AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Predicted Playing XI: ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್: ಮತ್ತೊಬ್ಬ ಆಟಗಾರ ಪದಾರ್ಪಣೆ?

Bangalore vs Mumbai, IPL 2021: ಆರಂಭಿಕರಾಗಿ ಯಶಸ್ಸು ಸಾಧಿಸಿರುವ ಕೊಹ್ಲಿ-ಪಡಿಕ್ಕಲ್ ಜೋಡಿ ತಂಡಕ್ಕೆ ಮತ್ತೊಮ್ಮೆ ಭರ್ಜರಿ ಆರಂಭ ಒದಗಿಸಬೇಕಿದೆ. ಮೂರನೇ ಕ್ರಮಾಂಕದಲ್ಲಿ ಹೊಸ ಆಟಗಾರನನ್ನು ಆರ್​ಸಿಬಿ ಕಣಕ್ಕಿಳಿಸುವ ಪ್ಲ್ಯಾನ್ ಮಾಡಬಹುದು.

RCB Predicted Playing XI: ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್: ಮತ್ತೊಬ್ಬ ಆಟಗಾರ ಪದಾರ್ಪಣೆ?
RCB
TV9 Web
| Updated By: Vinay Bhat|

Updated on: Sep 26, 2021 | 11:11 AM

Share

ಐಪಿಎಲ್ 2021ರ (IPL 2021) 39ನೇ ಪಂದ್ಯದಲ್ಲಿಂದು ದುಬೈನ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (RCB vs MI) ತಂಡ ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಹ್ಯಾಟ್ರಿಕ್ ಸೋಲಿನ ಪಾರಾಗಲು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆರ್​ಸಿಬಿ ಒಟ್ಟು ಈ ಬಾರಿ ಒಂಬತ್ತು ಪಂದ್ಯಗಳನ್ನು ಆಡಿದ್ದು ಈ ಪೈಕಿ ಐದರಲ್ಲಿ ಗೆಲುವು ಕಂಡರೆ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಬಾರಿ ಯುಎಇನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ ಸೋಲು ಅನುಭವಿಸಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಆರ್​ಸಿಬಿಗೆ ಇದೊಂದು ಬಿಗ್‌ ಟೆಸ್ಟ್‌ ಆಗಿದ್ದು, ಗೆಲುವಿನ ಖಾತೆ ತೆರೆಯಲು ಪ್ಲೇಯಿಂಗ್ XI (RCB Playing XI) ನಲ್ಲಿ ಬದಲಾವಣೆ ಮಾಡುವ ಅಂದಾಜಿದೆ.

ಹಿಂದಿನ ಸಿಎಸ್‌ಕೆ ಎದುರಿನ ಹಣಾಹಣಿಯಲ್ಲಿ ಕೊಹ್ಲಿ-ದೇವದತ್ ಜೋಡಿ ಮೊದಲ ವಿಕೆಟ್‌ಗೆ 111 ರನ್ ಕಲೆಹಾಕಿದ್ದರೂ ಇದೇ ಲಯ ಮುಂದುವರಿಸಲು ಆರ್‌ಸಿಬಿ ಮಧ್ಯಮ ಕ್ರಮಾಂಕ ವಿಫಲವಾಗಿತ್ತು. ಸ್ಟಾರ್ ಬ್ಯಾಟರ್​ಗಳಾದ ಎಬಿ ಡಿವಿಲಿಯರ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಕೈಕೊಡುತ್ತಿರುವುದು ತಂಡಕ್ಕೆ ಹಿನ್ನಡೆ ತಂದಿದೆ. ಅಲ್ಲದೆ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಟಿಮ್ ಡೇವಿಡ್ ನಿರಾಸೆ ಮೂಡಿಸಿದ್ದಾರೆ. ವಿಕೆಟ್ ಕೀಪರ್ ಕೆಎಸ್ ಭರತ್ ಅವರಿಂದ ತಂಡಕ್ಕೆ ಯಾವುದೇ ಕೊಡುಗೆ ಸಿಗುತ್ತಿಲ್ಲ. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ಖಚಿತ.

ಆರಂಭಿಕರಾಗಿ ಯಶಸ್ಸು ಸಾಧಿಸಿರುವ ಕೊಹ್ಲಿ-ಪಡಿಕ್ಕಲ್ ಜೋಡಿ ತಂಡಕ್ಕೆ ಮತ್ತೊಮ್ಮೆ ಭರ್ಜರಿ ಆರಂಭ ಒದಗಿಸಬೇಕಿದೆ. ಮೂರನೇ ಕ್ರಮಾಂಕದಲ್ಲಿ ಹೊಸ ಆಟಗಾರನನ್ನು ಆರ್​ಸಿಬಿ ಕಣಕ್ಕಿಳಿಸುವ ಪ್ಲ್ಯಾನ್ ಮಾಡಬಹುದು. ಕೆಎಸ್ ಭರತ್ ಬದಲು ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ಕೇರಳ ಪ್ಲೇಯರ್ ಮೊಹಮ್ಮದ್ ಅಜರುದ್ದೀನ್ ಇಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ತಂಡಕ್ಕೆ ಆಸರೆಯಾಗಬೇಕಿದೆ. ಟಿಮ್ ಡೇವಿಡ್​ಗೆ ಮತ್ತೊಂದು ಅವಕಾಶ ನೀಡಬಹುದು. ಶ್ರೀಲಂಕಾ ಸ್ಪಿನ್ನರ್ ವಾನಿಂದು ಹಸರಂಗ ಜಾದು ಯುಎಇನಲ್ಲಿ ನಡೆಯುತ್ತಿಲ್ಲ. ಸಿಕ್ಕ 2 ಅವಕಾಶಗಳನ್ನು ಕೈಚೆಲ್ಲಿರುವ ಹಸರಂಗ ಬದಲಿಗೆ ಕೈಲ್ ಜೇಮಿಸನ್ ತಂಡಕ್ಕೆ ವಾಪಸಾಗಬಹುದು. ಸಿಎಸ್‌ಕೆ ಎದುರು ನಿರಾಸೆ ಮೂಡಿಸಿದ ನವದೀಪ್ ಸೈನಿ ಬದಲಿಗೆ ಸ್ಪಿನ್ನರ್ ಶಾಬಾಜ್ ಅಹ್ಮದ್‌ಗೆ ಮಣೆ ಹಾಕಬಹುದು.

ಉಳಿದಂತೆ ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 28 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಪಂದ್ಯಗಳಲ್ಲಿ ಗೆದ್ದಿದೆ. ಹೀಗೆ ಕೆಲವು ಬದಲಾವಣೆಯೊಂದಿಗೆ ಆರ್​ಸಿಬಿ ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭವವಿದೆ. ಅರಬ್ ರಾಷ್ಟ್ರದಲ್ಲಿ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪ್ಲೇಆಫ್ ಹಂತಕ್ಕೇರುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ.

KL Rahul: ಪಡಿಕ್ಕಲ್ ಅಲ್ಲ: ಆರ್​ಸಿಬಿ ಮುಂದಿನ ನಾಯಕ ಈ ಕನ್ನಡಿಗ ಎಂದ ರಾಯಲ್ ಚಾಲೆಂಜರ್ಸ್ ಆಟಗಾರ: ಯಾರು ಗೊತ್ತಾ?

IPL 2021 Teams Points Table: ಟೂರ್ನಿಯಿಂದ ಹೊರಬಿದ್ದ ಹೈದರಾಬಾದ್, ಪ್ಲೇ ಆಫ್​ಗೆ ಡೆಲ್ಲಿ: ಪಾಯಿಂಟ್ ಟೇಬಲ್​ನಲ್ಲಾಗಿದೆ ಬದಲಾವಣೆ

(RCB Playing 11: Royal Challengers Bangalore vs Mumbai Indians 2021 IPL Today Match Playing 11 Head to Head)

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ