AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?

IPL 2026 RCB vs LSG: ಐಪಿಎಲ್​ನ 23ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ ಕೇವಲ 146 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ ತಂಡ 15.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಹೇಝಲ್​ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?
Josh Hazelwood
ಝಾಹಿರ್ ಯೂಸುಫ್
|

Updated on: Apr 16, 2026 | 8:26 AM

Share

IPL 2026: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ ಕೇವಲ 146 ರನ್​ಗಳಿಸಿ ಆಲೌಟ್ ಆಯಿತು.

ಹೀಗೆ ಎಲ್​ಎಸ್​ಜಿ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ಮುಖ್ಯ ಕಾರಣ ಯುವ ವೇಗಿ ರಾಸಿಖ್ ಸಲಾಂ ದಾರ್, ಅನುಭವಿ ಬೌಲರ್​ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಝಲ್​ವುಡ್.

  • ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ರಾಸಿಖ್ ಸಲಾಂ ದಾರ್ ಕೇವಲ 24 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
  • ಭುವನೇಶ್ವರ್ ಕುಮಾರ್ 4 ಓವರ್​ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದಿದ್ದರು.
  • ಜೋಶ್ ಹೇಝಲ್​ವುಡ್ 4 ಓವರ್​ಗಳಲ್ಲಿ 20 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು.

ಆರ್​ಸಿಬಿ ಪರ ಮೂವರು ಅತ್ಯುತ್ತಮ ದಾಳಿ ಸಂಘಟಿಸಿದರೂ ಅಂತಿಮವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದು ಜೋಶ್ ಹೇಝಲ್​ವುಡ್​ಗೆ. ಇದರ ಬೆನ್ನಲ್ಲೇ 4 ಹಾಗೂ 3 ವಿಕೆಟ್​ಗಳನ್ನು ಕಬಳಿಸಿದ್ದರೂ ರಾಸಿಖ್ ಸಲಾಂ ಹಾಗೂ ಭುವನೇಶ್ವರ್ ಕುಮಾರ್​ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಯಾಕೆ ನೀಡಲಾಗಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…

ಎಕಾನಮಿ ರೇಟ್​: ಸಾಮಾನ್ಯವಾಗಿ ಬ್ಯಾಟರ್‌ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ಜೋಶ್ ಹೇಝಲ್‌ವುಡ್ ರನ್ ಬಿಟ್ಟುಕೊಡಲು ಜಿಪುಣತನ ತೋರಿದರು. ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 20 ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು. ಅಂದರೆ ಕೇವಲ 5 ರನ್​ಗಳ ಎಕಾನಮಿ ರೇಟ್​ನಲ್ಲಿ ಅವರು ರನ್ ಬಿಟ್ಟು ಕೊಟ್ಟಿದ್ದರು. ಇದು ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಅಪರೂಪದ ಸಾಧನೆ.

ಡಾಟ್ ಬಾಲ್​: ಹೇಝಲ್‌ವುಡ್ ತಮ್ಮ ವಿಶಿಷ್ಟವಾದ ‘ಹಾರ್ಡ್ ಲೆಂತ್’ ಮೂಲಕ ಎಲ್‌ಎಸ್‌ಜಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಅವರು ತಮ್ಮ 4 ಓವರ್​ಗಳಲ್ಲಿ ಬರೋಬ್ಬರಿ 13 ಡಾಟ್ ಬಾಲ್‌ಗಳನ್ನು ಎಸೆದಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ನಿಕೋಲಸ್ ಪೂರನ್ ವಿಕೆಟ್: ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರ ವಿಕೆಟ್ ಪಡೆಯುವ ಮೂಲಕ ಲಕ್ನೋ ತಂಡದ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡುವಲ್ಲಿಯೂ ಹೇಝಲ್​ವುಡ್ ಯಶಸ್ವಿಯಾದರು.

ಕಂಬ್ಯಾಕ್ ಪಂದ್ಯ: ಫಿಟ್​ನೆಸ್ ಸಮಸ್ಯೆ ಕಾರಣ ಜೋಶ್ ಹೇಝಲ್​ವುಡ್ ಸೀಸನ್‌ನ ಆರಂಭಿಕ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾಗ್ಯೂ ಕಂಬ್ಯಾಕ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸುವಲ್ಲಿ ಹೇಝಲ್​ವುಡ್ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದಾಖಲೆಯಲ್ಲ… ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆಯೇ ಧೂಳೀಪಟ

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕೇವಲ ಒಂದು ವಿಕೆಟ್ ಪಡೆದಿದ್ದರೂ ಜೋಶ್ ಹೇಝಲ್​ವುಡ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ.

Follow Us
ಜೀವನಕ್ಕೆ ನಗು ಎಷ್ಟು ಮುಖ್ಯವೋ, ಅದರ ಇತಿಮಿತಿಗಳೂ ಅಷ್ಟೇ ಅಗತ್ಯ!
ಜೀವನಕ್ಕೆ ನಗು ಎಷ್ಟು ಮುಖ್ಯವೋ, ಅದರ ಇತಿಮಿತಿಗಳೂ ಅಷ್ಟೇ ಅಗತ್ಯ!
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್