RCB vs CSK Highlights, IPL 2024: ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರಿದ ಆರ್​ಸಿಬಿ

|

Updated on: May 19, 2024 | 12:28 AM

Royal Challengers Bengaluru vs Chennai Super Kings Highlights in Kannada: ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ. ಈ ಜಯದೊಂದಿಗೆ ಫಾಫ್ ಡುಪ್ಲೆಸಿಸ್ ತಂಡವು ಈ ಸೀಸನ್​ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ.

RCB vs CSK Highlights, IPL 2024: ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರಿದ ಆರ್​ಸಿಬಿ

ಐಪಿಎಲ್ 2024 ರ 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿದೆ. ಈ ಜಯದೊಂದಿಗೆ ಫಾಫ್ ಡುಪ್ಲೆಸಿಸ್ ತಂಡವು ಈ ಸೀಸನ್​ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅರ್ಹತೆ ಪಡೆದಿದ್ದವು. ಅದೇ ಹೊತ್ತಿಗೆ ಈ ಸೋಲಿನೊಂದಿಗೆ ಸಿಎಸ್​ಕೆ ಪಯಣ ಅಂತ್ಯಗೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 19 May 2024 12:10 AM (IST)

    ಪ್ಲೇ ಆಫ್​ಗೇರಿದ ಆರ್​ಸಿಬಿ

    ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

  • 19 May 2024 12:06 AM (IST)

    ಧೋನಿ ಔಟ್

    ಮಹೇಂದ್ರ ಸಿಂಗ್ ಧೋನಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ 110 ಮೀಟರ್‌ನ ಸಿಕ್ಸರ್ ಬಾರಿಸಿದ್ದಾರೆ. ಆದರೆ ಇದಾದ ಬಳಿಕ ಎರಡನೇ ಎಸೆತದಲ್ಲಿಯೇ ಔಟಾದರು.


  • 19 May 2024 12:06 AM (IST)

    18 ಓವರ್‌ ಪೂರ್ಣ

    18 ಓವರ್‌ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ. ತಂಡದ ಪರ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ.

  • 18 May 2024 11:43 PM (IST)

    15 ಓವರ್‌ ಪೂರ್ಣ

    15 ಓವರ್‌ಗಳಲ್ಲಿ ಸಿಎಸ್‌ಕೆ ತಂಡ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ. ಧೋನಿ 3 ​​ರನ್ ಮತ್ತು ರವೀಂದ್ರ ಜಡೇಜಾ 8 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 18 May 2024 11:42 PM (IST)

    ಆರನೇ ವಿಕೆಟ್ ಪತನ

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರನೇ ವಿಕೆಟ್ ಪತನಗೊಂಡಿದೆ. ಮಿಚೆಲ್ ಸ್ಯಾಂಟ್ನರ್ ನಾಲ್ಕು ರನ್ ಬಾರಿಸಿ ಕ್ಯಾಚಿತ್ತು ಔಟಾದರು. ಫಾಫ್ ಅದ್ಭುತ ಕ್ಯಾಚ್ ಹಿಡಿದರು.

  • 18 May 2024 11:24 PM (IST)

    ಶಿವಂ ದುಬೆ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಐದನೇ ವಿಕೆಟ್ ಕಳೆದುಕೊಂಡಿದೆ. ಶಿವಂ ದುಬೆ 15 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು.

  • 18 May 2024 11:21 PM (IST)

    ರವೀಂದ್ರ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ರಚಿನ್ ರವೀಂದ್ರ 61 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

  • 18 May 2024 11:21 PM (IST)

    ರವೀಂದ್ರ ಅರ್ಧಶತಕ

    ಸಿಎಸ್​ಕೆ ಪರ ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ರಚಿನ್ ರವೀಂದ್ರ ಅರ್ಧಶತಕ ಪೂರೈಸಿದ್ದಾರೆ.

  • 18 May 2024 11:04 PM (IST)

    10 ನೇ ಓವರ್‌ನಲ್ಲಿ 3ನೇ ವಿಕೆಟ್

    10ನೇ ಓವರ್‌ನ ಮೊದಲ ಎಸೆತದಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿ ಲಾಕಿ ಫರ್ಗುಸನ್​ಗೆ ಬಲಿಆದರು. ರಹಾನೆ, ರಚಿನ್ ರವೀಂದ್ರ ಅವರೊಂದಿಗೆ ಮೂರನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟವನ್ನು ಮಾಡಿದರು. ಶಿವಂ ದುಬೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಚೆನ್ನೈ ಗೆಲುವಿಗೆ 61 ಎಸೆತಗಳಲ್ಲಿ 133 ರನ್ ಅಗತ್ಯವಿದೆ.

  • 18 May 2024 10:45 PM (IST)

    ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇಯಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿದೆ. ಸದ್ಯ ರಚಿನ್ ರವೀಂದ್ರ (23) ಮತ್ತು ಅಜಿಂಕ್ಯ ರಹಾನೆ (22) ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ ಉತ್ತಮ ಜೊತೆಯಾಟವಿದೆ.

  • 18 May 2024 10:30 PM (IST)

    ಮಿಚೆಲ್ ಕೂಡ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಡೆರಿಲ್ ಮಿಚೆಲ್ ಕೂಡ ಔಟಾಗಿದ್ದಾರೆ. ಮಿಚೆಲ್ 4 ರನ್ ಬಾರಿಸಿ ಯಶ್ ದಯಾಳ್​ಗೆ ಬಲಿಯಾದರು.

  • 18 May 2024 10:20 PM (IST)

    ಮೊದಲ ಎಸೆತದಲ್ಲಿ ರುತುರಾಜ್ ಔಟ್

    ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 219 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಆಘಾತ ಎದುರಾಗಿದೆ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಮೊದಲ ಎಸೆತದಲ್ಲೇ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರು.

  • 18 May 2024 10:09 PM (IST)

    219 ರನ್ ಟಾರ್ಗೆಟ್

    ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿದೆ. ಇದರೊಂದಿಗೆ ಚೆನ್ನೈಗೆ 219 ರನ್ ಟಾರ್ಗೆಟ್ ನೀಡಿದೆ.

  • 18 May 2024 09:55 PM (IST)

    ಕಾರ್ತಿಕ್ ಔಟ್

    ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

  • 18 May 2024 09:43 PM (IST)

    ಪಾಟಿದಾರ್ ಔಟ್

    23 ಎಸೆತಗಳಲ್ಲಿ 41 ರನ್ ಗಳಿಸಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ರಜತ್ ಪಾಟಿದಾರ್ ಕ್ಯಾಚಿತ್ತು ಔಟಾದರು

    ಆರ್​ಸಿಬಿ 185/3

  • 18 May 2024 09:33 PM (IST)

    16 ಓವರ್‌ ಮುಕ್ತಾಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಓವರ್​ಗಳ ಆಟ ಮುಕ್ತಾಯಗೊಂಡಾಗ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ 22 ರನ್ ಹಾಗೂ ರಜತ್ ಪಾಟಿದಾರ್ 28 ರನ್ ಗಳಿಸಿ ಆಡುತ್ತಿದ್ದಾರೆ.

  • 18 May 2024 09:22 PM (IST)

    14 ಓವರ್‌ ಪೂರ್ಣ

    14 ಓವರ್‌ಗಳಲ್ಲಿ ಆರ್‌ಸಿಬಿ ತಂಡ 2 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ 6 ರನ್ ಮತ್ತು ರಜತ್ ಪಾಟಿದಾರ್ 22 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.

  • 18 May 2024 09:15 PM (IST)

    ಡು ಪ್ಲೆಸಿಸ್ ಔಟ್

    ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ 54 ರನ್ ಗಳಿಸಿ ರನೌಟ್ ಆದರು. ರಜತ್ ಪಾಟಿದಾರ್ ಬಾರಿಸಿದ ಬಾಲ್, ಮಿಚೆಲ್ ಸ್ಯಾಂಟ್ನರ್ ಕೈಗೆ ತಾಗಿ ವಿಕೆಟ್‌ಗೆ ಬಡಿಯಿತು. ನಾನ್ ಸ್ಟ್ರೈಕ್ ಎಂಡ್​ನಲ್ಲಿ ನಿಂತಿದ್ದ ಫಾಫ್ ಕ್ರೀಸ್​ ಬಿಟ್ಟಿದ್ದ ಕಾರಣ ರನೌಟ್ ಆದರು.

  • 18 May 2024 09:01 PM (IST)

    ಫಾಫ್ ಅರ್ಧಶತಕ

    12ನೇ ಓವರ್​ನ ಮೊದಲ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ಆರ್​ಸಿಬಿ ನಾಯಕ ಫಾಫ್ ತಮ್ಮ ಅರ್ಧಶತಕ ಪೂರೈಸಿದರು. ಇದರೊಂದಿಗೆ ಆರ್​ಸಿಬಿಯ ಶತಕ ಕೂಡ ಪೂರ್ಣಗೊಂಡಿತು.

  • 18 May 2024 09:00 PM (IST)

    11 ಓವರ್‌ ಪೂರ್ಣ

    11 ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ ತಂಡ 1 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಫಾಫ್ ಡು ಪ್ಲೆಸಿಸ್ 49 ರನ್ ಹಾಗೂ ರಜತ್ ಪಾಟಿದಾರ್ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 18 May 2024 08:52 PM (IST)

    47 ರನ್ ಬಾರಿಸಿ ಕೊಹ್ಲಿ ಔಟ್

    ಆರ್​ಸಿಬಿ ಮೊದಲ ವಿಕೆಟ್ ಪತನವಾಗಿದೆ. 47 ರನ್ ಬಾರಿಸಿ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ.

    ಆರ್​ಸಿಬಿ; 78/1

  • 18 May 2024 08:40 PM (IST)

    ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇ ಮುಕ್ತಾಯಕ್ಕೆ ಆರ್‌ಸಿಬಿ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ವಿರಾಟ್ ಕೊಹ್ಲಿ 22 ರನ್ ಮತ್ತು ಫಾಫ್ ಡು ಪ್ಲೆಸಿಸ್ 19 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 18 May 2024 08:10 PM (IST)

    ಪಂದ್ಯಕ್ಕೆ ಮಳೆ ಅಡ್ಡಿ

    ಬೆಂಗಳೂರು-ಚೆನ್ನೈ ನಡುವೆ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಪಂದ್ಯವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಗಿದೆ. ವಿರಾಟ್ ಕೊಹ್ಲಿ 19 ರನ್ ಹಾಗೂ ಫಾಫ್ ಡುಪ್ಲೆಸಿಸ್ 12 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ. ಮೂರು ಓವರ್‌ಗಳ ನಂತರ ತಂಡದ ಸ್ಕೋರ್ 31/0.

  • 18 May 2024 07:43 PM (IST)

    3 ಓವರ್ ಮುಕ್ತಾಯ

    3 ಓವರ್ ಮುಕ್ತಾಯಕ್ಕೆ ಆರ್​ಸಿಬಿ 3 ರನ್ ಕಲೆಹಾಕಿದೆ. 3ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ 2 ಸಿಕ್ಸರ್ ಬಾರಿಸಿದರು.

  • 18 May 2024 07:35 PM (IST)

    ಆರ್‌ಸಿಬಿ ಇನ್ನಿಂಗ್ಸ್ ಆರಂಭ

    ಆರ್‌ಸಿಬಿ ಇನ್ನಿಂಗ್ಸ್ ಆರಂಭವಾಗಿದೆ. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 18 May 2024 07:13 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೆರಿಲ್ ಮಿಚೆಲ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್, ಮಹಿಷ್ ತೀಕ್ಷಣ.

  • 18 May 2024 07:13 PM (IST)

    ರಾಯಲ್ ಚಾಲೆಂಜರ್ಸ್ ಬೆಂಗಳೂರು

    ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರ್ಣ್ ಶರ್ಮಾ, ಯಶ್ ದಯಾಲ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

  • 18 May 2024 07:01 PM (IST)

    ಟಾಸ್ ಗೆದ್ದ ಸಿಎಸ್​ಕೆ

    ಟಾಸ್ ಗೆದ್ದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್​ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.

  • 18 May 2024 06:21 PM (IST)

    ಆರ್​ಸಿಬಿ ಫ್ಯಾನ್ಸ್ ಬೈಕ್ ರ್ಯಾಲಿ

  • 18 May 2024 06:19 PM (IST)

    ಸಮರಕ್ಕೆ ಆರ್​ಸಿಬಿ ಸಿದ್ಧ

  • 18 May 2024 06:04 PM (IST)

    ಚೆನ್ನೈ ತಂಡದ ಆಗಮನ

  • 18 May 2024 06:03 PM (IST)

    ಅಭಿಮಾನಿಗಳ ದಂಡು

  • 18 May 2024 06:01 PM (IST)

    ಚಿನ್ನಸ್ವಾಮಿಯಲ್ಲಿ ಆರ್​ಸಿಬಿ- ಸಿಎಸ್​ಕೆ ಮುಖಾಮುಖಿ

  • 18 May 2024 05:49 PM (IST)

    ಬೆಂಗಳೂರಿನಲ್ಲಿ ಹೈವೋಲ್ಟೇಜ್ ಕದನ

    ಬೆಂಗಳೂರಿನಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ. ಈ ಪಂದ್ಯದಲ್ಲಿ ಚೆನ್ನೈ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ, ಆರ್‌ಸಿಬಿಗೆ ಕೇವಲ ಪಂದ್ಯವನ್ನು ಗೆಲ್ಲುವುದು ಮುಖ್ಯವಲ್ಲ. ಆದಾಗ್ಯೂ, ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸಬೇಕಾದರೆ ಅತ್ಯುತ್ತಮ ನೆಟ್​ ರನ್​ರೇಟ್​ನಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿದೆ.

Published On - 5:48 pm, Sat, 18 May 24

Follow us on