ಈ ಬಾರಿಯ ಐಪಿಎಲ್ ಹಲವು ಕಾರಣಗಳಿಂದ ಸಾಕಷ್ಟು ವಿಶೇಷವಾಗಿತ್ತು. ಅದರಲ್ಲಿ ಪ್ರಮುಖವಾದದ್ದು, ಈ ಸೀಸನ್ನಲ್ಲಿ ಭಾಗಶಃ ಪಂದ್ಯಗಳು 200ರ ಗಡಿ ದಾಟಿದವು. ಈ ಹಿಂದೆ ನಡೆದ 16 ಆವೃತ್ತಿಗಳಲ್ಲಿ ಈ ರೀತಿಯ ರನ್ ಸುನಾಮಿ ಹರಿದಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ ಐಪಿಎಲ್ನಲ್ಲಿ ಹೊಸದಾಗಿ ಜಾರಿಗೆ ತಂದಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮ.