AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rinku Singh’s Wedding: ಭಾವಿ ಪತ್ನಿಯ ಆಸೆಯಂತೆ ಐಷರಾಮಿ ಮನೆ ಖರೀದಿಸಿದ ರಿಂಕು ಸಿಂಗ್

Rinku Singh's Wedding: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ ನಾಯಕಿ ಪ್ರಿಯಾ ಸರೋಜ್ ಅವರನ್ನು ಮದುವೆಯಾಗಲಿದ್ದಾರೆ. ಒಂದು ವರ್ಷದ ಪರಿಚಯದ ನಂತರ ಈ ಮದುವೆ ನಿಶ್ಚಯವಾಗಿದೆ. ರಿಂಕು ಅವರು ಪ್ರಿಯಾ ಅವರ ಆಸೆಯಂತೆ ಅಲಿಗಢದಲ್ಲಿ 3.5 ಕೋಟಿ ರೂಪಾಯಿ ಬೆಲೆಯ ಮನೆಯನ್ನು ಖರೀದಿಸಿದ್ದಾರೆ.

Rinku Singh's Wedding: ಭಾವಿ ಪತ್ನಿಯ ಆಸೆಯಂತೆ ಐಷರಾಮಿ ಮನೆ ಖರೀದಿಸಿದ ರಿಂಕು ಸಿಂಗ್
ರಿಂಕು ಸಿಂಗ್, ಪ್ರಿಯಾ ಸರೋಜ್
ಪೃಥ್ವಿಶಂಕರ
|

Updated on:Jan 20, 2025 | 6:46 PM

Share

ಭಾರತ ಟಿ20 ತಂಡದಲ್ಲಿ ಪ್ರಸ್ತುತ ಖಾಯಂ ಸದಸ್ಯನಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಅವರು ಶೀಘ್ರದಲ್ಲೇ ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಪ್ರಿಯಾ ಸರೋಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಸ್ವತಃ ಈ ವಿಚಾರವನ್ನು ಪ್ರಿಯಾ ಅವರ ತಂದೆಯೇ ಖಚಿತಪಡಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಈ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದು, ಇದೀಗ ಕುಟುಂಬದ ಸಮ್ಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಲ್ಲದೆ ಭಾವಿ ಮಡದಿಯ ಆಸೆಯಂತೆಯೇ ರಿಂಕು ಸಿಂಗ್ ಅಲಿಗಢದಲ್ಲಿ ದುಬಾರಿ ಬೆಲೆಯನ್ನು ಮನೆಯನ್ನು ಸಹ ಖರೀದಿಸಿದ್ದಾರೆ.

3.5 ಕೋಟಿ ರೂ ಬೆಲೆಯ ಮನೆ ಖರೀದಿ

ವಾಸ್ತವವಾಗಿ, ರಿಂಕು ಸಿಂಗ್ ಇತ್ತೀಚೆಗೆ ಅಲಿಗಢದಲ್ಲಿ ಹೊಸ ಮನೆಯನ್ನು ಖರೀದಿಸಿದ್ದು, ಈಗಾಗಲೇ ಆ ಮನೆಗೆ ರಿಂಕು ಕುಟುಂಬ ಶಿಫ್ಟ್ ಆಗಿದೆ. ವಿಶೇಷವೆಂದರೆ ಪ್ರಿಯಾ ಸರೋಜ್ ಅವರ ಆಯ್ಕೆಯ ಮೇರೆಗೆ ರಿಂಕು ಸಿಂಗ್ ಈ ಮನೆಯನ್ನು ಖರೀದಿಸಿದ್ದಾರೆ. ಪ್ರಿಯಾ ಸರೋಜ್ ಅವರು ಓಕೆ ಮಾಡಿದ ನಂತರವೇ ರಿಂಕು ಸಿಂಗ್ ಈ ಐಷಾರಾಮಿ ಬಂಗಲೆಯನ್ನು ಖರೀದಿಸಿರುವುದಾಗಿ ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ರಿಂಕು ಸಿಂಗ್ ಅವರು ಈ ಮನೆಯನ್ನು ಖರೀದಿಸಬೇಕೇ ಅಥವಾ ಬೇಡವೇ ಎಂಬ ದ್ವಂದ್ವದಲ್ಲಿದ್ದರು. ಆದರೆ ಈ ಮನೆ ಪ್ರಿಯಾ ಸರೋಜ್ ಅವರಿಗೆ ಇಷ್ಟವಾಗಿ ಖರೀದಿಸುವಂತೆ ಕೇಳಿಕೊಂಡಿದ್ದರು. ಇದಲ್ಲದೆ ಪ್ರಿಯಾ ಅವರ ಸಲಹೆಯ ಮೇರೆಗೆ ಬಂಗಲೆಯ ಒಳಾಂಗಣವನ್ನು ಬದಲಾಯಿಸಲಾಗಿದ್ದು, ಈ ಮನೆಯ ಬೆಲೆ ಸುಮಾರು 3.5 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ರಿಂಕು- ಪ್ರಿಯಾ ಪರಿಚಯವಾಗಿದ್ದು ಹೇಗೆ?

ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಸ್ನೇಹಿತೆಯ ತಂದೆ ಕ್ರಿಕೆಟಿಗರಾಗಿದ್ದಾರೆ, ಅವರಿಗೆ ರಿಂಕು ಸಿಂಗ್ ಅವರ ಪರಿಚಯವಿತ್ತು. ಅವರ ಮೂಲಕವೇ ರಿಂಕು ಮತ್ತು ಪ್ರಿಯಾ ಭೇಟಿಯಾಗಿದ್ದಾರೆ. ಈ ಇಬ್ಬರೂ ಸುಮಾರು ಒಂದು ವರ್ಷದಿಂದ ಪರಸ್ಪರ ಪರಿಚಿತರಾಗಿದ್ದು, ಆ ನಂತರ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ವಿಚಾರವನ್ನು ಪ್ರಿಯಾ ಅವರು ಮೊದಲು ತನ್ನ ಅಕ್ಕ ಪ್ರಿಯಾಂಕಾಗೆ ಹೇಳಿದ್ದಾರೆ. ಇದಾದ ಬಳಿಕ ಇಬ್ಬರ ಮನೆಯವರಿಗೂ ಈ ವಿಚಾರವನ್ನು ತಿಳಿಸಿದ್ದು, ಇದೀಗ ಮದುವೆಗೂ ಒಪ್ಪಿಗೆ ಸೂಚಿಸಿದ್ದಾರೆ.

ಪ್ರಿಯಾ ಸರೋಜ್ ಅವರ ತಂದೆ ಹೇಳಿದ್ದೇನು?

ಪ್ರಿಯಾ ಅವರ ತಂದೆ ತೂಫಾನಿ ಸರೋಜ್ ಅವರು ಮದುವೆಯ ಬಗ್ಗೆ ಮಾಹಿತಿ ನೀಡಿದ್ದು, ಎರಡೂ ಕುಟುಂಬದವರ ನಡುವೆ ಮಾತುಕತೆ ನಡೆದಿದ್ದು, ಮದುವೆಗೆ ತಯಾರಿ ಆರಂಭಿಸಲಾಗಿದೆ. ಸಂಸತ್ತಿನ ಅಧಿವೇಶನ ಮುಗಿದ ನಂತರ ನಿಶ್ಚಿತಾರ್ಥ ಮತ್ತು ಮದುವೆಯ ದಿನಾಂಕವನ್ನು ನಿರ್ಧರಿಸಲಾಗುವುದು. ಈಗಿನ ನಿರ್ಧಾರದ ಪ್ರಕಾರ ಲಕ್ನೋದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Mon, 20 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ