RCB vs LSG Highlights, IPL 2025: ಲಕ್ನೋ ವಿರುದ್ಧ ಗೆದ್ದ ಆರ್​ಸಿಬಿ

Royal Challengers Bengaluru vs Lucknow Super Giants Live Score in Kannada: ಐಪಿಎಲ್ 2025 ರ ಕೊನೆಯ ಲೀಗ್ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ, ಆರ್‌ಸಿಬಿ ಅದ್ಭುತ ಗೆಲುವು ಸಾಧಿಸಿ ಲೀಗ್ ಹಂತವನ್ನು ಅಗ್ರ-2 ರಲ್ಲಿ ಮುಗಿಸಿತು. ರೆಡ್ ಆಮರ್ಮ ಈಗ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.

RCB vs LSG Highlights, IPL 2025: ಲಕ್ನೋ ವಿರುದ್ಧ ಗೆದ್ದ ಆರ್​ಸಿಬಿ
Rcb Win

Updated on: May 27, 2025 | 11:55 PM

ಐಪಿಎಲ್ 2025 ರ 70 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 228 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಅದ್ಭುತ ಗೆಲುವು ಸಾಧಿಸಿದ್ದಲ್ಲದೆ, ಲೀಗ್ ಹಂತವನ್ನು ಅಗ್ರ-2 ರಲ್ಲಿ ಮುಗಿಸುವ ಮೂಲಕ ತಮ್ಮ ಪ್ಲೇಆಫ್ ಸ್ಥಾನವನ್ನು ಬಲಪಡಿಸಿಕೊಂಡಿತು. ಅಲ್ಲದೆ ಆರ್‌ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಈ ಗೆಲುವಿನಿಂದ ಆರ್‌ಸಿಬಿ ತಂಡವು ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಟಿಕೆಟ್ ಪಡೆದುಕೊಂಡಿದೆ.

LIVE NEWS & UPDATES

The liveblog has ended.
  • 27 May 2025 11:51 PM (IST)

    ಆರ್‌ಸಿಬಿಗೆ ಐತಿಹಾಸಿಕ ಗೆಲುವು

    ಐಪಿಎಲ್ 2025 ರ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. 228 ರನ್‌ಗಳ ಗುರಿಯನ್ನು ಆರ್‌ಸಿಬಿ 8 ಎಸೆತಗಳಿಗೆ ಮೊದಲೇ ಬೆನ್ನಟ್ಟಿತು. ನಾಯಕ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 85 ರನ್ ಗಳಿಸಿದರೆ ಮಯಾಂಕ್ ಅಗರ್ವಾಲ್ ಅಜೇಯ 41 ರನ್ ಗಳಿಸಿದರು. ಆರ್‌ಸಿಬಿ ಇಷ್ಟು ದೊಡ್ಡ ಗುರಿಯನ್ನು ಬೆನ್ನಟ್ಟಿದ್ದು ಇದೇ ಮೊದಲು.

  • 27 May 2025 11:43 PM (IST)

    ಒಂದೇ ಓವರ್​ನಲ್ಲಿ 21 ರನ್

    ಜಿತೇಶ್ ಶರ್ಮಾ ಓ’ರೂರ್ಕ್ ಓವರ್‌ನಲ್ಲಿ 21 ರನ್ ಗಳಿಸಿದರು. 2 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಹೊಡೆದರು. ಆರ್‌ಸಿಬಿ ನಾಯಕನಿಂದ ಅದ್ಭುತ ಬ್ಯಾಟಿಂಗ್


  • 27 May 2025 11:36 PM (IST)

    ಜಿತೇಶ್ ಅರ್ಧಶತಕ

    ಜಿತೇಶ್ ಶರ್ಮಾ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. 22 ಎಸೆತಗಳಲ್ಲಿ ಅರ್ಧಶತಕ. ನಾಯಕ ಸಾಹೇಬ್ ಅದ್ಭುತ ಬ್ಯಾಟಿಂಗ್

  • 27 May 2025 11:05 PM (IST)

    ಕೊಹ್ಲಿ ಔಟ್

    ವಿರಾಟ್ ಕೊಹ್ಲಿ 54 ರನ್ ಗಳಿಸಿ ಔಟಾದರು, ಆವೇಶ್ ಖಾನ್ ಅವರ ಎಸೆತದಲ್ಲಿ ಆಯುಷ್ ಬಡೋನಿ ಕ್ಯಾಚ್ ಪಡೆದರು.

  • 27 May 2025 11:05 PM (IST)

    10 ಓವರ್‌ಗಳ ನಂತರ 115 ರನ್

    ಆಕಾಶ್ ಸಿಂಗ್ ಅವರ ಓವರ್‌ನಲ್ಲಿ 18 ರನ್ ಬಂದವು. ಒಂದೇ ಓವರ್‌ನಲ್ಲಿ ನಾಲ್ಕು ಬೌಂಡರಿಗಳು ಸಿಡಿದವು. ಮಯಾಂಕ್ ಅಗರ್ವಾಲ್ ಅದ್ಭುತ ಬ್ಯಾಟಿಂಗ್.

  • 27 May 2025 11:05 PM (IST)

    ವಿರಾಟ್ ಅರ್ಧಶತಕ

    ವಿರಾಟ್ ಕೊಹ್ಲಿ ಈ ಸೀಸನ್​ನ 8ನೇ ಅರ್ಧಶತಕವನ್ನು 27 ಎಸೆತಗಳಲ್ಲಿ ಪೂರೈಸಿದರು.

  • 27 May 2025 10:31 PM (IST)

    ಪಾಟಿದಾರ್ ಔಟ್

    ವಿರಾಟ್ ಕೊಹ್ಲಿ ಒಂದೆಡೆ ಬೌಂಡರಿ ಮತ್ತು ಸಿಕ್ಸರ್ ಬಾರಿಸುತ್ತಿದ್ದರೆ, ಮತ್ತೊಂದೆಡೆ ಮತ್ತೊಂದು ವಿಕೆಟ್ ಬಿದ್ದಿದೆ. ನಾಯಕ ರಜತ್ ಪಟಿದಾರ್ ಕೇವಲ 14 ರನ್ ಗಳಿಸಿ ಔಟಾಗಿದ್ದಾರೆ.

  • 27 May 2025 10:22 PM (IST)

    ಫಿಲ್ ಸಾಲ್ಟ್ ಔಟ್

    ಫಿಲ್ ಸಾಲ್ಟ್ ಆಕಾಶ್ ಸಿಂಗ್ ಓವರ್​ನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆದಾಗ್ಯೂ ಅವರು ಆರ್‌ಸಿಬಿಗೆ ಉತ್ತಮ ಆರಂಭ ನೀಡಿದ್ದಾರೆ.

  • 27 May 2025 10:17 PM (IST)

    5 ಓವರ್‌ಗಳಲ್ಲಿ 60

    ಆರ್‌ಸಿಬಿ 5 ಓವರ್‌ಗಳಲ್ಲಿ 60 ರನ್ ಗಳಿಸಿದೆ. ಸಾಲ್ಟ್ ಮತ್ತು ವಿರಾಟ್ ತಲಾ 6 ಬೌಂಡರಿಗಳನ್ನು ಹೊಡೆದಿದ್ದಾರೆ. ಪವರ್‌ಪ್ಲೇನ ಕೊನೆಯ ಓವರ್‌ನಲ್ಲಿ ಎಷ್ಟು ರನ್ ಗಳಿಸಲಾಗುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.

  • 27 May 2025 10:17 PM (IST)

    4 ಓವರ್‌ಗಳಲ್ಲಿ ಅರ್ಧಶತಕ

    ಆರ್‌ಸಿಬಿ ನಾಲ್ಕು ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪಿತು. ವಿರಾಟ್ ಮತ್ತು ಸಾಲ್ಟ್ ಅದ್ಭುತವಾಗಿ ಆಡುತ್ತಿದ್ದಾರೆ.

  • 27 May 2025 10:01 PM (IST)

    ಕೊಹ್ಲಿ 4 ಬೌಂಡರಿ

    ಓ’ರಾರ್ಕ್ ಅವರ ಓವರ್‌ನಲ್ಲಿ ವಿರಾಟ್ ಕೊಹ್ಲಿ 4 ಬೌಂಡರಿಗಳನ್ನು ಬಾರಿಸಿದರು. ಆ ಓವರ್‌ನಲ್ಲಿ ಒಟ್ಟು 22 ರನ್‌ಗಳು ಬಂದವು. ಆರ್‌ಸಿಬಿಗೆ ಭರ್ಜರಿ ಆರಂಭ

  • 27 May 2025 09:39 PM (IST)

    ಲಕ್ನೋದ ಬೃಹತ್ ಸ್ಕೋರ್

    ಲಕ್ನೋ ತಂಡ 20 ಓವರ್‌ಗಳಲ್ಲಿ 227 ರನ್ ಗಳಿಸಿತು. ಪಂತ್ ಅಜೇಯ 118 ರನ್ ಗಳಿಸಿದರು. ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ಗಳಿಸಿದರು. ಈ ಪಂದ್ಯವನ್ನು ಗೆಲ್ಲಲು ಆರ್‌ಸಿಬಿ ತನ್ನದೇ ಆದ ದಾಖಲೆಯನ್ನು ಮುರಿಯಬೇಕಾಗುತ್ತದೆ.

  • 27 May 2025 09:28 PM (IST)

    ಪಂತ್ ಅದ್ಭುತ ಪ್ರದರ್ಶನ

    ರಿಷಭ್ ಪಂತ್ 54 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಪಂದ್ಯಕ್ಕೂ ಮುನ್ನ, ಈ ಆಟಗಾರ ಪ್ರತಿಯೊಂದು ರನ್ ಗಳಿಸಲು ಹಂಬಲಿಸುತ್ತಿದ್ದರು ಆದರೆ ಪಂತ್ ಆರ್‌ಸಿಬಿ ವಿರುದ್ಧ ಶತಕ ಗಳಿಸಿದ್ದಾರೆ.

  • 27 May 2025 09:18 PM (IST)

    ಮಾರ್ಷ್ ಔಟ್

    ಮಿಚೆಲ್ ಮಾರ್ಷ್ 67 ರನ್ ಗಳಿಸಿ ಔಟಾದರು, ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡಿದರು. ಜಿತೇಶ್ ಶರ್ಮಾ ಅವರಿಂದ ಕ್ಯಾಚ್ ಔಟ್.

  • 27 May 2025 08:55 PM (IST)

    ಮಾರ್ಷ್ ಅರ್ಧಶತಕ

    ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕಳೆದ ಪಂದ್ಯದಲ್ಲಿ ಶತಕ, ಈ ಬಾರಿ ಅರ್ಧಶತಕ. ಅದ್ಭುತ ಬ್ಯಾಟಿಂಗ್. ಲಕ್ನೋದ ಸ್ಕೋರ್ 150 ದಾಟಿದೆ.

  • 27 May 2025 08:44 PM (IST)

    ದಯಾಳ್ ಓವರ್‌ನಲ್ಲಿ 14 ರನ್‌

    ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ ಮಿಚೆಲ್ ಮಾರ್ಷ್ ಬೌಂಡರಿ ಬಾರಿಸಿದರು. ಅವರು ಕೊನೆಯ ಎಸೆತದಲ್ಲಿ ಬೌಂಡರಿ ಕೂಡ ಹೊಡೆದರು. ಒಟ್ಟು 14 ರನ್‌ಗಳು ಬಂದವು. ಲಕ್ನೋ ತಂಡ 11 ಓವರ್‌ಗಳಲ್ಲಿ 114 ರನ್ ಗಳಿಸಿತು.

  • 27 May 2025 08:37 PM (IST)

    ಪಂತ್ ಅರ್ಧಶತಕ

    ರಿಷಭ್ ಪಂತ್ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಸೀಸನ್​ನಲ್ಲಿ ಎರಡನೇ ಅರ್ಧಶತಕ. 3 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಹೊಡೆದರು.

  • 27 May 2025 08:27 PM (IST)

    9 ಓವರ್‌ಗಳಲ್ಲಿ 84 ರನ್

    ಮಾರ್ಷ್​ ಮತ್ತು ಪಂತ್ ನಡುವಿನ ಅರ್ಧಶತಕದ ಜೊತೆಯಾಟ. ಮೂರನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ಒಟ್ಟು 10 ರನ್‌ಗಳು ಬಂದವು.

  • 27 May 2025 08:06 PM (IST)

    ಬ್ರೆಟ್ಜ್ಕಿ ಬೌಲ್ಡ್

    ಲಕ್ನೋಗೆ ಮೊದಲ ಹೊಡೆತ. ಬ್ರೆಟ್ಜ್ಕಿ, ತುಷಾರ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಬ್ರೆಟ್ಜ್ಕಿ 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ಅದ್ಭುತ ಔಟ್‌ಸ್ವಿಂಗ್ ಯಾರ್ಕರ್‌ನಿಂದ ಬೌಲ್ಡ್ ಆದರು.

  • 27 May 2025 07:40 PM (IST)

    ಲಕ್ನೋ ಬ್ಯಾಟಿಂಗ್ ಪ್ರಾರಂಭ

    ಮೊದಲ ಓವರ್‌ನಲ್ಲಿ ಲಕ್ನೋ 11 ರನ್ ಗಳಿಸಿತು. ಮಿಚೆಲ್ ಮಾರ್ಷ್ ಮತ್ತು ಬ್ರೆಟ್ಜ್ಕಿ ತಲಾ ಒಂದು ಬೌಂಡರಿ ಬಾರಿಸಿದರು. ನುವಾನ್ ತುಷಾರ ಚೆನ್ನಾಗಿ ಬೌಲಿಂಗ್ ಮಾಡಿದರು.

  • 27 May 2025 07:14 PM (IST)

    ಆರ್​ಸಿಬಿ ತಂಡ

    ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್/ನಾಯಕ), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ.

  • 27 May 2025 07:14 PM (IST)

    ಲಕ್ನೋ ತಂಡ

    ಮಿಚೆಲ್ ಮಾರ್ಷ್, ಮ್ಯಾಥ್ಯೂ ಬ್ರೆಟ್ಜ್ಕಿ, ನಿಕೋಲಸ್ ಪೂರನ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಆಯುಷ್ ಬಡೋನಿ, ಅಬ್ದುಲ್ ಸಮದ್, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್, ವಿಲಿಯಂ ಓ’ರೂರ್ಕ್.

  • 27 May 2025 07:04 PM (IST)

    ಟಾಸ್ ಗೆದ್ದ ಆರ್​​ಸಿಬಿ

    ಟಾಸ್ ಗೆದ್ದ ಆರ್​​ಸಿಬಿ ನಾಯಕ ಜಿತೇಶ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - 7:03 pm, Tue, 27 May 25