ಮುಂಬೈ ಇಂಡಿಯನ್ಸ್ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್
IPL 2026 RCB vs MI: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2026) 54ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 168 ರನ್ ಬಾರಿಸಿ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 54ನೇ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಟಿಮ್ ಡೇವಿಡ್ ಅಶ್ಲೀಲವಾಗಿ ಸಂಭ್ರಮಿಸಿದ್ದಾರೆ. ಅದು ಸಹ ಮುಂಬೈ ಇಂಡಿಯನ್ಸ್ ತಂಡವನ್ನು ಗುರಿಯಾಗಿಸಿಕೊಂಡು. ರಾಯ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 167 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 15 ರನ್ಗಳು ಬೇಕಿತ್ತು. ಅದರಂತೆ ಅಂತಿಮ ಎಸೆತದಲ್ಲಿ 2 ರನ್ಗಳ ಅವಶ್ಯಕತೆ ಙಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಸಿಖ್ ದಾರ್ ರೋಚಕ ಗೆಲುವು ತಂದು ಕೊಟ್ಟಿದ್ದರು. ಇತ್ತ ಆರ್ಸಿಬಿ ಗೆಲ್ಲುತ್ತಿದ್ದಂತೆ ಡಗೌಟ್ನಲ್ಲಿದ್ದ ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡವನ್ನು ಗುರಿಯಾಗಿಸಿ ಮಧ್ಯ ಬೆರಳು ತೋರಿಸಿ ಅಸಭ್ಯವಾಗಿ ಸಂಭ್ರಮಿಸಿದ್ದಾರೆ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟಿಮ್ ಡೇವಿಡ್ ವಿರುದ್ಧ ಮ್ಯಾಚ್ ರೆಫರಿ ಕ್ರಮ ಜರುಗಿಸುವ ಸಾಧ್ಯತೆಯಿದೆ. ಏಕೆಂದರೆ ಕ್ರಿಕೆಟ್ ಆಟದಲ್ಲಿ ಇಂತಹ ಸನ್ನೆಗಳನ್ನು ಮಾಡುವುದು ‘ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ (ICC) ನ ನೀತಿ ಸಂಹಿತೆಯ ಅಡಿಯಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಈ ಅಪರಾಧದ ಪ್ರಕಾರ: ಮಧ್ಯದ ಬೆರಳು ತೋರಿಸುವುದು ಅಸಭ್ಯ, ಆಕ್ಷೇಪಾರ್ಹ ಮತ್ತು ಅವಮಾನಕರ ಸನ್ನೆಗಳ ವರ್ಗಕ್ಕೆ ಸೇರುತ್ತದೆ. ಇದು ಸಾಮಾನ್ಯವಾಗಿ ಐಸಿಸಿ ನೀತಿ ಸಂಹಿತೆಯ ಹಂತ 1 (Level 1) ಅಥವಾ ಹಂತ 2 (Level 2) ಉಲ್ಲಂಘನೆಯಾಗಿದೆ.
-
- ದಂಡ ಮತ್ತು ಶಿಕ್ಷೆ: ಇಂತಹ ವರ್ತನೆ ತೋರಿದ ಆಟಗಾರರಿಗೆ ಮ್ಯಾಚ್ ರೆಫರಿಗಳು ಅವರ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಿಂದ ಶೇ. 100 ರಷ್ಟು ದಂಡ ವಿಧಿಸಬಹುದು. ಜೊತೆಗೆ, ಅವರ ಖಾತೆಗೆ ಡೆಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ. ಪದೇ ಪದೇ ಇಂತಹ ತಪ್ಪುಗಳನ್ನು ಮಾಡಿದರೆ ಪಂದ್ಯಗಳಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ.
- ಪೂರ್ವ ನಿದರ್ಶನಗಳು: 2012ರಲ್ಲಿ ಸಿಡ್ನಿ ಕ್ರೀಡಾಂಗಣದಲ್ಲಿ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿದ್ದಕ್ಕಾಗಿ ಕೊಹ್ಲಿ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡ ವಿಧಿಸಲಾಗಿತ್ತು.
- ಇತ್ತೀಚಿನ ವಿವಾದಗಳು: ಟ್ರಾವಿಸ್ ಹೆಡ್ ಮತ್ತು ಗೌತಮ್ ಗಂಭೀರ್ ಅವರಂತಹ ಆಟಗಾರರು ಕೂಡ ಇಂತಹ ಸನ್ನೆಗಳ ಕಾರಣದಿಂದ ಟೀಕೆಗೆ ಗುರಿಯಾಗಿದ್ದಾರೆ.
- ಕ್ರಿಕೆಟ್‌ನ ಆತ್ಮಾಭಿಮಾನ: ಕ್ರಿಕೆಟ್ ಅನ್ನು ‘ಸಂಭಾವಿತರ ಆಟ’ಎಂದು ಕರೆಯಲಾಗುತ್ತದೆ. ಯಾವುದೇ ಆಟಗಾರ ಮೈದಾನದಲ್ಲಿ ಎದುರಾಳಿ ಆಟಗಾರರನ್ನಾಗಲಿ ಅಥವಾ ಪ್ರೇಕ್ಷಕರನ್ನಾಗಲಿ ಅವಮಾನಿಸುವಂತಹ ವರ್ತನೆ ಮಾಡಬಾರದು ಎಂಬುದು ಇಲ್ಲಿನ ಪ್ರಮುಖ ನಿಯಮ.
ಆದರೆ ಇದೀಗ ಗೆಲುವಿನ ಬೆನ್ನಲ್ಲೇ ಮೈಮರೆಯುವ ಮೂಲಕ ಟಿಮ್ ಡೇವಿಡ್ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ಅಥವಾ ಶೇ 100 ರಷ್ಟು ದಂಡ ವಿಧಿಸುವ ಸಾಧ್ಯತೆ ಇದೆ.
Published On - 8:42 am, Mon, 11 May 26




