
ಇಂಡಿಯನ್ ಪ್ರೀಮಿಯರ್ ಲೀಗ್ 2024 ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ಆತಿಥ್ಯದೊಂದಿಗೆ ಚಾಲನೆ ಪಡೆಯಲಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಆರ್‌ಸಿಬಿ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಐಪಿಎಲ್ 2024 ರ ಹರಾಜಿಗು ಮುನ್ನ ಕೆಲವು ದೊಡ್ಡ ಬದಲಾವಣೆ ಮಾಡಿತು. ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಮತ್ತು ವನಿಂದು ಹಸರಂಗ ಅವರನ್ನು ಬಿಡುಗಡೆ ಮಾಡಿದರು. ಹರಾಜಿನಲ್ಲಿ ಅಲ್ಜಾರಿ ಜೋಸೆಫ್, ಟಾಮ್ ಕರ್ರಾನ್ ಮತ್ತು ಲಾಕಿ ಫರ್ಗುಸನ್ ಸೇರಿದಂತೆ ತಂಡವು ಕೆಲವು ಬೌಲರ್‌ಗಳನ್ನು ಖರೀದಿಸಿದರೂ ಸಹ, ಬೌಲಿಂಗ್ ವಿಭಾಗ ಬಲಿಷ್ಠವಾಗಿರುವಂತೆ ಗೋಚರಿಸುತ್ತಿಲ್ಲ.
ಏತನ್ಮಧ್ಯೆ, ಆರ್‌ಸಿಬಿ ಮತ್ತೊಮ್ಮೆ ತಮ್ಮ ಸ್ಟಾರ್-ಸ್ಟಡ್ ಬ್ಯಾಟಿಂಗ್ ಲೈನ್ಅಪ್ ಮೇಲೆ ಭರವಸೆ ಇಟ್ಟಿದೆ. ಬೌಲಿಂಗ್‌ನಲ್ಲಿನ ಲೋಪದೋಷಗಳನ್ನು ಸರಪಡಿಸಿಕೊಳ್ಳಲು ಆರ್‌ಸಿಬಿ ತಮ್ಮ ತಂಡದ ಸಂಯೋಜನೆ ಯೋಚನೆ ಮಾಡಿ ರೂಪಿಸಬೇಕು. ಆಡುವ XI ಅನ್ನು ಸಮತೋಲನಗೊಳಿಸಲು ಕ್ಯಾಮರಾನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಆಲ್-ರೌಂಡ್ ಸಾಮರ್ಥ್ಯಗಳನ್ನು ಬಳಸಿಕೊಳ್ಳಬಹುದು. CSK ವಿರುದ್ಧದ ಆರಂಭಿಕ ಪಂದ್ಯಕ್ಕೆ ಆರ್ಸಿಬಿಯ ಪ್ಲೇಯಿಂಗ್ XI ಹೇಗಿರಬಹುದು ಎಂಬುದನ್ನು ನೋಡೋಣ.
ಇಂದು ಆರ್‌ಸಿಬಿ ಗೆದ್ದರೆ ಸ್ಮೃತಿ ಪಡೆಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತೇ?
ಕಳೆದ ಋತುವಿನಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ಜೋಡಿ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದರು. ಆದಾಗ್ಯೂ, ಈ ಬಾರಿ ಕೆಲ ಬದಲಾವಣೆ ಮಾಡಬಹುದು. ಫಾಫ್ ಜೊತೆ ಗ್ರೀನ್ ಇನ್ನಿಂಗ್ಸ್ ತೆರೆಯಬಹುದು. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನಂತರದ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು. ಗ್ಲೆನ್ ಮ್ಯಾಕ್ಸ್‌ವೆಲ್ 5 ನೇ ಸ್ಥಾನದಲ್ಲಿ ಆಡಬೇಕು, ನಂತರದ ಸಾಲಿನಲ್ಲಿ ಮಹಿಪಾಲ್ ಲೊಮ್ರೋರ್ ಮತ್ತು ದಿನೇಶ್ ಕಾರ್ತಿಕ್.
ಆರ್‌ಸಿಬಿ ಆಡುವ XI ನಲ್ಲಿ ಲೊಮ್ರೋರ್ ಮತ್ತು ಅನುಜ್ ರಾವತ್ ಎರಡು ಆಯ್ಕೆ ಇದೆ. ಹಾಗೆಯೆ ಸುಯಶ್ ಪ್ರಭುದೇಸಾಯಿ ಕೂಡ ಇದ್ದಾರೆ. ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಲಿದ್ದಾರೆ. ಆರ್‌ಸಿಬಿ ವಿದೇಶಿ ವೇಗಿಗಳಿಗೆ ಅಲ್ಜಾರಿ ಜೋಸೆಫ್ ಮತ್ತು ಲಾಕಿ ಫರ್ಗುಸನ್ ನಡುವೆ ಒಬ್ಬರನ್ನು ಆರಿಸಬೇಕಾಗುತ್ತದೆ. ಜೋಸೆಫ್‌ಗೆ 11.50 ಕೋಟಿ ಪಾವತಿಸಿದ ನಂತರ, ಆರ್‌ಸಿಬಿ ಆರಂಭಿಕ ಪಂದ್ಯಗಳಲ್ಲಿ ಇವರಿಗೆ ಅವಕಾಶ ಕೊಡಬಹುದು.
ಒಂದೇ ಕೈಯಲ್ಲಿ ಸಿಕ್ಸರ್, ಹೆಲಿಕಾಪ್ಟರ್ ಶಾಟ್: ಸಿಎಸ್ಕೆ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಧೋನಿ ಸ್ಫೋಟಕ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕಾಗಿ ಆಡಿದ ಆಕಾಶ್ ದೀಪ್ ಮೇಲೆ ತುಂಬಾ ನಿರೀಕ್ಷೆಯಿದೆ. ಆದಕಾರಣ ಯಶ್ ದಯಾಲ್‌ಗಿಂತ ಅವರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಕರ್ಣ್ ಶರ್ಮಾ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದಾರೆ.
ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮೆರಾನ್ ಗ್ರೀನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್.
ಆರ್‌ಸಿಬಿ ಸಂಪೂರ್ಣ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Sun, 17 March 24