Ravindra Jadeja: ಸೋಲಿನ ಬಳಿಕ ದುಃಖದಿಂದ ಆತ ತಂಡದಲ್ಲಿ ಇರಬೇಕಿತ್ತು ಎಂದ ಜಡೇಜಾ: ಯಾರು ಗೊತ್ತೇ?

| Updated By: Vinay Bhat

Updated on: Apr 04, 2022 | 10:48 AM

CSK Missing Deepak Chahar: ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುವ ಮೂಲಕ ಸಿಎಸ್‌ಕೆ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆರಂಭಿಕ ಮೂರು ಪಂದ್ಯಗಳಲ್ಲೂ ಸೋಲಿನ ರುಚಿ ಕಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರವೀಂದ್ರ ಜಡೇಜಾ (Ravindra Jadeja) ಕೆಲವೊಂದು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

Ravindra Jadeja: ಸೋಲಿನ ಬಳಿಕ ದುಃಖದಿಂದ ಆತ ತಂಡದಲ್ಲಿ ಇರಬೇಕಿತ್ತು ಎಂದ ಜಡೇಜಾ: ಯಾರು ಗೊತ್ತೇ?
Jadeja post match presentation CSK vs PBKS
Follow us on

ಐಪಿಎಲ್ ಇತಿಹಾಸದಲ್ಲಿ ಕಂಡ ಅತ್ಯಂತ ಬಲಿಷ್ಠ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಪ್ರಮುಖವಾದದ್ದು. ಬಲಿಷ್ಠ ಆಟಗಾರರ ಜೊತೆ ಅನುಭವಿಗಳ ದಂಡೇ ಸಿಎಸ್​​ಕೆ ತಂಡದಲ್ಲಿದೆ. ಆದರೆ, ಈ ಬಾರಿ ಐಪಿಎಲ್ 2022 ರಲ್ಲಿ ಚೆನ್ನೈ ಪ್ರದರ್ಶನ ತೀರಾ ಕಳಪೆ ಆಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದು ರವೀಂದ್ರ ಜಡೇಜಾ ಆ ಪಟ್ಟ ತೊಟ್ಟರು. ಇದುವೇ ತಂಡಕ್ಕೆ ಪೆಟ್ಟು ಬಿದ್ದಿತು ಎಂಬುದು ಕೆಲವರ ಮಾತು. ಅದರಲ್ಲೂ ಪಂಜಾಬ್ ಕಿಂಗ್ಸ್​ ವಿರುದ್ಧ ಭಾನುವಾರ ಆಡಿದ ಪಂದ್ಯ ಸಿಎಸ್​ಕೆ (CSK vs PBKS) ಪಾಳಯದಲ್ಲಿ ಮತ್ತಷ್ಟು ತಲೆನೋವಾಗಿದೆ. ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ (60 ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್, 25ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಗೆ ಜಡೇಜಾ ಪಡೆ ತತ್ತರಿಸಿ ಹೋಯಿತು. ಸಿಎಸ್‌ಕೆ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆರಂಭಿಕ ಮೂರು ಪಂದ್ಯಗಳಲ್ಲೂ ಸೋಲಿನ ರುಚಿ ಕಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರವೀಂದ್ರ ಜಡೇಜಾ (Ravindra Jadeja) ಕೆಲವೊಂದು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

“ಪವರ್ ಪ್ಲೇಯಲ್ಲಿ ನಾವು ಸಾಕಷ್ಟು ವಿಕೆಟ್​ಗಳನ್ನು ಕಳೆದುಕೊಂಡೆವು. ನಾವು ಮೊದಲ ಎಸೆತದಿಂದಲೇ ಆ ಹಿಡಿತವನ್ನು ಸಾಧಿಸಲು ವಿಫಲರಾದೆವು. ಮೂರು ಸೋಲುಗಳನ್ನು ಕಂಡಿದ್ದೇವೆ. ಈ ಎಲ್ಲ ತಪ್ಪುಗಳನ್ನು ಸರಿಪಡಿಸಿ ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್​ಬ್ಯಾಕ್ ಮಾಡಬೇಕಿದೆ. ರುತುರಾಜ್ ಗಾಯಕ್ವಾಡ್​ಗೆ ಆತ್ಮಿವಿಶ್ವಾಸ ತುಂಬಬೇಕು. ಅವರನ್ನು ಫಾರ್ಮ್​​ಗೆ ಮರಳಲು ಸಹಾಯ ಮಾಡಬೇಕು. ಗಾಯಕ್ವಾಡ್ ಅತ್ಯುತ್ತಮ ಪ್ಲೇಯರ್ ಎಂಬುದು ನಮಗೆಲ್ಲ ತಿಳಿದಿದೆ. ಅವರು ಅತ್ಯುತ್ತಮವಾಗಿ ಕಮ್​ಬ್ಯಾಕ್ ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ. ಶಿವಂ ದುಬೆ ಬ್ಯಾಟಿಂಗ್ ಶ್ರೇಷ್ಠವಾಗಿದೆ. ನಮ್ಮ ತಂಡದಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿರುವುದು ಕೀ ಪಾಯಿಂಟ್ ಆಗಿದೆ. ಖಂಡಿತವಾಗಿಯೂ ನಾವು ಶ್ರಮ ವಹಿಸಿ ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಜಡೇಜಾ ಹೇಳಿದ್ದಾರೆ.

ಇನ್ನು ದೀಪಕ್ ಚಹರ್ ಅನುಪಸ್ಥಿತಿ ಬಗ್ಗೆ ಮಾತನಾಡಿದ ಜಡೇಜಾ, “ಪವರ್ ಪ್ಲೇಯಲ್ಲಿ ವಿಕೆಟ್ ಕಬಳಿಸುವುದು ಬಹುಮುಖ್ಯ. ಬೌಲಿಂಗ್ ವಿಭಾಗದಲ್ಲಿ 2-3 ವಿಕೆಟ್ ಅನ್ನು ನೀವು ಪವರ್ ಪ್ಲೇಯಲ್ಲಿ ಪಡೆಯಲೇಬೇಕು. ಇದಕ್ಕಾಗಿ ನಾವು ಖಂಡಿತವಾಗಿಯೂ ದೀಪಕ್ ಚಹರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆತ ತಂಡದಲ್ಲಿರಬೇಕಿತ್ತು. ಆದಷ್ಟು ಬೇಗ ಅವರು ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮೂಲಕ ವಿಕೆಟ್ ಕೀಳುವ ಸಾಮರ್ಥ್ಯ ಅವರಿಗಿದೆ. ಚಹರ್ ತಂಡ ಸೇರಿಕೊಂಡರೆ ನಮ್ಮ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ,” ಎಂಬುದು ಜಡೇಜಾ ಮಾತು.

ಇನ್ನು ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, ನಮಗೆ 5-7 ರನ್​ ಕಡಿಮೆ ಆಯಿತು ಎಂದು ಅಂದುಕೊಂಡೆವು. ಆದರೆ, 180 ರನ್ ಸುಲಭ ಟಾರ್ಗೆಟ್ ಅಲ್ಲ ಎಂಬ ಅರಿವಿತ್ತು. ಪ್ರಮುಖವಾಗಿ ಹೊಸ ಬಾಲ್​ನಲ್ಲಿ ವಿಕೆಟ್ ಅನ್ನು ಪಡೆದುಕೊಂಡರೆ ಪಂದ್ಯ ನಮ್ಮ ಕಡೆ ವಾಲಲಿದೆ ಎಂಬುದು ತಿಳಿದಿತ್ತು. ಲಿಯಾಮ್ ಲಿವಿಂಗ್​ಸ್ಟೋನ್ ಬಗ್ಗೆ ಹೇಳಲು ಮಾತುಗಳೇ ಇಲ್ಲ. ಅವರು ಬ್ಯಾಟಿಂಗ್ ಮಾಡುತ್ತಿರುವಾಗ ನಾವೆಲ್ಲ ಉಸಿರು ಬಿಗಿ ಹಿಡಿದು ನೋಡುತ್ತಿದ್ದೆವು. ಅವರ ಕೆಲ ಹೊಡೆತಗಳಲ್ಲಿ ಅಮೋಘವಾಗಿತ್ತು. ವೈಭವ್ ಕೂಡ ಅತ್ಯುತ್ತಮ ಆಟಗಾರ. ಅವರೊಬ್ಬ ಸ್ಪೆಷಲ್ ಪ್ಲೇಯರ್,” ಎಂದು ಮಯಾಂಕ್ ಹೇಳಿದ್ದಾರೆ.

IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?

CSK vs PBKS: ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್​ಕೆ ಸಜ್ಜು?