IND vs ENG 3rd Test, Day 2: ಎರಡನೇ ದಿನದಾಟ ಆರಂಭ: ಜಡೇಜಾ ಮೇಲೆ ಎಲ್ಲರ ಕಣ್ಣು
India vs England 3rd Test: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ನ ಎರಡನೇ ದಿನದಾಟ ಆರಂಭವಾಗಿದೆ. ಶತಕ ಸಿಡಿಸಿರುವ ರವೀಂದ್ರ ಜಡೇಜಾ ಇಂದು ಮಹತ್ವದ ಪಾತ್ರವಹಿಸಲಿದ್ದು, 400 ಕ್ಕೂ ಅಧಿಕ ರನ್ ಕಲೆಹಾಕುವ ಗುರಿಹೊಂದಿದೆ. ಧ್ರುವ್ ಜುರೆಲ್ ಇನ್ನಷ್ಟೆ ಬ್ಯಾಟಿಂಗ್ಗೆ ಬರಬೇಕಾಗಿರುವ ಕಾರಣ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ನ ಎರಡನೇ ದಿನದಾಟ ಆರಂಭವಾಗಿದೆ. ಟೀಮ್ ಇಂಡಿಯಾ ಪರ ಶತಕ ಸಿಡಿಸಿರುವ ರವೀಂದ್ರ ಜಡೇಜಾ ಹಾಗೂ ಮತ್ತೊಂದೆಡೆ ಕುಲ್ದೀಪ್ ಯಾದವ್ ಕ್ರೀಸ್ನಲ್ಲಿದ್ದಾರೆ. 326 ರನ್ಗಳೊಂದಿಗೆ ದ್ವಿತೀಯ ದಿನದ ಆಟ ಆರಂಭಿಸಿರುವ ಭಾರತ 400+ ರನ್ಗಳತ್ತ ಚಿತ್ತ ನೆಟ್ಟಿದೆ. ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತ್ತು. ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಶತಕ ಸಿಡಿಸಿದರೆ, ಸರ್ಫರಾಜ್ ಖಾನ್ ಅರ್ಧಶತಕದ ಕೊಡುಗೆ ನೀಡಿದ್ದರು.
ಮೊದಲ ದಿನದಾಟದ ಹೈಲೇಟ್ಸ್:
ಮೊದಲ ದಿನ ಭಾರತದ ಪರವಾಗಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಶತಕ ಗಳಿಸಿದರು. ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಸರ್ಫರಾಜ್ ಖಾನ್ ಕೂಡ ಅರ್ಧಶತಕ ಗಳಿಸಿದರು. ಇಂಗ್ಲೆಂಡ್ ಬೌಲರ್ಗಳಲ್ಲಿ ಮಾರ್ಕ್ ವುಡ್ 3 ಮತ್ತು ಟಾಮ್ ಹಾರ್ಟ್ಲಿ ಒಂದು ವಿಕೆಟ್ ಪಡೆದರು. ಭಾರತ ಪರ ಪದಾರ್ಪಣೆ ಮಾಡಿರುವ ಮತ್ತೋರ್ವ ಆಟಗಾರ ಧ್ರುವ್ ಜುರೆಲ್ ಇನ್ನಷ್ಟೆ ಬ್ಯಾಟಿಂಗ್ಗೆ ಬರಬೇಕಿದೆ. ಇವರ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.
ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದಾಗ ಸರ್ಫರಾಜ್ ಪತ್ನಿ ಏನು ಮಾಡಿದ್ರು ಗೊತ್ತೇ?
ಜಡೇಜಾ 3000 ರನ್:
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 3000 ರನ್ ಪೂರೈಸಿದರು. 70 ಪಂದ್ಯಗಳಲ್ಲಿ 102 ಇನ್ನಿಂಗ್ಸ್ಗಳಲ್ಲಿ 3000 ರನ್ ಗಳಿಸಿದ ಸಾಧನೆ ಮಾಡಿದರು. ಈವರೆಗೆ ಅವರು 20 ಅರ್ಧಶತಕ ಮತ್ತು 4 ಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೆ ಭಾರತ ಪರ ಚೊಚ್ಚಲ ಟೆಸ್ಟ್ ಆಡುತ್ತಿರುವ ಸರ್ಫರಾಜ್ ಖಾನ್ 48 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ರೋಹಿತ್-ಜಡೇಜಾ ಜೊತೆಯಾಟ:
ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ 204 ರನ್ಗಳ ಜೊತೆಯಾಟ ಆಡಿದರು. ಈ ಜೊತೆಯಾಟ ರೋಹಿತ್ ವಿಕೆಟ್ನೊಂದಿಗೆ ಮುರಿದುಬಿತ್ತು. 131 ರನ್ಗಳಿದ್ದಾಗ ರೋಹಿತ್ ಮಾರ್ಕ್ ವುಡ್ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 10, ಶುಭ್ಮನ್ ಗಿಲ್ 0 ಮತ್ತು ಪಾಟಿದಾರ್ 5 ರನ್ ಗಳಿಸಿ ನಿರ್ಗಮಿಸಿದ್ದರು.
ಪಂದ್ಯ ನೋಡಲು ಬರಲ್ಲ ಎಂದಿದ್ದ ಸರ್ಫರಾಜ್ ತಂದೆ: ಬರುವಂತೆ ಮಾಡಿದ್ದು ಸೂರ್ಯಕುಮಾರ್
ಭಾರತ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್ ಪ್ಲೇಯಿಂಗ್ XI:
ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ