RCB vs DC, IPL 2021: ಕೊನೆಯ ಎಸೆತದಲ್ಲಿ ಸಿಕ್ಸ್​: ಡೆಲ್ಲಿ ವಿರುದ್ದ ಆರ್​ಸಿಬಿಗೆ ರೋಚಕ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 08, 2021 | 11:24 PM

Royal Challengers Bangalore vs Delhi Capitals: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಬಾರಿ ಗೆಲುವು ದಾಖಲಿಸಿದೆ. ಇನ್ನುಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಪಂದ್ಯಗಳಲ್ಲಿ ಆರ್​ಸಿಬಿಗೆ ಸೋಲುಣಿಸಿದೆ.

RCB vs DC, IPL 2021: ಕೊನೆಯ ಎಸೆತದಲ್ಲಿ ಸಿಕ್ಸ್​: ಡೆಲ್ಲಿ ವಿರುದ್ದ ಆರ್​ಸಿಬಿಗೆ ರೋಚಕ ಜಯ
RCB vs DC Live Score

ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ​ ಲೀಗ್​ನ (IPL 2021) 56ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ವಿರುದ್ದ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ನಿಗದಿತ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್​ ಕಲೆಹಾಕಿತು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಪರ ಕೆಎಸ್ ಭರತ್ (78) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (51) ಭರ್ಜರಿ ಬ್ಯಾಟಿಂಗ್ ಮಾಡಿದರು. ಅದರಂತೆ ಪಂದ್ಯವು ಕೊನೆಯ ಓವರ್​ನ ಕೊನೆಯ ಎಸೆತಕ್ಕೆ ತಲುಪಿತು. ಕೊನೆಯ ಎಸೆತದಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಅವೇಶ್ ಖಾನ್ ಎಸೆತಕ್ಕೆ ಸಿಕ್ಸ್​ ಸಿಡಿಸುವ ಮೂಲಕ ಭರತ್ ಆರ್​ಸಿಬಿಗೆ ರೋಚಕ ಜಯ ತಂದುಕೊಟ್ಟರು.

DC 164/5 (20)

RCB 166/3 (20)

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಬಾರಿ ಗೆಲುವು ದಾಖಲಿಸಿದೆ. ಇನ್ನುಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಪಂದ್ಯಗಳಲ್ಲಿ ಆರ್​ಸಿಬಿಗೆ ಸೋಲುಣಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅವೇಶ್ ಖಾನ್, ಅನ್ರಿಕ್ ನೋಕಿಯಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

LIVE NEWS & UPDATES

The liveblog has ended.
  • 08 Oct 2021 11:23 PM (IST)

    ಗೆಲುವಿನ ಸಂಭ್ರಮ

  • 08 Oct 2021 11:10 PM (IST)

    ಕೊನೆಯ ಎಸೆತದಲ್ಲಿ ಸಿಕ್ಸ್​: ಆರ್​ಸಿಬಿಗೆ ರೋಚಕ ಜಯ

    DC 164/5 (20)

    RCB 166/3 (20)

  • 08 Oct 2021 11:05 PM (IST)

    ಕೊನೆಯ ಓವರ್

    ಅವೇಶ್ ಖಾನ್ ಮೊದಲ ಎಸೆತದಲ್ಲಿ ಮ್ಯಾಕ್ಸ್​ವೆಲ್ ಬೌಂಡರಿ

    ಅರ್ಧಶತಕ ಪೂರೈಸಿದ ಮ್ಯಾಕ್ಸ್​​ವೆಲ್

    RCB 157/3 (19.3)

  • 08 Oct 2021 11:02 PM (IST)

    ಕೊನೆಯ ಓವರ್​ನಲ್ಲಿ 15 ರನ್​ಗಳ ಅವಶ್ಯಕತೆ

    RCB 150/3 (19)

  • 08 Oct 2021 10:58 PM (IST)

    2 ಓವರ್​ನಲ್ಲಿ 19 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

  • 08 Oct 2021 10:55 PM (IST)

    ಮ್ಯಾಕ್ಸ್​​ವೆಲ್ ಅಬ್ಬರ

    ಅವೇಶ್ ಖಾನ್ ಎಸೆತದಲ್ಲಿ ಮ್ಯಾಕ್ಸ್​ವೆಲ್ ಬೌಂಡರಿ

    RCB 146/3 (18)

  • 08 Oct 2021 10:50 PM (IST)

    ಭರತ್ ಸಿಕ್ಸ್​

    ರಬಾಡ ಎಸೆತಕ್ಕೆ ಸಿಕ್ಸ್​ ಸಿಡಿಸಿದ ಕೆಎಸ್ ಭರತ್

    RCB 134/3 (17)

  • 08 Oct 2021 10:48 PM (IST)

    ಮ್ಯಾಕ್ಸಿ ಫೋರ್

    ರಬಾಡ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್

  • 08 Oct 2021 10:44 PM (IST)

    4 ಓವರ್​ನಲ್ಲಿ 46 ರನ್​ಗಳ ಅವಶ್ಯಕತೆ

    RCB 119/3 (16)

  • 08 Oct 2021 10:42 PM (IST)

    ಅರ್ಧಶತಕ ಪೂರೈಸಿದ ಭರತ್

    30 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಭರತ್

  • 08 Oct 2021 10:39 PM (IST)

    ಮ್ಯಾಕ್​ವೆಲ್ ಅಬ್ಬರ

    ನೋಕಿಯಾ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್

    RCB 108/3 (15)

  • 08 Oct 2021 10:31 PM (IST)

    ಮ್ಯಾಕ್ಸ್​ವೆಲ್ ಸ್ವಿಚ್ ಆನ್

    ಅಕ್ಷರ್ ಪಟೇಲ್ ಎಸೆತದಲ್ಲಿ ಸ್ವಿಚ್ ಶಾಟ್ ಬಾರಿಸಿದ ಗ್ಲೆನ್ ಮ್ಯಾಕ್ಸ್​ವೆಲ್

    ಬ್ಯಾಕ್ ಟು ಬ್ಯಾಕ್ ಬೌಂಡರಿಯೊಂದಿಗೆ ಅಬ್ಬರಿಸುತ್ತಿರುವ ಮ್ಯಾಕ್ಸಿ

    RCB 95/3 (13.4)

  • 08 Oct 2021 10:29 PM (IST)

    13 ಓವರ್​ ಮುಕ್ತಾಯ

    RCB 85/3 (13)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

  • 08 Oct 2021 10:24 PM (IST)

    ಭರತ್​-ಹಿಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಭರತ್ ಸ್ಟ್ರೈಟ್​ ಹಿಟ್​ ಸಿಕ್ಸ್

    RCB 74/3 (11.5)

  • 08 Oct 2021 10:16 PM (IST)

    10 ಓವರ್ ಮುಕ್ತಾಯ

    RCB 61/3 (10)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

  • 08 Oct 2021 10:14 PM (IST)

    ಎಬಿಡಿ ಔಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಎಬಿಡಿ ಭರ್ಜರಿ ಹಿಟ್…ಬೌಂಡರಿ ಲೈನ್​ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಕ್ಯಾಚ್

  • 08 Oct 2021 10:10 PM (IST)

    ಎಬಿಡಿ-ಬೌಂಡರಿ

    ರಿಪಲ್ ಪಟೇಲ್ ಎಸೆತದಲ್ಲಿ ಎಬಿಡಿ ಸ್ಟ್ರೈಟ್ ಹಿಟ್…ಫೋರ್

    RCB 54/2 (9)

  • 08 Oct 2021 10:04 PM (IST)

    ಎಬಿಡಿ ಅಬ್ಬರ

    ಅಶ್ವಿನ್ ಎಸೆತದಲ್ಲಿ ಎಬಿಡಿ ಭರ್ಜರಿ ಹೊಡೆತ…ಸಿಕ್ಸ್

    RCB 48/2 (8)

  • 08 Oct 2021 10:01 PM (IST)

    ಪವರ್​ ಪ್ಲೇ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್​ ಭರ್ಜರಿ ಬೌಲಿಂಗ್

    ರಬಾಡ ಎಸೆತದಲ್ಲಿ ಎಬಿಡಿ ಬ್ಯಾಟ್​ನಿಂದ ಲೆಗ್​ ಸೈಡ್​ನತ್ತ ಭರ್ಜರಿ ಬೌಂಡರಿ

    RCB 37/2 (6.5)

  • 08 Oct 2021 09:46 PM (IST)

    3 ಓವರ್ ಮುಕ್ತಾಯ

    RCB 11/2 (3)

    ಕ್ರೀಸ್​ನಲ್ಲಿ ಎಬಿಡಿ-ಭರತ್ ಬ್ಯಾಟಿಂಗ್

  • 08 Oct 2021 09:42 PM (IST)

    ವಿರಾಟ್ ಕೊಹ್ಲಿ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಬಿಗ್​ ಹಿಟ್​ಗೆ ಯತ್ನ…ಆಕಾಶದತ್ತ ಚಿಮ್ಮಿದ ಚೆಂಡು…ಕಗಿಸೊ ರಬಾಡ ಉತ್ತಮ ಕ್ಯಾಚ್..ವಿರಾಟ್ ಕೊಹ್ಲಿ (4) ಔಟ್

  • 08 Oct 2021 09:40 PM (IST)

    2 ಓವರ್ ಮುಕ್ತಾಯ

    RCB 6/1 (2)

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ-ಭರತ್ ಬ್ಯಾಟಿಂಗ್

  • 08 Oct 2021 09:35 PM (IST)

    ದೇವದತ್ ಪಡಿಕ್ಕಲ್ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಅಶ್ವಿನ್​ಗೆ ಕ್ಯಾಚ್​ ನೀಡಿ ಹೊರನಡೆದ ಪಡಿಕ್ಕಲ್ (0)

    RCB 4/1 (1)

  • 08 Oct 2021 09:33 PM (IST)

    ಮೊದಲ ಓವರ್

    ಬೌಲಿಂಗ್: ಅನ್ರಿಕ್ ನೋಕಿಯಾ

    ಆರಂಭಿಕರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್

  • 08 Oct 2021 09:22 PM (IST)

    ಆರ್​ಸಿಬಿ- ಟಾರ್ಗೆಟ್ 165

  • 08 Oct 2021 09:20 PM (IST)

    ಆರ್​ಸಿಬಿ ಪರ 4 ಓವರ್​ನಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದ ಸಿರಾಜ್

  • 08 Oct 2021 09:16 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್​ ಅಂತ್ಯ

    DC 164/5 (20)

  • 08 Oct 2021 09:14 PM (IST)

    ರಿಪಲ್ ಫೋರ್

    ಸಿರಾಜ್ ಎಸೆತದಲ್ಲಿ ಬೌಂಡರಿ ಬಾರಿಸಿದ ರಿಪಲ್ ಪಟೇಲ್

    DC 163/4 (19.3)

  • 08 Oct 2021 09:10 PM (IST)

    ಕೊನೆಯ ಓವರ್ ಬಾಕಿ

    DC 158/4 (19)

  • 08 Oct 2021 09:07 PM (IST)

    ಹಿಟ್​-ಮೆಯರ್

    ಹರ್ಷಲ್ ಪಟೇಲ್ ಎಸೆತಕ್ಕೆ ಹೆಟ್ಮೆಯರ್​ ಭರ್ಜರಿ ಪ್ರತ್ಯುತ್ತರ…ಚೆಂಡು ಸ್ಟೇಡಿಯಂನತ್ತ..ಸಿಕ್ಸ್

    DC 156/4 (18.4)

  • 08 Oct 2021 09:04 PM (IST)

    ಸಿರಾಜ್ ಟು ಹೆಟ್ಮೆಯರ್

    ಸಿರಾಜ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹೆಟ್ಮೆಯರ್

    DC 148/4 (18)

  • 08 Oct 2021 09:00 PM (IST)

    ಶ್ರೇಯಸ್ ಅಯ್ಯರ್ ಔಟ್

    ಸಿರಾಜ್ ಎಸೆತದಲ್ಲಿ ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್ (18)

    DC 143/4 (17.4)

  • 08 Oct 2021 08:51 PM (IST)

    DC 133/3 (16)

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

  • 08 Oct 2021 08:44 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಡೇನಿಯಲ್ ಕ್ರಿಶ್ಚಿಯನ್ ಓವರ್​ನಲ್ಲಿ ಫೋರ್, ಸಿಕ್ಸ್​ ಸಿಡಿಸಿದ ಹೆಟ್ಮೆಯರ್

    DC 122/3 (14.2)

  • 08 Oct 2021 08:42 PM (IST)

    14 ಓವರ್ ಮುಕ್ತಾಯ

    DC 112/3 (14)

  • 08 Oct 2021 08:36 PM (IST)

    13 ಓವರ್ ಮುಕ್ತಾಯ

    DC 108/3 (13)

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್

  • 08 Oct 2021 08:33 PM (IST)

    ರಿಷಭ್ ಪಂತ್ ಔಟ್

    ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿದ ರಿಷಭ್ ಪಂತ್ (7)

    DC 108/3 (12.4)

  • 08 Oct 2021 08:29 PM (IST)

    ಪೃಥ್ವಿ ಶಾ ಔಟ್

    ಚಹಲ್ ಎಸೆತದಲ್ಲಿ ಗಾರ್ಟನ್​ಗೆ ಕ್ಯಾಚ್ ನೀಡಿದ ಪೃಥ್ವಿ ಶಾ (48)

    DC 105/2 (12)

  • 08 Oct 2021 08:24 PM (IST)

    ವಾಟ್ ಎ ಶಾಟ್

    ಚಹಲ್ ಎಸೆತಕ್ಕೆ ಭರ್ಜರಿ ಸಿಕ್ಸ್​ ಸಿಡಿಸಿದ ಪೃಥ್ವಿ ಶಾ

    100 ರನ್ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್​

    DC 101/1 (11.1)

  • 08 Oct 2021 08:21 PM (IST)

    ಪಂಟರ್ ಪಂತ್

    ಹರ್ಷಲ್ ಪಟೇಲ್​ ಎಸೆತಕ್ಕೆ ಆಕರ್ಷಕ ಬೌಂಡರಿ ಬಾರಿಸಿದ ರಿಷಭ್ ಪಂತ್

    DC 93/1 (10.3)

  • 08 Oct 2021 08:20 PM (IST)

    ಶಿಖರ್ ಧವನ್ ಔಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಶಿಖರ್ ಧವನ್ (43)

    DC 88/1 (10.1)

  • 08 Oct 2021 08:17 PM (IST)

    10 ಓವರ್​ ಮುಕ್ತಾಯ

    DC 88/0 (10)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 08 Oct 2021 08:16 PM (IST)

    ಶಾ-ಟ್​

    ಚಹಲ್ ಎಸೆತದಲ್ಲಿ ಲಾಂಗ್​ ಆಫ್​ನತ್ತ ಪೃಥ್ವಿ ಶಾ ಭರ್ಜರಿ ಸಿಕ್ಸ್​

    DC 87/0 (9.5)

  • 08 Oct 2021 08:12 PM (IST)

    ಭರ್ಜರಿ ಸಿಕ್ಸರ್

    ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಧವನ್

    DC 77/0 (9)

  • 08 Oct 2021 08:08 PM (IST)

    8 ಓವರ್ ಮುಕ್ತಾಯ

    DC 68/0 (8)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 08 Oct 2021 07:56 PM (IST)

    ಪವರ್​ಪ್ಲೇ ಮುಕ್ತಾಯ

    ಮೊದಲ 6 ಓವರ್​ಗಳಲ್ಲಿ 55 ರನ್ ಕಲೆಹಾಕಿದ ಡೆಲ್ಲಿ ಆರಂಭಿಕರು

    DC 55/0 (6)

  • 08 Oct 2021 07:54 PM (IST)

    ಶಿಖರ್ ಬೌಂಡರಿ

    ಗಾರ್ಟನ್​ ಎಸೆತಕ್ಕೆ ಆಕರ್ಷಕ ಬೌಂಡರಿ ಬಾರಿಸಿದ ಶಿಖರ್ ಧವನ್

  • 08 Oct 2021 07:51 PM (IST)

    5 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್​ ಅತ್ಯುತ್ತಮ ಬ್ಯಾಟಿಂಗ್

    DC 45/0 (5)

  • 08 Oct 2021 07:50 PM (IST)

    ಧವನ್ ಧಮಾಲ್

    ಮ್ಯಾಕ್ಸ್​ವೆಲ್ ಎಸೆತದಲ್ಲಿ ಲೆಗ್​ಸೈಡ್​ನತ್ತ ಅತ್ಯುತ್ತಮ ಹೊಡೆತ…ಬೌಂಡರಿ ಲೈನ್ ದಾಟಿದ ಚೆಂಡು…ಸಿಕ್ಸ್

    DC 38/0 (4.3)

  • 08 Oct 2021 07:47 PM (IST)

    DC 31/0 (4)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 08 Oct 2021 07:40 PM (IST)

    2 ಓವರ್​ ಮುಕ್ತಾಯ

    DC 20/0 (2)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 08 Oct 2021 07:38 PM (IST)

    ಸಿರಾಜ್ ಟು ಶಾ

    ಸಿರಾಜ್ ಮೊದಲ ಎಸೆತಕ್ಕೆ ಪೃಥ್ವಿ ಶಾ ಬ್ಯಾಟ್​ನಿಂದ ಆಕರ್ಷಕ ಬೌಂಡರಿ

    DC 15/0 (1.3)

  • 08 Oct 2021 07:34 PM (IST)

    ಮೊದಲ ಓವರ್ ಮುಕ್ತಾಯ

    DC 10/0 (1)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 08 Oct 2021 07:33 PM (IST)

    ಮೊದಲ ಬೌಂಡರಿ

    ಮ್ಯಾಕ್ಸ್​ವೆಲ್ ಎಸೆತಕ್ಕೆ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಶಾಟ್…ಶಿಖರ್ ಧವನ್ ಬ್ಯಾಟ್​ನಿಂದ ಮೊದಲ ಫೋರ್

  • 08 Oct 2021 07:32 PM (IST)

    ಮೊದಲ ಓವರ್

    ಬೌಲಿಂಗ್: ಗ್ಲೆನ್ ಮ್ಯಾಕ್ಸ್​ವೆಲ್

    ಆರಂಭಿಕರು: ಶಿಖರ್ ಧವನ್, ಪೃಥ್ವಿ ಶಾ

  • 08 Oct 2021 07:16 PM (IST)

    ಕಣಕ್ಕಿಳಿಯುವ ಕಲಿಗಳು

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

  • 08 Oct 2021 07:15 PM (IST)

    ಟಾಸ್ ವಿಡಿಯೋ

  • 08 Oct 2021 07:14 PM (IST)

    ಡೆಲ್ಲಿ ಮಾಸ್ಟರ್ ಪ್ಲ್ಯಾನ್

  • 08 Oct 2021 07:09 PM (IST)

    ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

  • 08 Oct 2021 07:05 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅವೇಶ್ ಖಾನ್, ಅನ್ರಿಕ್ ನೋಕಿಯಾ

  • 08 Oct 2021 06:46 PM (IST)

    ಐಪಿಎಲ್​ನಲ್ಲಿ 2 ಸಾವಿರ ರನ್ ಪೂರೈಸಲು ಮ್ಯಾಕ್ಸಿಗೆ ಬೇಕಿದೆ ಕೇವಲ 48 ರನ್

  • 08 Oct 2021 06:45 PM (IST)

    ದುಬೈ ಪಿಚ್: ಮೊದಲು ಬ್ಯಾಟ್ ಮಾಡುವ ತಂಡದ ಅವರೇಜ್ ಸ್ಕೋರ್ 150

  • 08 Oct 2021 06:41 PM (IST)

    ದಾಖಲೆಯ ಸನಿಹದಲ್ಲಿ ಆರ್​ಸಿಬಿ ವೇಗಿ

    Harshal Patel: ಬ್ರಾವೊ, ರಬಾಡ ದಾಖಲೆ ಮುರಿಯಲು ಹರ್ಷಲ್ ಪಟೇಲ್ ಸಜ್ಜು

  • 08 Oct 2021 06:34 PM (IST)

    ಕದನಕ್ಕೆ ಪಂಟರ್ ಪಂತ್ ರೆಡಿ

  • 08 Oct 2021 06:32 PM (IST)

    RCB vs DC: ಉಭಯ ತಂಡಗಳ ಅಂಕಿ ಅಂಶಗಳು

  • Published On - Oct 08,2021 6:27 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ