ಐಪಿಎಲ್ ಸೀಸನ್ 15 ಆರಂಭಕ್ಕೆ (Ipl 2022 Schedule) ದಿನಗಣನೆ ಶುರುವಾಗಿದೆ. ಮುಂದಿನ ತಿಂಗಳಾಂತ್ಯದಲ್ಲಿ ಐಪಿಎಲ್ 2022 ಚಾಲನೆ ದೊರೆಯುವುದು ಬಹುತೇಕ ಖಚಿತವಾಗಿದೆ. ಆದರೆ ಅತ್ತ ಆಸ್ಟ್ರೇಲಿಯಾ (Australia vs Pakistan) ತಂಡವು ಇದೇ ಅವಧಿಯಲ್ಲಿ ಪಾಕಿಸ್ತಾನ್ ವಿರುದ್ದ ಸರಣಿ ಆಡಲು ತೆರಳಿದೆ. ಈ ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಸೀಮಿತ ಓವರ್ಗಳ ಸರಣಿಗಾಗಿ ಆಯ್ಕೆ ಮಾಡಲಾದ ಆಸ್ಟ್ರೇಲಿಯಾ ತಂಡದಲ್ಲಿ RCB ಆಟಗಾರ ಜೇಸನ್ ಬೆಹ್ರೆನ್ಡ್ರಾರ್ಫ್ ಸ್ಥಾನ ಪಡೆದಿದ್ದಾರೆ. ಇನ್ನು ಈ ಸರಣಿಯಿಂದ ಆರ್ಸಿಬಿ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಜೋಶ್ ಹ್ಯಾಝಲ್ವುಡ್ (Josh Hazelwood) ವಿಶ್ರಾಂತಿ ಪಡೆದಿದ್ದಾರೆ.
ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಸರಣಿ ಏಪ್ರಿಲ್ 6 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ತಂಡದಲ್ಲಿರುವ ಜೇಸನ್ ಬೆಹ್ರೆನ್ಡ್ರಾರ್ಫ್ ಆರ್ಸಿಬಿ (RCB) ತಂಡದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ. ಇನ್ನು ತಂಡದಿಂದ ಹೊರಗುಳಿದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಅವರಿಗೆ ಐಪಿಎಲ್ನಲ್ಲಿ ಭಾಗವಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡುವುದು ಅನುಮಾನ.
ಏಕೆಂದರೆ ವಿಶ್ರಾಂತಿಯ ಕಾರಣ ಸರಣಿಯಿಂದ ಹೊರಗುಳಿದಿರುವ ಆಟಗಾರರು ಪಾಕ್ ವಿರುದ್ದ (Australia vs Pakistan) ಸರಣಿ ಮುಕ್ತಾಯದ ಬಳಿಕವಷ್ಟೇ ವಿದೇಶಿ ಲೀಗ್ನಲ್ಲಿ ಭಾಗವಹಿಸಬಹುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ (CA) ಸ್ಪಷ್ಟಪಡಿಸಿದೆ. ಅಂದರೆ ವಿಶ್ರಾಂತಿಯ ನೆಪವೊಡ್ಡಿ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿರುವ ಆಟಗಾರರನ್ನು ಸರಣಿ ಮುಗಿಯುವವರೆಗೆ ಯಾವುದೇ ಲೀಗ್ನಲ್ಲೂ ಭಾಗವಹಿಸದಂತೆ ನಿರ್ಬಂಧಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.
ಹೀಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಕೂಡ ಆಸ್ಟ್ರೇಲಿಯಾ ಸರಣಿ ಮುಗಿಯುವವರೆಗೆ ಯಾವುದೇ ಲೀಗ್ನಲ್ಲಿ ಭಾಗವಹಿಸಲು ಅನುಮತಿ ಸಿಗುವುದು ಡೌಟ್. ಹೀಗಾಗಿ ಈ ಆಟಗಾರರು ಏಪ್ರಿಲ್ 6 ರ ಬಳಿಕ ಐಪಿಎಲ್ನಲ್ಲಿ (IPL 2022) ಕಾಣಿಸಿಕೊಳ್ಳಬಹುದಾಗಿದೆ. ಅದರಂತೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಆರ್ಸಿಬಿ ತಂಡದ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಆಸ್ಟ್ರೇಲಿಯಾ ತಂಡದಲ್ಲಿರುವ ಜೇಸನ್ ಬೆಹ್ರೆನ್ಡ್ರಾರ್ಫ್ ಏಪ್ರಿಲ್ 6 ರ ಬಳಿಕ ಭಾರತಕ್ಕೆ ಆಗಮಿಸಿದರೂ 5 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 11 ರ ಬಳಿಕವಷ್ಟೇ ಆರ್ಸಿಬಿ (RCB) ತಂಡವನ್ನು ಕೂಡಿಕೊಳ್ಳಬಹುದು. ಹೀಗಾಗಿ ಆರ್ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯಾ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆನ್ಡ್ರಾರ್ಫ್ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಬಹುದು.
RCB ತಂಡ ( IPL 2022 RCB Full Squad): ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಝಲ್ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಮಹಿಪಾಲ್ ಲೊಮ್ರೊರ್, ಶೆರ್ಫೇನ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್, ವನಿಂದು ಹಸರಂಗ
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(RCB star overseas players to miss first week of IPL 2022)