Ravindra Jadeja: ಐದನೇ ಸೋಲು: ಪಂದ್ಯ ಮುಗಿದ ಬಳಿಕ ರವೀಂದ್ರ ಜಡೇಜಾ ಹೇಳಿದ್ದೇನು ನೋಡಿ

GT vs CSK Post Match Precentation: ಗುಜರಾತ್ ಟೈಟಾನ್ಸ್ ತಂಡದ ಡೇವಿಡ್ ಮಿಲ್ಲರ್ ಹಾಗೂ ನಾಯಕ ರಶೀದ್ ಖಾನ್ ಅಬ್ಬರಕ್ಕೆ ತತ್ತರಿಸಿದ ಸಿಎಸ್​ಕೆ ಲೀಗ್‌ನಲ್ಲಿ 5ನೇ ಸೋಲು ಕಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಚೆನ್ನೈ ನಾಯಕ ರವೀಂದ್ರ ಜಡೇಜಾ ಏನು ಹೇಳಿದರು ಕೇಳಿ.

Ravindra Jadeja: ಐದನೇ ಸೋಲು: ಪಂದ್ಯ ಮುಗಿದ ಬಳಿಕ ರವೀಂದ್ರ ಜಡೇಜಾ ಹೇಳಿದ್ದೇನು ನೋಡಿ
ನಾಯಕತ್ವದ ಒತ್ತಡವನ್ನು ನಿಭಾಯಿಸಲು ಜಡೇಜಾಗೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಇದು ಜಡೇಜಾ ಅವರ ವೈಯಕ್ತಿಕ ಪ್ರದರ್ಶನದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ ಜಡೇಜಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ರೀತಿ ಜಡೇಜಾಗೆ ತೀವ್ರ ನೋವುಂಟು ಮಾಡಿದೆ ಎಂದು ವರದಿಯಾಗಿದೆ.
Follow us
TV9 Web
| Updated By: Vinay Bhat

Updated on: Apr 18, 2022 | 9:48 AM

ಎಂಎಸ್ ಧೋನಿ (MS Dhoni) ನಾಯಕತ್ವ ತ್ಯಜಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​​ಗೆ ಅದೃಷ್ಟ ಕೈಹಿಡಿಯುತ್ತಿಲ್ಲ. ಆರಂಭದಲ್ಲಿ ಸತತ ನಾಲ್ಕು ಸೋಲು ಕಂಡು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಸಿಎಸ್​​ಕೆ ತನ್ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಜಯ ಸಾಧಿಸಿತು. ಆದರೀಗ ಮತ್ತೆ ಸೋಲಿನತ್ತ ಮುಖ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ (GT vs CSK) ಎದುರು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಡೇವಿಡ್ ಮಿಲ್ಲರ್ (94*ರನ್, 51 ಎಸೆತ, 8ಬೌಂಡರಿ, 6 ಸಿಕ್ಸರ್) ಹಾಗೂ ಹಂಗಾಮಿ ನಾಯಕ ರಶೀದ್ ಖಾನ್ (40ರನ್, 21 ಎಸೆತ, 2 ಬೌಂಡರಿ, 3 ಸಿಕ್ಸರ್) ಅಬ್ಬರಕ್ಕೆ ತತ್ತರಿಸಿದ ಸಿಎಸ್​ಕೆ ಲೀಗ್‌ನಲ್ಲಿ 5ನೇ ಸೋಲು ಕಂಡಿದೆ. ಇದೀಗ ಹಾಲಿ ಚಾಂಪಿಯನ್ನರ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಚೆನ್ನೈ ನಾಯಕ ರವೀಂದ್ರ ಜಡೇಜಾ (Ravindra Jadeja) ಏನು ಹೇಳಿದರು ಕೇಳಿ.

“ಬೌಲಿಂಗ್​ನಲ್ಲಿ ನಮ್ಮ ಆರಂಭ ಅತ್ಯುತ್ತಮವಾಗಿತ್ತು. ಮೊದಲ ಆರು ಓವರ್​ಗಳಲ್ಲಿ ಬೌಲರ್​ಗಳು ಉತ್ತಮವಾಗಿ ಚೆಂಡನ್ನು ಎಸೆದರು. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ನಾವು ಇನ್ನು ಕೆಲ ಸಮಯ ಕ್ರೀಸ್​ನಲ್ಲಿ ಇರಬೇಕಿತ್ತು. ಚೆಂಡು ತಿರುಗುತ್ತಿತ್ತು. ನಾವು ಅಂದುಕೊಂಡ ಯೋಜನೆಯಂತೆ ಕೊನೆಯ ಐದು ಓವರ್​​ಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಕ್ರಿಸ್ ಜೋರ್ಡನ್ ಯಾರ್ಕರ್ ಹಾಕಲು ಪ್ರಯತ್ನಿಸುತ್ತಿದ್ದರು. ಆದರೆ, ಅದು ಸರಿಯಾಗಿ ಫಲಿತಾಂಶ ನೀಡಲಿಲ್ಲ. ಟಿ20 ಕ್ರಿಕೆಟ್​ನ ಬ್ಯೂಟಿ ಎಂದರೆ ಇದೇ ಅಲ್ವಾ,” ಎಂದು ಹೇಳುವ ಮೂಲಕ ಜಡೇಜಾ ಹೆcfcu ಮಾತಾಡದೆ ಹಿಂದೆ ಸರಿದರು.

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ತಂಡದವನ್ನು ಮುನ್ನಡೆಸಿ ನಾಯಕನಾಗಿ ಮೊದಲ ಗೆಲುವು ಕಂಡರು. ಇವರು ಮಾತನಾಡಿ, “ಐಪಿಎಲ್​ನಲ್ಲಿ ಇದೊಂದು ಅದ್ಭುತ ಅನುಭವ. ತಂಡವನ್ನು ಮುನ್ನಡೆಸಿದ್ದು ಕನಸು ನನಸಾದಂತಿದೆ. 7 ಓವರ್​ಗಳಲ್ಲಿ 90 ರನ್​ಗಳನ್ನು ಬೆನ್ನಟ್ಟುವ ಪ್ಲಾನ್ ನಮ್ಮದಾಗಿತ್ತು. ಕೊನೆಯ ಹಂತದ ವರೆಗೂ ಪಂದ್ಯವನ್ನು ಕೊಂಡೊಯ್ಯುವುದು ನಮ್ಮ ಯೋಜನೆಯಾಗಿತ್ತು. ಮೊದಲ ಐದು ಪಂದ್ಯಗಳಲ್ಲಿ ನಾನು ಬ್ಯಾಟಿಂಗ್ ಮಾಡಿರಲಿಲ್ಲ. ಇದರ ಬಗ್ಗೆ ಚರ್ಚೆ ನಡೆಸಿ ನಾನು ಜವಾಬ್ದಾರಿ ತೆಗೆದುಕೊಂಡೆ. ನಮ್ಮಲ್ಲಿ ಇಬ್ಬರು ಬ್ಯಾಟ್ಸ್​​ಮನ್​ಗಳು ದೊಡ್ಡ ರನ್ ಕಲೆಹಾಕಬೇಕಿತ್ತು. ನಾನು ಮಿಲ್ಲರ್ ಜೊತೆ ದೊಡ್ಡ ಹೊಡೆತ ಹೊಡೆಯುವ ಬಗ್ಗೆ ಮಾತಾಡಿದೆ. ಅದರಂತೆ ನಾನು ಮುಂದೆ ಬಂದು ಬಿರುಸಿನ ಆಟಕ್ಕೆ ಮುಂದಾದೆ,” ಎಂದು ಗೇಮ್ ಪ್ಲಾನ್ ಅನ್ನು ವಿವರಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​​ಕೆಗೆ ಉತ್ತಮ ಆರಂಭ ಸಿಗಲಿಲ್ಲ. ಉತ್ತಪ್ಪ (3) ಇಲ್ಲಿ ಸಂಪೂರ್ಣ ವೈಫ‌ಲ್ಯ ಕಂಡರು. ಮೊಯಿನ್‌ ಅಲಿ ಒಂದೇ ರನ್‌ ಮಾಡಿ ವಾಪಸಾದರು. ಆದರೆ ರುತುರಾಜ್‌ ಗಾಯಕ್ವಾಡ್‌ ಮತ್ತು ಅಂಬಾಟಿ ರಾಯುಡು ಈ ಬಾರಿ ಕೈಬಿಡಲಿಲ್ಲ. ಈ ಜೋಡಿ 56 ಎಸೆತಗಳಿಂದ 92 ರನ್‌ ಪೇರಿಸಿತು. 15ನೇ ಓವರ್‌ನಲ್ಲಿ ರಾಯುಡು (46) ಅವರನ್ನು ಔಟ್‌ ಮಾಡುವ ಮೂಲಕ ಜೋಸೆಫ್ ಗುಜರಾತ್‌ಗೆ ಅಗತ್ಯವಾದ ಬ್ರೇಕ್‌ ಒದಗಿಸಿದರು. ಗಾಯಕ್ವಾಡ್‌ 48 ಎಸೆತಗಳಿಂದ 73 ರನ್‌ ಬಾರಿಸಿದರು. ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.

ಟಾರ್ಗೆಟ್‌ ಬೆನ್ನತ್ತಿದ ಗುಜರಾತ್‌ ಟೈಟಾನ್ಸ್‌ ನೀರಸ ಆರಂಭ ಪಡೆಯಿತು. ಶುಭ್ಮನ್‌ ಗಿಲ್‌(0) ಮೊದಲ ಬಾಲ್‌ನಲ್ಲೇ ಔಟಾದರೆ, ವಿಜಯ್‌ ಶಂಕರ್‌(0) ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಗುಜರಾತ್‌ 87ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಮಿಲ್ಲರ್ (ಔಟಾಗದೆ 94; 51 ಎಸೆತ, 8 ಬೌಂಡರಿ, 6 ಸಿಕ್ಸರ್) ಮತ್ತು ಹಂಗಾಮಿ ನಾಯಕ ರಶೀದ್ ಖಾನ್ (40; 21 ಎ, 2 ಬೌಂ, 3 ಸಿ) ಸ್ಫೋಟಕ 70 ರನ್‌ಗಳನ್ನು ಸೇರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವು ತಂದುಕೊಟ್ಟರು.

RR vs KKR: ಐಪಿಎಲ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಜಸ್ತಾನ್-ಕೋಲ್ಕತ್ತಾ

GT vs CSK: ಸಿಎಸ್​ಕೆ ಗೆಲುವಿಗೆ ಕಿಲ್ಲರ್ ಆದ ಮಿಲ್ಲರ್: ಈ ಥ್ರಿಲ್ಲರ್ ಪಂದ್ಯ ಹೇಗಿತ್ತು ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್