AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ಧೂರಿಯಾಗಿ ಜರುಗಿತು ರಿಂಕು ಸಿಂಗ್- ಪ್ರಿಯಾ ಸರೋಜ್ ನಿಶ್ಚಿತಾರ್ಥ; ವಿಡಿಯೋ ನೋಡಿ

Rinku Singh Priya Saroj Engagement: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಮತ್ತು ಎಸ್‌ಪಿ ಸಂಸದೆ ಪ್ರಿಯಾ ಸರೋಜ್ ಅವರು ಲಕ್ನೋದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಯಾ ಬಚ್ಚನ್ ಮುಂತಾದ ಗಣ್ಯರು ಭಾಗವಹಿಸಿದ್ದರು. ವಿಶೇಷವಾಗಿ ಆರ್ಡರ್ ಮಾಡಿದ ಉಂಗುರಗಳೊಂದಿಗೆ ನಡೆದ ಈ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾರಣಾಸಿಯಲ್ಲಿ ನವೆಂಬರ್ 18 ರಂದು ಅವರ ವಿವಾಹ ನಡೆಯಲಿದೆ.

ಅದ್ಧೂರಿಯಾಗಿ ಜರುಗಿತು ರಿಂಕು ಸಿಂಗ್- ಪ್ರಿಯಾ ಸರೋಜ್ ನಿಶ್ಚಿತಾರ್ಥ; ವಿಡಿಯೋ ನೋಡಿ
Rinku Singh
ಪೃಥ್ವಿಶಂಕರ
|

Updated on: Jun 08, 2025 | 3:54 PM

Share

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ (Rinku Singh) ಮತ್ತು ಜೌನ್‌ಪುರದ ಮಚ್ಲಿಶಹರ್‌ನ ಎಸ್‌ಪಿ ಸಂಸದೆ ಪ್ರಿಯಾ ಸರೋಜ್ (Priya Saroj) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜೂನ್ 8 ರ ಭಾನುವಾರ, ಲಕ್ನೋದ ಪಂಚತಾರಾ ಹೋಟೆಲ್ ದಿ ಸೆಂಟ್ರಮ್‌ನಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ರಿಂಕು ಸಿಂಗ್, ಪ್ರಿಯಾ ಸರೋಜ್ ಅವರ ಬೆರಳಿಗೆ ಉಂಗುರ ತೊಡಿಸುತ್ತಿದ್ದಂತೆ, ಪ್ರಿಯಾ ಅವರು ಭಾವುಕರಾದರು. ಕೂಡಲೇ ರಿಂಕು ಸಿಂಗ್ ಅವರನ್ನು ಸಮಾಧಾನಪಡಿಸಿದರು. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಕೂಡ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಆಗಮಿಸಿದ್ದರು. ಇವರ ಜೊತೆಗೆ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಜಯಾ ಬಚ್ಚನ್, ಟೀಂ ಇಂಡಿಯಾದ ಮಾಜಿ ಆಟಗಾರರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ ಅವರಲ್ಲದೆ, ಯುಪಿ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಭಾವುಕರಾದ ಪ್ರಿಯಾ

ರಿಂಕು ಸಿಂಗ್ ಬಿಳಿ ಶೇರ್ವಾನಿ ಧರಿಸಿದ್ದರೆ, ಪ್ರಿಯಾ ಸರೋಜ್ ಗುಲಾಬಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. ವೇದಿಕೆ ಮೇಲೇರಿದ ತಕ್ಷಣ, ಪ್ರಿಯಾ ಭಾವುಕರಾದರು. ಅವರ ಕಣ್ಣುಗಳಿಂದ ನೀರು ಬಂತು, ಇದನ್ನು ಗಮನಿಸಿದ ರಿಂಕು ಸಿಂಗ್ ಅವರನ್ನು ಸಮಾಧಾನ ಪಡಿಸಿದರು. ಇದಾದ ನಂತರ, ಇಬ್ಬರೂ ನಗುತ್ತಾ ಪೋಸ್ ನೀಡಲು ಪ್ರಾರಂಭಿಸಿದರು. ಈ ಸಮಾರಂಭಕ್ಕೆ ಸುಮಾರು 300 ಅತಿಥಿಗಳು ಆಗಮಿಸಿದ್ದರು. ಇದರಲ್ಲಿ ಎಸ್‌ಪಿ ನಾಯಕರಾದ ರಾಮ್ ಗೋಪಾಲ್ ಯಾದವ್, ಶಿವಪಾಲ್ ಸಿಂಗ್ ಯಾದವ್, ಸಂಸದ ರಾಜೀವ್ ರೈ, ಜಿಯಾವುರ್ ರೆಹಮಾನ್ ಬಾರ್ಕ್, ಮೊಹಿಬುಲ್ಲಾ ನದ್ವಿ ಸೇರಿದ್ದಾರೆ.

ವಿಶೇಷ ಉಂಗುರಗಳ ಆರ್ಡರ್

ನಿಶ್ಚಿತಾರ್ಥ ಸಮಾರಂಭಕ್ಕಾಗಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಪರಸ್ಪರ ವಿಶೇಷ ಉಂಗುರಗಳನ್ನು ಆರ್ಡರ್ ಮಾಡಿದ್ದರು. ಪ್ರಿಯಾ ಕೋಲ್ಕತ್ತಾದಿಂದ ಡಿಸೈನರ್ ಉಂಗುರವನ್ನು ಖರೀದಿಸಿದ್ದರೆ, ರಿಂಕು ಸಿಂಗ್ ಮುಂಬೈನಿಂದ ವಿಶೇಷ ಉಂಗುರವನ್ನು ಆರ್ಡರ್ ಮಾಡಿದ್ದರು. ಎರಡೂ ಉಂಗುರಗಳ ಒಟ್ಟು ಬೆಲೆ ಸುಮಾರು 2.5 ಲಕ್ಷ ರೂ. ಎಂದು ಹೇಳಲಾಗುತ್ತದೆ. ಇದಲ್ಲದೆ ಈ ಸಮಾರಂಭದಲ್ಲಿ ವಿಶೇಷ ಭೋಜನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದರಲ್ಲಿ ಯುರೋಪಿಯನ್​ನಿಂದ ಚೈನೀಸ್ ವರೆಗೆ ವಿವಿಧ ಭಕ್ಷ್ಯಗಳು ಸೇರಿದ್ದವು.

Rinku Singh’s Wedding: ಭಾವಿ ಪತ್ನಿಯ ಆಸೆಯಂತೆ ಐಷರಾಮಿ ಮನೆ ಖರೀದಿಸಿದ ರಿಂಕು ಸಿಂಗ್

ವಾರಣಾಸಿಯಲ್ಲಿ ಮದುವೆ

ರಿಂಕು ಮತ್ತು ಪ್ರಿಯಾ ಅವರ ವಿವಾಹ ನವೆಂಬರ್ 18 ರಂದು ವಾರಣಾಸಿಯ ಹೋಟೆಲ್ ತಾಜ್‌ನಲ್ಲಿ ನಡೆಯಲಿದೆ. ಕ್ರಿಕೆಟ್ ತಾರೆಯರು, ಚಲನಚಿತ್ರ ಸ್ಟಾರ್ಸ್​ ಮತ್ತು ಕೈಗಾರಿಕೋದ್ಯಮಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ