ಕೊನೆಯ ಓವರ್ನಲ್ಲಿ ಮೂರು ಕ್ಯಾಚ್ ಡ್ರಾಪ್, ಎರಡು ರನ್ಔಟ್ ಮಿಸ್; ಆದರೂ ಗೆದ್ದ ಹೈದರಾಬಾದ್
ನೆಯ ಓವರ್ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್ಔಟ್ ಮಿಸ್ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್ಎಚ್ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್ನಲ್ಲಿ ನೀಡಿದ್ದು ಬರೋಬ್ಬರಿ 26 ರನ್ಗಳು.
ಸನ್ ರೈಸರ್ಸ್ ಹೈದರಾಬಾದ್ (SRH) ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಕೊನೆಯ ಓವರ್ನಲ್ಲಿ ಮೂರು ಕ್ಯಾಚ್ ಡ್ರಾಪ್ ಮಾಡಿ, ಎರಡು ರನ್ಔಟ್ ಮಿಸ್ ಮಾಡಿತು ಹೈದರಾಬಾದ್ ತಂಡ. ಆದಾಗ್ಯೂ ಎಸ್ಎಚ್ಆರ್ ತಂಡ ಗೆಲುವಿನ ನಗು ಬೀರಿತು. ಜಯದೇವ್ ಉನಾದ್ಕಟ್ ಅವರು ಕೊನೆಯ ಓವರ್ನಲ್ಲಿ ನೀಡಿದ್ದು ಬರೋಬ್ಬರಿ 26 ರನ್ಗಳು. ಕೊನೆಯ ಓವರ್ನಲ್ಲಿ ಏನೆಲ್ಲ ಡ್ರಾಮಾ ನಡೆಯಿತು ಎನ್ನುವ ವಿವರ ಇಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಆರಂಭದಲ್ಲಿ ಮುಗ್ಗರಿಸಿತು. ಹೆಡ್ 15 ಬಾಲ್ಗೆ 21 ರನ್ ಬಾರಿಸಿದರು. ಮಕ್ರಮ್ ಡಕ್ಗೆ ಔಟ್ ಆದರು. ಅಭಿಷೇಕ್ ಶರ್ಮಾ 16 ರನ್ ಗಳಿಸಿದರು. ನಿತಿಶ್ ರೆಡ್ಡಿ ತಂಡಕ್ಕೆ ಆಸರೆ ಆದರು. 37 ಬಾಲ್ಗೆ 64 ರನ್ ಗಳಿಸಿದರು. ಕೊನೆಗೆ 182 ರನ್ ಗಳಿಸಿದ ಹೈದರಾಬಾದ್ ತಂಡ, 183 ರನ್ಗಳ ಟಾರ್ಗೆಟ್ ನೀಡಿತು. ಬೃಹತ್ ಮೊತ್ತ ಬೆನ್ನು ಹತ್ತಿದ ಪಂಜಾಬ್ ಕೂಡ ಕಳಪೆ ಆರಂಭ ಕಂಡಿತತು. ಧವನ್ 14 ರನ್ ಗಳಿಸಿ ಔಟ್ ಆದರೆ, ಬ್ರೇಸ್ಟೋ ಸೊನ್ನೆ ಸುತ್ತಿದರು. ಸ್ಯಾಮ್ ಕರನ್, ರಾಜಾ ಕೂಡ ದೊಡ್ಡ ಮೊತ್ತ ಕಲೆ ಹಾಕಲಿಲ್ಲ. 19 ಓವರ್ಗಳು ಪೂರ್ಣಗೊಳ್ಳುವಾಗ ಪಂಜಾಬ್ ತಂಡ 154 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು.
So close, yet so far for Shashank and #PBKS 💔#IPLonJioCinema #TATAIPL #PBKSvSRH pic.twitter.com/F51V0OzroY
— JioCinema (@JioCinema) April 9, 2024
ಇದನ್ನೂ ಓದಿ: IPL 2024: ರಣರೋಚಕ ಹೋರಾಟದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ ರೋಚಕ ಜಯ
ಕೊನೆಯ ಓವರ್ನಲ್ಲಿ ಬೇಕಾಗಿದ್ದು 29 ರನ್ಗಳು. ಉನಾದ್ಕಟ್ ಅವರು ಬೌಲಿಂಗ್ ಇಳಿದರು. ಮೊದಲ ಬಾಲ್ ಕ್ಯಾಚ್ ಬಿಟ್ಟಿದ್ದರಿಂದ ಸಿಕ್ಸ್ ಹೋಯಿತು. ನಂತರ ಎರಡು ವೈಡ್ಗಳನ್ನು ಹಾಕಿದರು ಉನಾದ್ಕಟ್. ಎರಡನೇ ಬಾಲ್ಗೆ ಹೊಡೆದ ಶಾಟ್ ಕೂಡ ಸಿಕ್ಸ್ ಗಡಿಯಲ್ಲಿ ಫೀಲ್ಡರ್ನ ಕೈಗೆ ಸಿಗದೆ ಸಿಕ್ಸ್ ಹೋಯಿತು. ನಂತರ ಮೂರು ಹಾಗೂ ನಾಲ್ಕನೇ ಬಾಲ್ಗೆ ತಲಾ ಎರಡು ರನ್ಗಳು ಬಂದವು. ನಾಲ್ಕನೇ ಬಾಲ್ನಲ್ಲಿ ಸುಲಭ ಕ್ಯಾಚ್ನ ಕೈ ಚೆಲ್ಲಲಾಯಿತು. ಅಷ್ಟೇ ಅಲ್ಲ, ಮೂರು ಹಾಗೂ ನಾಲ್ಕನೇ ಬಾಲ್ನಲ್ಲಿ ರನೌಟ್ ಅವಕಾಶ ಇತ್ತು. ಅದು ಕೂಡ ಕೈತಪ್ಪಿತು. ನಂತರ ಮತ್ತೊಂದು ವೈಡ್ ಬಾಲ್ ಆಯಿತು. ಐದನೇ ಬಾಲ್ಗೆ ಒಂದು ರನ್ ಹಾಗೂ ಆರನೇ ಬಾಲ್ಗೆ ಸಿಕ್ಸ್ ಬಂತು. ಈ ಮೂಲಕ ಹೈದರಾಬಾದ್ 2 ರನ್ಗಳಿಂದ ಗೆಲುವು ಕಂಡಿತು. ಅಶುತೋಷ್ ಶರ್ಮಾ ಅವರು 15 ಬಾಲ್ಗೆ 33 ರನ್ ಹೊಡೆದರೂ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ