Rishabh Pant: ಯುಟ್ಯೂಬ್ ಗಳಿಕೆಯನ್ನು ದಾನ ಮಾಡುತ್ತೇನೆ: ರಿಷಭ್ ಪಂತ್

|

Updated on: Jun 16, 2024 | 1:03 PM

T20 World Cup 2024: ಟಿ20 ವಿಶ್ವಕಪ್​ನಲ್ಲಿ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಗೆದ್ದು ಬೀಗಿತ್ತು. ಹಾಗೆಯೇ ಕೆನಡಾ ವಿರುದ್ಧದ ನಾಲ್ಕನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇನ್ನು ಭಾರತ ತಂಡವು ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ.

Rishabh Pant: ಯುಟ್ಯೂಬ್ ಗಳಿಕೆಯನ್ನು ದಾನ ಮಾಡುತ್ತೇನೆ: ರಿಷಭ್ ಪಂತ್
Rishabh Pant
Follow us on

ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ರಿಷಭ್ ಪಂತ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಟಿ20 ವಿಶ್ವಕಪ್​ನ ಮೂರು ಪಂದ್ಯಗಳಲ್ಲೂ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದ ನಡುವೆ ಪಂತ್ ಸೋಷಿಯಲ್ ಮೀಡಿಯಾದಲ್ಲೂ ಮಿಂಚಿದ್ದಾರೆ. ಹೌದು, ರಿಷಭ್ ಪಂತ್ ಅವರ ಯುಟ್ಯೂಬ್ ಚಾನೆಲ್​ನಲ್ಲಿ 1 ಲಕ್ಷ ಸಬ್ಸ್​ಕ್ರೈಬರ್ಸ್ ಆಗಿದ್ದಾರೆ. ಈ ಖುಷಿಯನ್ನು ಖುದ್ದು ಪಂತ್ ಹಂಚಿಕೊಂಡಿದ್ದು, ಯುಟ್ಯೂಬ್ ಕಡೆಯಿಂದ ಸಿಲ್ವರ್ ಪ್ಲೇ ಬಟನ್ ಸಿಕ್ಕಿದೆ. ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರೆಯಲಿ ಎಂದಿದ್ದಾರೆ.

ದುಡ್ಡನ್ನು ದಾನ ಮಾಡುವುದಾಗಿ ಘೋಷಣೆ:

ರಿಷಭ್ ಪಂತ್ ಐಪಿಎಲ್ ಸಮಯದಲ್ಲಿ ತಮ್ಮ ಅಧಿಕೃತ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದರು. ಒಂದು ತಿಂಗಳೊಳಗೆ ಈ ಚಾನೆಲ್​ಗೆ 1 ಲಕ್ಷ 20 ಸಾವಿರ ಚಂದಾದಾರರು ಸಿಕ್ಕಿದ್ದಾರೆ. ಇದೇ ಖುಷಿಯಲ್ಲಿ ಮಾತನಾಡಿರುವ ಪಂತ್, ಯುಟ್ಯೂಬ್​ ಚಾನೆಲ್‌ನಿಂದ ಬರುವ ಎಲ್ಲಾ ಆದಾಯವನ್ನು ಉದಾತ್ತ ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ಅಂದರೆ ದಾನ ಧರ್ಮಗಳಿಗೆ ವಿನಿಯೋಗಿಸುತ್ತೇನೆ ಎನ್ನುವ ಮೂಲಕ ರಿಷಭ್ ಪಂತ್ ಇದೀಗ ಎಲ್ಲರ ಮನಗೆದ್ದಿದ್ದಾರೆ.

ಪಂತ್ ಪವರ್​ಫುಲ್ ಆಟ:

ಟಿ20 ವಿಶ್ವಕಪ್​ನಲ್ಲಿ ರಿಷಭ್ ಪಂತ್ ಇದುವರೆಗೆ 96 ರನ್ ಗಳಿಸಿದ್ದಾರೆ. ಅವರು ಪಾಕಿಸ್ತಾನ್ ವಿರುದ್ಧ 31 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಪಂತ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇನ್ನು ಐರ್ಲೆಂಡ್ ವಿರುದ್ಧ 36 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇದಲ್ಲದೆ, ಅಮೆರಿಕ ವಿರುದ್ಧ 20 ಎಸೆತಗಳಲ್ಲಿ 18 ರನ್ ಕೊಡುಗೆ ನೀಡಿದ್ದರು.

ಹಾಗೆಯೇ ಈ ಮೂರು ಪಂದ್ಯಗಳಲ್ಲೂ ಅತ್ಯುತ್ತಮ ಕೀಪಿಂಗ್ ಅನ್ನು ಸಹ ಮಾಡಿದ್ದಾರೆ. ಫ್ಲೋರಿಡಾದಲ್ಲಿ ಕೆನಡಾ ವಿರುದ್ಧದ ಪಂದ್ಯಕ್ಕೂ ಮುನ್ನ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್ ಅವರ ಪುನರಾಗಮನದ ಅತ್ಯುತ್ತಮ ವಿಷಯವೆಂದರೆ ಅವರ ಕೀಪಿಂಗ್ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: T20 World Cup 2024: ಆಂಗ್ಲರ ಕೈ ಹಿಡಿದ ಆಸ್ಟ್ರೇಲಿಯನ್ನರು

ಪಂತ್ ಅವರ ಚಲನೆ ಮತ್ತು ಡೈವ್ ಟೀಮ್ ಇಂಡಿಯಾಕ್ಕೆ ಅತ್ಯಂತ ಧನಾತ್ಮಕ ವಿಷಯವಾಗಿದೆ. ರಿಷಬ್ ಪಂತ್ ಭಾರತಕ್ಕೆ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಲ್ಲಿಯವರೆಗೆ ಅವರು ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸೂಪರ್-8 ಸುತ್ತಿನ ಪಂದ್ಯಗಳಲ್ಲೂ ರಿಷಭ್ ಪಂತ್ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

 

Published On - 1:02 pm, Sun, 16 June 24