
ಐಪಿಎಲ್ 2025 (IPL 2025) ರ 65 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಈ ಸೀಸನ್ನಲ್ಲಿ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದೆ. ಹೀಗಾಗಿ ಈ ಪಂದ್ಯ ಹೈದರಾಬಾದ್ಗೆ ಕೇವಲ ಔಪಚಾರಿಕವಾಗಿದೆ. ಆದರೆ ಈಗಾಗಲೇ ಪ್ಲೇಆಫ್ ಟಿಕೆಟ್ ಪಡೆದುಕೊಂಡಿರುವ ಆರ್‌ಸಿಬಿ ಮಾತ್ರ, ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ ಲೀಗ್ ಹಂತವನ್ನು ಅಗ್ರ ಎರಡು ಸ್ಥಾನಗಳಲ್ಲಿ ಮುಗಿಸುವ ಗುರಿಯನ್ನು ಹೊಂದಿದೆ.
ಆರ್‌ಸಿಬಿ ಮತ್ತು ಹೈದರಾಬಾದ್ ನಡುವಿನ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕಾನಾ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಆದರೆ, ಈ ಸೀಸನ್ನಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಪ್ರಾಬಲ್ಯ ಸಾಧಿಸಿದ್ದಾರೆ. ಲಕ್ನೋ ಮತ್ತು ಹೈದರಾಬಾದ್ ನಡುವೆ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 205 ರನ್‌ಗಳನ್ನು ಗಳಿಸಿತು. ಇದರ ಹೊರತಾಗಿಯೂ, ಹೈದರಾಬಾದ್ ತಂಡವು 206 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಇದರರ್ಥ ಬೆಂಗಳೂರು-ಹೈದರಾಬಾದ್ ಪಂದ್ಯದಲ್ಲೂ ನಾವು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯನ್ನು ನಿರೀಕ್ಷಿಸಬಹುದು.
ಏಕಾನಾ ಕ್ರೀಡಾಂಗಣವು ಇಲ್ಲಿಯವರೆಗೆ ಒಟ್ಟು 20 ಐಪಿಎಲ್ ಪಂದ್ಯಗಳನ್ನು ಆಯೋಜಿಸಿದೆ. ಇದರಲ್ಲಿ 8 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದರೆ, ರನ್ ಬೆನ್ನಟ್ಟಿದ ತಂಡವು 11 ಪಂದ್ಯಗಳಲ್ಲಿ ಗೆದ್ದಿದೆ. ಅಂದರೆ ಏಕಾನಾದಲ್ಲಿ ಟಾಸ್ ಯಾವುದೇ ವಿಶೇಷ ಪಾತ್ರವನ್ನು ವಹಿಸುವುದಿಲ್ಲ.
IPL 2025: ಸತತ 9 ಆವೃತ್ತಿ; ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಸ್ವಪ್ನಿಲ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ನುವಾನ್ ತುಷಾರ, ಬ್ಲೆಸ್ಸಿಂಗ್ ಮುಜರಬಾನಿ, ಟಿಮ್ ಸೀಫರ್ಟ್, ಮೋಹಿತ್ ರಥಿ, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್.
ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಥರ್ವ ತೈಡೆ, ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಸಚಿನ್ ಬೇಬಿ, ಸ್ಮರಣ್ ರವಿಚಂದ್ರನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಟ್ರಾವಿಸ್ ಹೆಡ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್, ವಿಯಾನ್ ಮುಲ್ಡರ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ರಾಹುಲ್ ಚಾಹರ್, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ