CSK vs RCB: ಇಬ್ಬರ ಎಂಟ್ರಿ, ಒಬ್ಬರು ಔಟ್: ಸಿಎಸ್ಕೆ ವಿರುದ್ದ RCB ತಂಡದಲ್ಲಿ ಪ್ರಮುಖ ಬದಲಾವಣೆ
RCB Playing 11: RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್
IPL 2022: ಐಪಿಎಲ್ನ 22ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ (RCB vs CSK) ಮುಖಾಮುಖಿಯಾಗಲಿದೆ. ಈ ಪಂದ್ಯವು ಎರಡು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಒಂದು ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಸಿಎಸ್ಕೆ ತಂಡಕ್ಕೆ ಈ ಬಾರಿ ಜಯ ಸಿಗಲಿದೆಯಾ ಎಂಬ ಕಾರಣಕ್ಕೆ, ಮತ್ತೊಂದು ಮುಖಾಮುಖಿಯಾಗುತ್ತಿರುವುದು ಐಪಿಎಲ್ನ ಸಾಂಪ್ರದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೀಗಾಗಿ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನಂತು ನಿರೀಕ್ಷಿಸಬಹುದು. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳುವುದಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಹರ್ಷಲ್ ಪಟೇಲ್ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಮತ್ತೊಂದೆಡೆ ಆರ್ಸಿಬಿ ತಂಡದ ವೇಗಿಗಳಾದ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಪಾಕಿಸ್ತಾನ್ ವಿರುದ್ದದ ಆಸ್ಟ್ರೇಲಿಯಾ ಸರಣಿ ಆಡುತ್ತಿದ್ದ ಕಾರಣ ಈ ಇಬ್ಬರು ಆಟಗಾರರು ಆರ್ಸಿಬಿ ತಂಡದ ಮೊದಲ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಇಬ್ಬರು ವೇಗಿಗಳು ತಂಡವನ್ನು ಸೇರಿಕೊಂಡಿದ್ದಾರೆ. ಅದು ಕೂಡ ಹರ್ಷಲ್ ಪಟೇಲ್ ಅವರು ತಂಡದಿಂದ ಹೊರಗುಳಿದಿರುವ ಸಮಯದಲ್ಲಿ ಎಂಬುದು ವಿಶೇಷ. ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ಪಟೇಲ್ ಅವರ ಅಲಭ್ಯತೆಯನ್ನು ಸರಿದೂಗಿಸುವ ಅನಿವಾರ್ಯತೆ ಆರ್ಸಿಬಿ ತಂಡಕ್ಕಿತ್ತು. ಇದೀಗ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ಆಗಮನ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿದೆ.
ಇದಾಗ್ಯೂ ಈ ಇಬ್ಬರು ಹರ್ಷಲ್ ಪಟೇಲ್ ಸ್ಥಾನದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಏಕೆಂದರೆ ತಂಡದಲ್ಲಿರುವ ವಿದೇಶಿ ಆಟಗಾರರ ಸ್ಥಾನದಲ್ಲೇ ಇಬ್ಬರಲ್ಲಿ ಒಬ್ಬರನ್ನು ಆಡಿಸಬಹುದು. ಹೀಗಾಗಿ ಡೇವಿಡ್ ವಿಲ್ಲಿ ಅಥವಾ ವನಿಂದು ಹಸರಂಗ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಅದರಲ್ಲೂ ಇಬ್ಬರು ವೇಗಿಗಳಾಗಿರುವ ಕಾರಣ ವೇಗದ ಬೌಲರ್ ಅನ್ನೇ ರಿಪ್ಲೇಸ್ ಮಾಡಲಿದ್ದಾರೆ. ಅದರಂತೆ ಡೇವಿಡ್ ವಿಲ್ಲಿ ಸ್ಥಾನ ಕಳೆದುಕೊಳ್ಳಬಹುದು.
ಆದರೆ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್, ಇವರಿಬ್ಬರಲ್ಲಿ ಆರ್ಸಿಬಿ ಯಾರಿಗೆ ಮಣೆಹಾಕಲಿದೆ ಎಂಬುದೇ ಪ್ರಶ್ನೆ. ಏಕೆಂದರೆ ಇಬ್ಬರು ಉತ್ತಮ ವೇಗಿಗಳು. ಇಬ್ಬರೂ ಕೂಡ ಐಪಿಎಲ್ ಆಡಿದ ಅನುಭವ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 27 ಪಂದ್ಯವಾಡಿರುವ ಹ್ಯಾಝಲ್ವುಡ್ ಒಟ್ಟು ಒಟ್ಟು 40 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ 12 ಐಪಿಎಲ್ ಪಂದ್ಯಗಳನ್ನು ಆಡಿರುವ ಹ್ಯಾಝಲ್ವುಡ್ 12 ವಿಕೆಟ್ ಪಡೆದಿದ್ದಾರೆ.
ಮತ್ತೊಂದೆಡೆ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ಪರ 5 ಐಪಿಎಲ್ ಪಂದ್ಯವಾಡಿರುವ ಜೇಸನ್ ಬೆಹ್ರೆಡ್ರಾರ್ಫ್ 5 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಿಂದ 7 ವಿಕೆಟ್ ಉರುಳಿಸಿದ್ದಾರೆ. ಇಲ್ಲಿ ಜೇಸನ್ ಬೆಹ್ರೆಡ್ರಾರ್ಫ್ಗಿಂತ ಜೋಶ್ ಹ್ಯಾಝಲ್ವುಡ್ ಅನುಭವಿ ವೇಗಿಯಾಗಿರುವ ಕಾರಣ ಆರ್ಸಿಬಿ ಅವರಿಗೆ ಮಣೆಹಾಕುವ ಸಾಧ್ಯತೆ ಹೆಚ್ಚಿದೆ. ಅದರಂತೆ ಡೇವಿಡ್ ವಿಲ್ಲಿ ಸ್ಥಾನದಲ್ಲಿ ಜೋಶ್ ಹ್ಯಾಝಲ್ವುಡ್ ಸ್ಥಾನ ಪಡೆಯಲಿದ್ದಾರೆ ಎನ್ನಬಹುದು.
ಇದಾಗ್ಯೂ ಆರ್ಸಿಬಿ ಮತ್ತೊಂದು ಬದಲಾವಣೆ ಕೂಡ ಮಾಡಿಕೊಳ್ಳಲಿದೆ. ಹರ್ಷಲ್ ಪಟೇಲ್ ಸ್ಥಾನದಲ್ಲಿ ಸಿದ್ದಾರ್ಥ್ ಕೌಲ್ಗೆ ಚಾನ್ಸ್ ನೀಡಬಹುದು. ಹೀಗಾಗಿ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಯಂತು ಕಂಡು ಬರಲಿದೆ.
RCB ಸಂಭಾವ್ಯ ಪ್ಲೇಯಿಂಗ್ 11 1. ಫಾಫ್ ಡು ಪ್ಲೆಸಿಸ್ (ನಾಯಕ) 2. ಅನುಜ್ ರಾವತ್ 3. ವಿರಾಟ್ ಕೊಹ್ಲಿ 4. ಗ್ಲೆನ್ ಮ್ಯಾಕ್ಸ್‌ವೆಲ್ 5. ದಿನೇಶ್ ಕಾರ್ತಿಕ್ 6. ಶಹಬಾಜ್ ಅಹ್ಮದ್ 7. ವನಿಂದು ಹಸರಂಗ 8. ಸಿದ್ದಾರ್ಥ್ ಕೌಲ್ 9. ಆಕಾಶ್ ದೀಪ್ 10 ಮೊಹಮ್ಮದ್ ಸಿರಾಜ್ 11. ಜೋಶ್ ಹ್ಯಾಝಲ್ವುಡ್
RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ
ಇದನ್ನೂ ಓದಿ: Prithvi Shaw: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೆಹ್ವಾಗ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ