Harshal Patel: ಬ್ರಾವೊ, ರಬಾಡ ದಾಖಲೆ ಮುರಿಯಲು ಹರ್ಷಲ್ ಪಟೇಲ್ ಸಜ್ಜು

IPL 2021: ಇದೀಗ ಹರ್ಷಲ್ ಪಟೇಲ್ ಸೀಸನ್​ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Harshal Patel: ಬ್ರಾವೊ, ರಬಾಡ ದಾಖಲೆ ಮುರಿಯಲು ಹರ್ಷಲ್ ಪಟೇಲ್ ಸಜ್ಜು
Harshal Patel-bravo-Rabada
Follow us
TV9 Web
| Updated By: ಝಾಹಿರ್ ಯೂಸುಫ್

Updated on:Oct 08, 2021 | 5:51 PM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ RCB ವೇಗಿ ಹರ್ಷಲ್ ಪಟೇಲ್ ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಸನ್​ರೈಸರ್ಸ್​​ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ 3 ವಿಕೆಟ್​ ಉರುಳಿಸಿದ್ದ ಹರ್ಷಲ್​ ವಿಕೆಟ್​ಗಳ ಸಂಖ್ಯೆಯನ್ನು 29ಕ್ಕೆ ಏರಿಸಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್​ ವೇಗಿ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಹರ್ಷಲ್ ಪಟೇಲ್ ಮುರಿದಿದ್ದರು. ಕಳೆದ ಸೀಸನ್​ನಲ್ಲಿ ಮುಂಬೈ ವೇಗಿ ಬುಮ್ರಾ ಒಟ್ಟು 27 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ ಸೀಸನ್​ ಒಂದರಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ 29 ವಿಕೆಟ್ ಪಡೆಯುವ ಮೂಲಕ ಬುಮ್ರಾ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದ ಸೀಸನ್​ವೊಂದರ ಭಾರತದ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ಹರ್ಷಲ್ ಪಟೇಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇದೀಗ ಹರ್ಷಲ್ ಪಟೇಲ್ ಸೀಸನ್​ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ಸೀಸನ್​ನಲ್ಲಿ 30 ವಿಕೆಟ್ ಪಡೆದಿರುವ ಕಗಿಸೊ ರಬಾಡ 2ನೇ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿ 32 ವಿಕೆಟ್ ಪಡೆದಿರುವ ಡ್ವೇನ್ ಬ್ರಾವೊ ಇದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದದ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಡೆಲ್ಲಿ ವಿರುದ್ದ ಹರ್ಷಲ್ ಪಟೇಲ್ 4 ವಿಕೆಟ್ ಪಡೆದದ್ದೇಯಾದಲ್ಲಿ ಒಟ್ಟು ವಿಕೆಟ್​ಗಳ ಸಂಖ್ಯೆ 33ಕ್ಕೇರಲಿದೆ. ಇದರೊಂದಿಗೆ ಡ್ವೇನ್ ಬ್ರಾವೊ 32 ವಿಕೆಟ್​ ದಾಖಲೆಯನ್ನು ಮುರಿದು ಐಪಿಎಲ್​ ಸೀಸನ್​​ನ ಅತ್ಯಂತ ಯಶಸ್ವಿ ಬೌಲರ್​ ಎಂಬ ದಾಖಲೆ ಹರ್ಷಲ್ ಪಟೇಲ್ ಪಾಲಾಗಲಿದೆ. ಇನ್ನು ಎರಡು ವಿಕೆಟ್ ಪಡೆದರೆ ಕಗಿಸೊ ರಬಾಡ (30) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದ್ದಾರೆ.

ಇಂದು ಆರ್​ಸಿಬಿ ಲೀಗ್​ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ದಾಖಲೆ ಬರೆಯುವ ಅವಕಾಶ ಹರ್ಷಲ್​ ಮುಂದಿದೆ. ಇದಾಗ್ಯೂ ಆರ್​ಸಿಬಿ ಈಗಾಗಲೇ ಪ್ಲೇಆಫ್​ ಪ್ರವೇಶಿಸಿದ್ದು, ಹೀಗಾಗಿ ಮುಂದಿನ ಪಂದ್ಯದಲ್ಲೂ ಈ ದಾಖಲೆ ಮುರಿಯುವ ಅವಕಾಶ ಹರ್ಷಲ್​ಗೆ ಸಿಗಲಿದೆ. ಅದರಂತೆ 4 ವಿಕೆಟ್​ಗಳೊಂದಿಗೆ ಹರ್ಷಲ್ ಪಟೇಲ್ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(Harshal Patel Closes In On Rabada, Dwayne Bravo For Highest Wickets In A Single IPL Season)

Published On - 5:50 pm, Fri, 8 October 21