ವೆಸ್ಟ್ ಇಂಡೀಸ್ (WI vs IND) ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಶುಭಾರಂಭ ಮಾಡಿದೆ. ಆದರೆ ಈ ಸರಣಿಗೆ ಉಪನಾಯರಾಗಿ ಆಯ್ಕೆಯಾಗಿದ್ದ ರವೀಂದ್ರ ಜಡೇಜಾ (Ravindra Jadeja) ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಗಾಯಗೊಂಡಿರುವ ಕಾರಣ ಸ್ಟಾರ್ ಆಲ್ ರೌಂಡರ್ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಬೇಕಾಯಿತು. ಅಲ್ಲದೆ ಜಡೇಜಾ ಬದಲಿಗೆ 28ರ ಹರೆಯದ ಆಲ್ ರೌಂಡರ್ ಆಟಗಾರ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇನ್ನು ಉಪನಾಯಕನ ಅನುಪಸ್ಥಿತಿಯಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಜವಾಬ್ದಾರಿಯನ್ನು ನಿಭಾಯಿಸಿದ್ದರು.
ಇದೀಗ ಇದೇ ಪ್ಲೇಯಿಂಗ್ ಇಲೆವೆನ್ 2ನೇ ಪಂದ್ಯಕ್ಕೂ ಮುಂದುವರೆಯಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅಂದರೆ ಮೊಣಕಾಲಿಗೆ ಗಾಯ ಮಾಡಿಕೊಂಡಿರುವ ರವೀಂದ್ರ ಜಡೇಜಾ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಸದ್ಯ ಟೀಮ್ ಇಂಡಿಯಾ ವೈದ್ಯಕೀಯ ತಂಡ ಜಡೇಜಾ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಹೀಗಾಗಿಯೇ ಮೂರನೇ ಏಕದಿನ ಪಂದ್ಯದಲ್ಲಿ ಜಡೇಜಾ ಭಾಗವಹಿಸುತ್ತಾರೋ ಇಲ್ಲವೋ ಎಂಬುದ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಜಡೇಜಾ ಅವರ ಗಾಯದ ರಿಪೋರ್ಟ್ ಸಿಗುವುದು ಜುಲೈ 27 ಕ್ಕೆ ಎಂದು ಹೇಳಲಾಗಿದೆ.
ಅಂದರೆ ಭಾರತ ತಂಡವು ಜುಲೈ 27 ರಂದು ಮೂರನೇ ಏಕದಿನ ಪಂದ್ಯವಾಡಲಿದೆ. ಅದಕ್ಕೂ ಮುನ್ನ ಮೊಣಕಾಲಿನ ಸಮಸ್ಯೆಯಲ್ಲಿ ಚೇತರಿಕೆ ಕಂಡು ಬಂದರೆ ಮಾತ್ರ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಆಡಲಿದ್ದಾರೆ.
ಆದರೆ ಮುಂಬರುವ ಸರಣಿಗಳ ದೃಷ್ಟಿಯಿಂದ ಜಡೇಜಾ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಭಾರತ ತಂಡವು ಏಕದಿನ ಸರಣಿ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ದ 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಾದ ಬಳಿಕ ಏಷ್ಯಾಕಪ್ ಟೂರ್ನಿ ಕೂಡ ನಡೆಯಲಿದೆ. ಹೀಗಾಗಿ ಪ್ರಮುಖ ಆಟಗಾರನ ಗಾಯವು ಉಲ್ಬಣಗೊಳ್ಳದಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚರಿಕೆವಹಿಸಲಿದೆ.
ಇದಕ್ಕೂ ಮುನ್ನ ಗಾಯದ ಕಾರಣ ಜಡೇಜಾ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ ದೀರ್ಘ ವಿಶ್ರಾಂತಿಯ ಬಳಿಕ ಇಂಗ್ಲೆಂಡ್ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಟಿ20 ವಿಶ್ವಕಪ್ಗಾಗಿ ಸಿದ್ದತೆಗಳನ್ನು ಶುರು ಮಾಡಿಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ಗಂಭೀರ ಗಾಯವಾದರೆ ಪ್ರಮುಖ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಸಣ್ಣ ಪುಟ್ಟ ಗಾಯಗಳಾದರೆ ಆಟಗಾರರಿಗೆ ವಿಶ್ರಾಂತಿ ನೀಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ರವೀಂದ್ರ ಜಡೇಜಾ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ.
ಭಾರತ ಏಕದಿನ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಏಕದಿನ ಸರಣಿಯ ವೇಳಾಪಟ್ಟಿ:
ಟಿ20 ಸರಣಿ ವೇಳಾಪಟ್ಟಿ:
Published On - 12:25 pm, Sat, 23 July 22