ಅನಾರೋಗ್ಯದ ಕಾರಣ ನೀಡಿ ಕಚೇರಿಗೆ ಚಕ್ಕರ್ ಹಾಕುವವರು ಅನೇಕರಿದ್ದಾರೆ. ಈ ರೀತಿಯ ಸಂದರ್ಭಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪ್ಪಿ ತಪ್ಪಿ ಬಾಸ್ ಕೈಗೆ ಸಿಕ್ಕರೆ ಕಥೆ ಮುಗಿದಂತೆ. ಅದೇ ರೀತಿ ಯುವತಿಯೊಬ್ಬರು ಕುಟುಂಬದಲ್ಲಿ ಎಮರ್ಜೆನ್ಸಿ ಆಗಿದೆ ಎಂದು ಹೇಳಿ ಕಚೇರಿಯಿಂದ ಮನೆಗೆ ಹೋಗಿದ್ದರು. ಅಸಲಿಗೆ ಮನೆಯಲ್ಲಿ ಯಾರಿಗೆ ಏನೂ ಆಗಿರಲಿಲ್ಲ. ಅವರು ಐಪಿಎಲ್ (IPL) ನೋಡೋಕೆ ಹೋಗಿದ್ದರು. ಅವರ ದುರಾದೃಷ್ಟ ಎಂದರೆ ಟಿವಿಯಲ್ಲಿ ಅವರು ಬಾಸ್ ಕಣ್ಣಿಗೆ ಬಿದ್ದಿದ್ದರು. ಹೀಗೋಂದು ಮಜವಾದ ಪ್ರಸಂಗ ಇತ್ತೀಚೆಗೆ ನಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ಪಂದ್ಯ ಇತ್ತೀಚೆಗೆ ನಡೆದಿತ್ತು. ಈ ಪಂದ್ಯ ನೋಡಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀಸಿದಿದ್ದರು. ಬಾಸ್ಗೆ ಸುಳ್ಳು ಕಾರಣ ಹೇಳಿ ಅವರು ಸ್ಟೇಡಿಯಂ ಹೋಗಿದ್ದರು. ಆದರೆ, ಬಾಸ್ಗೆ ಅವರು ಟಿವಿ ಕ್ಯಾಮೆರಾದಲ್ಲಿ ಕಾಣಿಸಿದ್ದರು. ಇದರಿಂದ ಅವರ ರಜೆಗೆ ಅಸಲಿ ಕಾರಣ ಸಿಕ್ಕಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಹಿಸ್ಟರಿ ಬರೆದ ಹಿಟ್ಮ್ಯಾನ್
ಪಂದ್ಯ ಮುಗಿದ ಬಳಿಕ ಬಾಸ್ ಕಡೆಯಿಂದ ನೇಹಾಗೆ ಸಂದೇಶ ಬಂದಿದೆ. ‘ನೀವು ಆರ್ಸಿಬಿ ಅಭಿಮಾನಿಯೇ’ ಎಂದು ಕೇಳಲಾಯಿತು. ಇದಕ್ಕೆ ನೇಹಾ ಹೌದು ಎಂದು ಉತ್ತರಿಸಿದ್ದು ಅಲ್ಲದೆ, ಏಕೆ ಎಂದು ಪ್ರಶ್ನಿಸಿದ್ದರು. ‘ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್ ಬಿಟ್ಟಾಗ ನೀವು ಬೇಸರದಲ್ಲಿ ಕಾಣಿಸಿಕೊಂಡಿರಿ’ ಎಂದಿದ್ದಾರೆ ಬಾಸ್. ಇದನ್ನು ಕೇಳಿ ನೇಹಾಗೆ ಒಂದು ಕ್ಷಣ ಶಾಕ್ ಆಗಿದೆ. ಆದರೆ, ಬಾಸ್ ಇದನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿಲ್ಲ ಅನ್ನೋದು ಖುಷಿಯ ವಿಚಾರ.
ಸದ್ಯ ಈ ಪೋಸ್ಟ್ಗೆ 8 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಈ ರೀಲ್ಸ್ ನೋಡಿದ್ದಾರೆ. ‘ಮ್ಯಾನೇಜರ್ ಸಾಹೇಬ್ರೇ ನೀವು ಕಚೇರಿಯಲ್ಲಿ ಮ್ಯಾಚ್ ನೋಡ್ತಿದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದೊಡ್ಡ ಬ್ಯಾಡ್ ಲಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ಕ್ಯಾಮೆರಾಗೆ ಕಾಣಿಸಿಕೊಳ್ಳಬೇಕು ಎಂದಿರುತ್ತದೆ. ನಿಮಗೆ ಹಾಗೆ ಇರಲಿಲ್ಲ. ಆದರೂ ಕ್ಯಾಮೆರಾ ನಿಮ್ಮನ್ನು ಹುಡುಕಿ ಬಂದಿದೆ. ಎಂತಹ ದುರಾದೃಷ್ಟ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Wed, 10 April 24