್

ಈ ಸಂದೇಶವನ್ನು ಸ್ವೀಕರಿಸಿದ ನಂತರ ನೌಶಾದ್ ರಾಜ್ಕೋಟ್​​ಗೆ ಪ್ರಯಾಣಿಸಲು ತೀರ್ಮಾನಿಸಿದರಂತೆ. ಆರೋಗ್ಯ ಉತ್ತಮವಾಗಿರದಿದ್ದರೂ ಸೂರ್ಯನಿಂದ ಈ ಸಂದೇಶ ಬಂದ ನಂತರ ಮಾತ್ರೆ ತೆಗೆದುಕೊಂಡು ಮೈದಾನಕ್ಕೆ ಬಂದಿದ್ದರು. ಸರ್ಫರಾಜ್ ಖಾನ್ ಟೆಸ್ಟ್ ಕ್ಯಾಪ್ ಪಡೆದಾಗ, ಅವರು ಅದನ್ನು ಮೊದಲು ತಮ್ಮ ತಂದೆಗೆ ತೋರಿಸಿದರು. ಸರ್ಫರಾಜ್ ತನ್ನ ಚೊಚ್ಚಲ ಪಂದ್ಯದಲ್ಲಿ 62 ರನ್‌ಗಳ ಇನ್ನಿಂಗ್ಸ್‌ ಆಡಿದರು. ಇದರಲ್ಲಿ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಸಹ ಹೊಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು