IPL 2022: RCB ತಂಡಕ್ಕೆ ಹೊಸ ವೇಗಿಗಳ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Apr 11, 2022 | 2:30 PM

IPL 2022: RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್

IPL 2022: RCB ತಂಡಕ್ಕೆ ಹೊಸ ವೇಗಿಗಳ ಎಂಟ್ರಿ
RCB
Follow us on

IPL 2022: ಮುಂಬೈ ವಿರುದ್ದ ಗೆದ್ದ ಬೆನ್ನಲ್ಲೇ ಆರ್​ಸಿಬಿ (RCB) ತಂಡಕ್ಕೆ ಆಘಾತ ಎದುರಾಗಿತ್ತು. ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ (Harshal Patel)  ಬಯೋಬಬಲ್​ನಿಂದ ಹೊರನಡೆದಿದ್ದರು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿಯ ಗೆಲುವಿನ ಬಳಿಕ ಹರ್ಷಲ್ ಪಟೇಲ್ ವೈಯಕ್ತಿಕ ಕಾರಣಗಳಿಂದಾಗಿ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದ್ದರು. ಆ ಬಳಿಕ ಹರ್ಷಲ್ ಪಟೇಲ್ ಅವರ ಸಹೋದರಿ ನಿಧನ ಹೊಂದಿದ ಕಾರಣ ಪಂದ್ಯ ಮುಗಿದ ಬಳಿಕ ಆರ್​ಸಿಬಿ ತಂಡವನ್ನು ತೊರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂತು. ಇದರೊಂದಿಗೆ ಏಪ್ರಿಲ್ 12 ರಂದು ಸಿಎಸ್​ಕೆ ವಿರುದ್ಧ ಆಡಲಿರುವ ಪಂದ್ಯಕ್ಕೆ ಹರ್ಷಲ್ ಪಟೇಲ್ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿತ್ತು. ಇನ್ನು ಹರ್ಷಲ್ ಆರ್​ಸಿಬಿ ತಂಡ ಸೇರಿಕೊಂಡರೂ ಐಪಿಎಲ್ ನಿಯಮದ ಪ್ರಕಾರ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಿಎಸ್​ಕೆ ವಿರುದ್ದದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳುವುದಿಲ್ಲ. ಇತ್ತ ಪ್ರಮುಖ ವೇಗಿ ತಂಡದಿಂದ ಹೊರಬೀಳುತ್ತಿದ್ದಂತೆ ಆರ್​ಸಿಬಿ ತಂಡಕ್ಕೆ ಇಬ್ಬರು ವೇಗಿಗಳು ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಆಸೀಸ್ ವೇಗಿಗಳು ಎಂಬುದು ವಿಶೇಷ.

ಹೌದು, ಆರ್​ಸಿಬಿ ತಂಡದ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹ್ಯಾಝಲ್​ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ಇದೀಗ ತಂಡವನ್ನು ಸೇರಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ದದ ಸರಣಿಯ ವೇಳೆ ಆಸ್ಟ್ರೇಲಿಯಾ ತಂಡದಲ್ಲಿದ್ದ ಈ ಇಬ್ಬರು ವೇಗಿಗಳು ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಇಬ್ಬರು ಜೊತೆಯಾಗಿ ಕ್ವಾರಂಟೈನ್ ಮುಗಿಸಿ ತಂಡದ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ.

ಹೀಗಾಗಿ ಸಿಎಸ್​ಕೆ ವಿರುದ್ದದ ಪಂದ್ಯದಲ್ಲಿ ಜೋಶ್ ಹ್ಯಾಝಲ್​ವುಡ್ ಹಾಗೂ ಜೇಸನ್ ಇವರಿಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಅದರಲ್ಲೂ ಟಿ20 ಕ್ರಿಕೆಟ್​ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿರುವ ಜೋಶ್ ಹ್ಯಾಝಲ್​ವುಡ್​​ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಟಿ20 ಕ್ರಿಕೆಟ್​ನಲ್ಲಿ 27 ಪಂದ್ಯವಾಡಿರುವ ಹ್ಯಾಝಲ್​ವುಡ್ ಒಟ್ಟು ಒಟ್ಟು 40 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ 12 ಐಪಿಎಲ್ ಪಂದ್ಯಗಳನ್ನು ಆಡಿರುವ ಹ್ಯಾಝಲ್​ವುಡ್ 12 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ಪರ 5 ಐಪಿಎಲ್ ಪಂದ್ಯವಾಡಿರುವ ಜೇಸನ್ ಬೆಹ್ರೆಡ್ರಾರ್ಫ್ 5 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಿಂದ 7 ವಿಕೆಟ್ ಉರುಳಿಸಿದ್ದಾರೆ. ಇಲ್ಲಿ ಜೇಸನ್ ಬೆಹ್ರೆಡ್ರಾರ್ಫ್​ಗಿಂತ ಜೋಶ್ ಹ್ಯಾಝಲ್​ವುಡ್ ಅನುಭವಿ ವೇಗಿಯಾಗಿರುವ ಕಾರಣ ಆರ್​ಸಿಬಿ ಅವರಿಗೆ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ ಹರ್ಷಲ್ ಪಟೇಲ್ ಅವರ ಅಲಭ್ಯತೆಯ ಬೆನ್ನಲ್ಲೇ ಇದೀಗ ಜೋಶ್ ಹ್ಯಾಝಲ್​ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಸೇರಿಕೊಂಡಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಹೀಗಾಗಿ ಸಿಎಸ್​ಕೆ ವಿರುದ್ದದ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಬದಲಿಗೆ ಜೋಶ್ ಹ್ಯಾಝಲ್​ವುಡ್ ಆರ್​ಸಿಬಿ ಪರ ಪಾದರ್ಪಣೆ ಮಾಡುವ ಸಾಧ್ಯತೆಯಿದೆ.

RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

ಇದನ್ನೂ ಓದಿ: Virat Kohli: ಐಪಿಎಲ್​ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ

ಇದನ್ನೂ ಓದಿ: Prithvi Shaw: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೆಹ್ವಾಗ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ