AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB: ಆರ್​ಸಿಬಿ ತಂಡಕ್ಕೆ ಹೊಸ ನಿರ್ದೇಶಕರ ನೇಮಕ..!

RCB: ಈ ಮಾಹಿತಿಯನ್ನು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫ್ರಾಂಚೈಸ್, ಇಂಗ್ಲೆಂಡ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮೊ ಬೊಬಾಟ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ.

RCB: ಆರ್​ಸಿಬಿ ತಂಡಕ್ಕೆ ಹೊಸ ನಿರ್ದೇಶಕರ ನೇಮಕ..!
ಮೊ ಬೊಬಾಟ್
ಪೃಥ್ವಿಶಂಕರ
|

Updated on:Sep 29, 2023 | 3:35 PM

Share

2024ರ ಐಪಿಎಲ್ (IPL 2024) ಆರಂಭಕ್ಕೂ ಮುನ್ನ ತಂಡದಲ್ಲಿ ಹಲವು ಪ್ರಮುಖ ಬದಲಾವಣೆಗಳಿಗೆ ಕೈಹಾಕಿರುವ ಆರ್​ಸಿಬಿ (RCB) ಫ್ರಾಂಚೈಸ್ ಇದೀಗ ತಂಡಕ್ಕೆ ನೂತನ ನಿರ್ದೇಶಕರನ್ನು ನೇಮಕ ಮಾಡಿದೆ. ಈ ಮಾಹಿತಿಯನ್ನು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫ್ರಾಂಚೈಸ್, ಇಂಗ್ಲೆಂಡ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮೊ ಬೊಬಾಟ್ (Mo Bobat) ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದೆ. ಈ ಹಿಂದೆ ಮೈಕ್ ಹೆಸ್ಸನ್ (Mike Hesson) ನಿರ್ವಹಿಸಿದ್ದ ಈ ಪಾತ್ರವನ್ನು ಇನ್ನು ಮುಂದೆ ಬೊಬಾಟ್ ನಿರ್ವಹಿಸಲಿದ್ದಾರೆ. ಪ್ರಸ್ತುತ ಇಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೊಬಾಬ್ ಮುಂದಿನ ವರ್ಷದ ಆರಂಭದಲ್ಲಿ ಇಸಿಬಿಯಲ್ಲಿ ತಮ್ಮ ಸ್ಥಾನವನ್ನು ತೊರೆದು ಆರ್​ಸಿಬಿ ಸೇರಿಕೊಳ್ಳಲಿದ್ದಾರೆ.

ಇಸಿಬಿ ತಂಡದಲ್ಲಿ ಅದ್ಭುತ ಸಾಧನೆ

ಈ ಬಗ್ಗೆ ತನ್ನ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಫ್ರಾಂಚೈಸ್, ‘ಆರ್‌ಸಿಬಿ ತಂಡದ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ನೇಮಿಸಲಾಗಿದೆ. 2019 ರಿಂದ ಇಂಗ್ಲೆಂಡ್ ಕ್ರಿಕೆಟ್‌ ತಂಡದ ಪ್ರದರ್ಶನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಬೊಬಾಟ್, 12 ವರ್ಷಗಳ ಕಾಲ ಇಸಿಬಿ ಸೆಟಪ್‌ನ ಭಾಗವಾಗಿದ್ದಾರೆ. ಈ ಸಮಯದಲ್ಲಿ ಇಂಗ್ಲೆಂಡ್ ಟಿ20 ಮತ್ತು ಏಕದಿನ ವಿಶ್ವಕಪ್‌ಗಳನ್ನು ಎತ್ತಿಹಿಡಿದಿದೆ. ಅಲ್ಲದೆ ಬೊಬಾಟ್ ಅವರು, ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಆಂಡಿ ಫ್ಲವರ್ ಅವರೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಬರೆದಿದೆ.

RCB: ‘ನಿರಾಸೆ ತಂದಿದೆ’; ಆರ್​ಸಿಬಿಯಿಂದ ಹೊರಬಿದ್ದ ಕೂಡಲೇ ಮೌನ ಮುರಿದ ಮೈಕ್ ಹೆಸ್ಸನ್

ಸಂತಸ ವ್ಯಕ್ತಪಡಿಸಿದ ಪ್ರಥಮೇಶ್ ಮಿಶ್ರಾ

ಆರ್​ಸಿಬಿ ಚೇರ್ಮನ್ ಪ್ರಥಮೇಶ್ ಮಿಶ್ರಾ ಈ ಬಗ್ಗೆ ಮಾತನಾಡಿ, ‘ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಾಟ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಆರ್​ಸಿಬಿ ಯಾವಾಗಲೂ ಪ್ರದರ್ಶನ-ಆಧಾರಿತ ವಿಧಾನದ ಮೇಲೆ ಕೇಂದ್ರೀಕರಿಸಿದೆ. ಇಷ್ಟು ದಿನ ಇಂಗ್ಲೆಂಡ್ ತಂಡದಲ್ಲಿ ಈ ಪಾತ್ರ ನಿರ್ವಹಿಸಿರುವ ಬೊಬಾಟ್ ಅವರು ತಮ್ಮನ್ನು ತಾವು ಈಗಾಗಲೇ ಸಾಬೀತುಪಡಿಸಿದ್ದಾರೆ. ಪರಿಣತಿ ಮತ್ತು ವರ್ಷಗಳ ಅನುಭವದೊಂದಿಗೆ ಅವರು ಆರ್​ಸಿಬಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದಿದ್ದಾರೆ.

ಬೊಬಾಟ್ ಹೇಳಿದ್ದಿದು

ಇನ್ನು ಆರ್​ಸಿಬಿ ತಂಡಕ್ಕೆ ಸೇರಿದ ಬಳಿಕ ಮಾತನಾಡಿದ ಬೊಬಾಟ್, ‘ನಾನು ಆರ್​ಸಿಬಿ ತಂಡದವನ್ನು ಕ್ರಿಕೆಟ್ ನಿರ್ದೇಶಕನಾಗಿ ಸೇರಲು ಉತ್ಸುಕನಾಗಿದ್ದೇನೆ. ಆರ್ಸಿಬಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಅವರಿಗೆ ಸೇವೆ ಸಲ್ಲಿಸಲು ಇದು ದೊಡ್ಡ ಗೌರವವಾಗಿದೆ. ಆಂಡಿ ಫ್ಲವರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Fri, 29 September 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ