- Kannada News Photo gallery Cricket photos IPL 2022: Glenn Maxwell reveals the story behind ‘Big Show’ nickname
IPL 2022: ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಬಿಗ್ ಶೋ ಎಂಬ ಹೆಸರು ಯಾಕೆ ಬಂತು ಗೊತ್ತಾ?
IPL 2022 Glenn Maxwell: 15 ಪಂದ್ಯಗಳಲ್ಲಿ 513 ರನ್ ಕಲೆಹಾಕುವ ಮೂಲಕ ಆರ್ಸಿಬಿ ಪರ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ 21 ಸಿಕ್ಸ್ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿಯೇ ಈ ಬಾರಿ ಆರ್ಸಿಬಿ ತಂಡವು ಮ್ಯಾಕ್ಸ್ವೆಲ್ ಅವರನ್ನು ರಿಟೈನ್ ಮಾಡಿಕೊಂಡಿತು. ಅದರಂತೆ ಈ ಸಲ ಕೂಡ ಆರ್ಸಿಬಿ ತಂಡದಲ್ಲಿ ಬಿಗ್ ಶೋ ಅಬ್ಬರವನ್ನು ನಿರೀಕ್ಷಿಸಬಹುದು.
Updated on: Feb 24, 2022 | 3:49 PM

ಕ್ರಿಕೆಟ್ ಅಂಗಳದಲ್ಲಿ ಸ್ವಿಚ್ ಹಿಟ್, ರಿವರ್ಸ್ ಸ್ವೀಪ್ಗಳ ಮೂಲಕ ಚಿತ್ತಾರ ಮೂಡಿಸುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಾಮೆಂಟರಿ ಬಾಕ್ಸ್ನಲ್ಲಿ ಬಿಗ್ ಶೋ ಎಂದು ಕರೆಯುತ್ತಿರುವುದು ನೀವು ಕೂಡ ಕೇಳಿಸಿಕೊಂಡಿರುತ್ತೀರಿ.

ಸಾಮಾನ್ಯವಾಗಿ ಮ್ಯಾಕ್ಸ್ವೆಲ್ ಅಬ್ಬರ ಶುರುವಾಗುತ್ತಿದ್ದಂತೆ ಬಿಗ್ ಶೋ ಆರ್ಭಟ ಆರಂಭ ಎಂಬಿತ್ಯಾದಿ ರೀತಿಯಲ್ಲಿ ವೀಕ್ಷಕ ವಿವರಣೆಗಾರರು ವರ್ಣಿಸಲಾರಂಭಿಸುತ್ತಾರೆ. ಅಷ್ಟೇ ಅಲ್ಲದೆ ಗ್ಲೆನ್ ಮ್ಯಾಕ್ಸ್ವೆಲ್ ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕೂಡ ಬಿಗ್ ಶೋ ಎಂದು ಅಭಿಮಾನಿಗಳು ಕೂಡ ಕೂಗಲಾರಂಭಿಸುತ್ತಾರೆ. ಆದರೆ ಅಷ್ಟಕ್ಕೂ ಮ್ಯಾಕ್ಸ್ವೆಲ್ ಅವರನ್ನೇಕೆ ಬಿಗ್ ಶೋ ಎಂದು ಕರೆಯಲಾಗುತ್ತೆ ಎಂಬುದರ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ.

ಆದರೆ ತಮ್ಮನ್ನೇಕೆ ಬಿಗ್ ಶೋ ಎಂದು ಕರೆಯುತ್ತಾರೆ ಎಂಬುದನ್ನು ಖುದ್ದು ಗ್ಲೆನ್ ಮ್ಯಾಕ್ಸ್ವೆಲ್ ಬಹಿರಂಗಪಡಿಸಿದ್ದಾರೆ. ಆರ್ಸಿಬಿಯ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಮ್ಯಾಕ್ಸಿ, ಈ ಹೆಸರು ಬಂದಿದ್ದು 2012 ರಲ್ಲಿ ಎಂದು ತಿಳಿಸಿದ್ದಾರೆ. ಅಂದು ನಾನು ಪಾಕಿಸ್ತಾನದ ವಿರುದ್ದ ಸರಣಿ ಆಡಿದ್ದೆ. ಆ ಪಂದ್ಯದಲ್ಲಿ ಅಂದಿನ ನಂಬರ್ 1 ಸ್ಪಿನ್ನರ್ ಸಯೀದ್ ಅಜ್ಮಲ್ ಅವರ ಎಸೆತಗಳಿಗೆ ನಾನು ರಿವರ್ಸ್ ಸ್ವೀಪ್ ಶಾಟ್ಗಳ ಮೂಲಕ ಉತ್ತರ ನೀಡಿದ್ದೆ.

ಆದರೆ ತಮ್ಮನ್ನೇಕೆ ಬಿಗ್ ಶೋ ಎಂದು ಕರೆಯುತ್ತಾರೆ ಎಂಬುದನ್ನು ಖುದ್ದು ಗ್ಲೆನ್ ಮ್ಯಾಕ್ಸ್ವೆಲ್ ಬಹಿರಂಗಪಡಿಸಿದ್ದಾರೆ. ಆರ್ಸಿಬಿಯ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಮ್ಯಾಕ್ಸಿ, ಈ ಹೆಸರು ಬಂದಿದ್ದು 2012 ರಲ್ಲಿ ಎಂದು ತಿಳಿಸಿದ್ದಾರೆ. ಅಂದು ನಾನು ಪಾಕಿಸ್ತಾನದ ವಿರುದ್ದ ಸರಣಿ ಆಡಿದ್ದೆ. ಆ ಪಂದ್ಯದಲ್ಲಿ ಅಂದಿನ ನಂಬರ್ 1 ಸ್ಪಿನ್ನರ್ ಸಯೀದ್ ಅಜ್ಮಲ್ ಅವರ ಎಸೆತಗಳಿಗೆ ನಾನು ರಿವರ್ಸ್ ಸ್ವೀಪ್ ಶಾಟ್ಗಳ ಮೂಲಕ ಉತ್ತರ ನೀಡಿದ್ದೆ.

ಅಂದಿನ ನನ್ನ ಬ್ಯಾಟಿಂಗ್ ನೋಡಿ ಆಸ್ಟ್ರೇಲಿಯಾದ ಮಾಥ್ಯೂ ವೇಡ್ ಹಾಗೂ ಇಂಗ್ಲೆಂಡ್ನ ಕೆವಿನ್ ಪೀಟರ್ಸನ್ ಪ್ರಭಾವಕ್ಕೊಳಗಾಗಿದ್ದರು. ಆ ಬಳಿಕ ವೇಡ್ ಮತ್ತು ಪೀಟರ್ಸನ್ ನನ್ನನ್ನು 'ಬಿಗ್ ಶೋ' ಎಂದು ಕರೆಯಲು ಪ್ರಾರಂಭಿಸಿದರು. ಇದಾದ ಬಳಿಕ ಮೈಕೆಲ್ ಕ್ಲಾರ್ಕ್ ಈ ಹೆಸರನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದರು. ಇದರೊಂದಿಗೆ ಬಿಗ್ ಶೋ ಎಂಬ ಹೆಸರು ನನಗೆ ಶಾಶ್ವತವಾಯಿತು. ಇದಾಗ್ಯೂ ನಾನು ಈ ಹೆಸರು ಬೇಡ ಎಂದುಕೊಂಡಿದ್ದೆ. ಆದರೆ ಅದಾಗಲೇ ಮಾಧ್ಯಮಗಳು ಕೂಡ ನನ್ನ ಹೆಸರಿನೊಂದಿಗೆ ಬಿಗ್ ಶೋ ಅನ್ನು ಬಳಸಲು ಪ್ರಾರಂಭಿಸಿದವು. ಹೀಗಾಗಿ ಮ್ಯಾಕ್ಸ್ವೆಲ್ ಜೊತೆ ಬಿಗ್ ಶೋ ಕೂಡ ಮುಂದುವರೆಯಿತು ಎಂದು ಗ್ಲೆನ್ ಮ್ಯಾಕ್ಸ್ವೆಲ್ ತಿಳಿಸಿದ್ದಾರೆ.

ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ ಗ್ಲೆನ್ ಮ್ಯಾಕ್ಸ್ವೆಲ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ 513 ರನ್ ಕಲೆಹಾಕುವ ಮೂಲಕ ಆರ್ಸಿಬಿ ಪರ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ 21 ಸಿಕ್ಸ್ಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿಯೇ ಈ ಬಾರಿ ಆರ್ಸಿಬಿ ತಂಡವು ಮ್ಯಾಕ್ಸ್ವೆಲ್ ಅವರನ್ನು ರಿಟೈನ್ ಮಾಡಿಕೊಂಡಿತು. ಅದರಂತೆ ಈ ಸಲ ಕೂಡ ಆರ್ಸಿಬಿ ತಂಡದಲ್ಲಿ ಬಿಗ್ ಶೋ ಅಬ್ಬರವನ್ನು ನಿರೀಕ್ಷಿಸಬಹುದು.



















