ಮಹಿಳಾ ಏಕದಿನ ವಿಶ್ವಕಪ್ನಲ್ಲಿನ (ICC Women’s World Cup 2022) ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಸ್ಮೃತಿ ಮಂದಾನ, ಸ್ನೇಹ್ ರಾಣ ಮತ್ತು ಪೂಜಾ ವಸ್ತ್ರಕರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 244 ರನ್ಗಳಿಸಿತು. 245 ರನ್ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ ಬೌಲರುಗಳ ಮುಂದೆ ರನ್ಗಳಿಸಲು ಪರದಾಡಿದರು. ಭರ್ಜರಿ ದಾಳಿ ಸಂಘಟಿಸಿದ ರಾಜೇಶ್ವರಿ ಗಾಯಕ್ವಾಡ್ 10 ಓವರ್ಗಳಲ್ಲಿ ಕೇವಲ 31 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಜೂಲನ್ ಗೋಸ್ವಾಮಿ ಹಾಗೂ ಸ್ನೇಹಾ ರಾಣಾ 2 ವಿಕೆಟ್ ಪಡೆದರು. ಇದರೊಂದಿಗೆ ಪಾಕಿಸ್ತಾನ್ ತಂಡವು ಕೇವಲ 137 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 107 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನಲ್ಲಿ ಬ್ಯಾಟರ್ ಹಾಗೂ ಬೌಲರುಗಳು ನಡುವೆ ವಿಕೆಟ್ ಕೀಪರ್ ಕೊಡುಗೆ ಬಹಳ ಮುಖ್ಯವಾದವು. ಏಕೆಂದರೆ ಇದೇ ಮೊದಲ ಬಾರಿಗೆ ವಿಶ್ವಕಪ್ ಆಡಿದ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಚಾ ಘೋಷ್ (Richa Ghosh) ವಿಕೆಟ್ ಹಿಂದೆ ನಿಂತು ವಿಶ್ವ ದಾಖಲೆ ಬರೆದರು. ಈ ಪಂದ್ಯದಲ್ಲಿ ಒಟ್ಟು 4 ಕ್ಯಾಚ್ ಹಾಗೂ 1 ಸ್ಟಂಪಿಂಗ್ ಮಾಡಿದ ರಿಚಾ ಚೊಚ್ಚಲ ಪಂದ್ಯದಲ್ಲಿ 5 ಬಲಿ ಪಡೆದ ಏಕದಿನ ವಿಶ್ವಕಪ್ನ ಮೊದಲ ಆಟಗಾರ್ತಿ ಎನಿಸಿಕೊಂಡರು. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲಿ ಅತೀ ಹೆಚ್ಚು ಬಲಿ (ಕ್ಯಾಚ್+ಸ್ಟಂಪಿಂಗ್) ಪಡೆದ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇನ್ನು ರಿಚಾ ಘೋಷ್ ಏಕದಿನ ಇನ್ನಿಂಗ್ಸ್‌ನಲ್ಲಿ 4 ಕ್ಯಾಚ್‌ಗಳನ್ನು ಪಡೆದ ಮೂರನೇ ಭಾರತೀಯ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅಂಜು ಜೈನ್ ವೆಸ್ಟ್ ಇಂಡೀಸ್ ವಿರುದ್ಧ 2004ರಲ್ಲಿ ಮತ್ತು 2011ರಲ್ಲಿ ಎ.ಕೆ. ದೇಶಪಾಂಡೆ ಆಸ್ಟ್ರೇಲಿಯಾ ವಿರುದ್ಧ 4 ಕ್ಯಾಚ್ ಪಡೆದಿದ್ದರು. ಇದೀಗ ರಿಚಾ ಘೋಷ್ ಕೂಡ 4 ಕ್ಯಾಚ್ ಹಿಡಿಯುವ ಮೂಲಕ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಮಹಿಳಾ ತಂಡದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Richa Ghosh became the only wicket keeper to have 5 or more dismissals in a World Cup debut)