ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೈದಾನದ ಒಳಗೆ ಮತ್ತು ಹೊರಗೆ #PLAYBOLD ತತ್ವವನ್ನು ಮುಂದುವರೆಸಿದೆ. ಪರಿಸ್ಥಿತಿಗಳಿಗೆ ಸವಾಲೆಸೆಯುವುದು, ಎಂದಿಗೂ ಹಿಂದೆ ಸರಿಯಬೇಡಿ ಮತ್ತು ಮುನ್ನುಗ್ಗುತ್ತಾ ಇರಿ! ಇದು RCB ಯ ಘೋಷವಾಕ್ಯ. ಇದೀಗ ಇದನ್ನೇ ವಿಡಿಯೋ ಗೀತೆಯಾಗಿ ಅಭಿಮಾನಿಗಳ ಮುಂದಿಟ್ಟಿದ್ದಾರೆ. IPL 2022 ರ ಮೆಗಾ ಹರಾಜಿನ ಮೊದಲು, RCB ಸಂಗೀತ ವೀಡಿಯೊ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಬಹುತೇಕ ಆಟಗಾರರು ಕಾಣಿಸಿಕೊಂಡಿದ್ದಾರೆ.
ವಿ ಆರ್ ಚಾಲೆಂಜರ್ಸ್ ಹೆಸರಿನಲ್ಲಿ ಮೂಡಿ ಬಂದಿರುವ ಈ ವಿಡಿಯೋಗೆ ಚಾಹಲ್ ಪತ್ನಿ ಧನಶ್ರೀ ವರ್ಮಾನಿರ್ದೇಶನ ಮತ್ತು ನೃತ್ಯ ಸಂಯೋಜನೆ ಮಾಡಿರುವುದು ವಿಶೇಷ. ಹಾಗೆಯೇ, ಈ ಹಾಡಿನ ಸಂಗೀತ ನಿರ್ದೇಶಕ ಹರೀಶ್ ಉಪಾಧ್ಯಾಯ. RCB ಯ ಈ ಹೊಸ ವೀಡಿಯೊದಲ್ಲಿವಿರಾಟ್ ಕೊಹ್ಲಿಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಇತರ ಕೆಲವು ಕ್ರಿಕೆಟಿಗರು ಸಹ ಕಾಣಿಸಿಕೊಂಡಿದ್ದಾರೆ.
1 ನಿಮಿಷ 38 ಸೆಕೆಂಡ್ ಅವಧಿಯ ಮ್ಯೂಸಿಕ್ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಅದರಲ್ಲೂ ಇತ್ತೀಚೆಗೆ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿರುವ ಎಬಿ ಡಿವಿಲಿಯರ್ಸ್ ಈ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದೆ. ಈ ವಿಡಿಯೋ ರಿಲೀಸ್ ಬೆನ್ನಲ್ಲೇ ಇದೀಗ ಎಬಿಡಿ ಮತ್ತೆ ಆರ್ಸಿಬಿ ಸಿಬ್ಬಂದಿ ವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯೊಂದು ಕೂಡ ಹುಟ್ಟಿಕೊಂಡಿದೆ.
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ನಡುವಣ ವ್ಯತ್ಯಾಸ ತಿಳಿಸಿದ ಗೌತಮ್ ಗಂಭೀರ್
(RCB launches star studded music video)