T20 World Cup 2024: ನಮ್ಮ ತಂಡ ವಿರುದ್ಧ ನೇಪಾಳ ಗೆಲ್ಲಬೇಕಿತ್ತು ಎಂದ ಆಫ್ರಿಕಾದ ಲೆಜೆಂಡರಿ ಬೌಲರ್..!

T20 World Cup 2024: ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ನೇಪಾಳ ಸೋಲಿಸಿದ್ದರೆ, ಈ ಬಾರಿಯ ವಿಶ್ವಕಪ್‌ನ ಅವಿಸ್ಮರಣೀಯ ಕ್ಷಣವಾಗುತ್ತಿತ್ತು. ಸ್ಟ್ಯಾಂಡ್‌ನಲ್ಲಿ ಅಭಿಮಾನಿಗಳು ಅಳುವುದನ್ನು ನಾನು ನೋಡಿದ್ದೇನೆ. ಇದು ಜನರಿಗೆ ಕ್ರಿಕೆಟ್ ಎಂದರೇನು ಎಂಬುದನ್ನು ತೋರಿಸುತ್ತದೆ ಎಂದು ಡೇಲ್ ಸ್ಟೇನ್ ಹೇಳಿದರು.

T20 World Cup 2024: ನಮ್ಮ ತಂಡ ವಿರುದ್ಧ ನೇಪಾಳ ಗೆಲ್ಲಬೇಕಿತ್ತು ಎಂದ ಆಫ್ರಿಕಾದ ಲೆಜೆಂಡರಿ ಬೌಲರ್..!
ಡೇಲ್ ಸ್ಟೇನ್, ನೇಪಾಳ ತಂಡ
Follow us
|

Updated on: Jun 16, 2024 | 3:42 PM

ಜೂನ್ 14 ರಂದು ನಡೆದ ಟಿ20 ವಿಶ್ವಕಪ್​ನ (T20 World Cup 2024) ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳ (South Africa vs Nepal) ತಂಡ ಕೇವಲ ಒಂದು ರನ್‌ನಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ನೇಪಾಳ ತಂಡ ಸೋತರೂ ತಮ್ಮ ಆಟದಿಂದ ಎಲ್ಲರ ಮನಗೆದ್ದಿತು. ಆಫ್ರಿಕಾದಂತಹ ಬಲಿಷ್ಠ ಬೌಲಿಂಗ್ ಎದುರು ನೇಪಾಳ ತಂಡ ಗೆಲುವಿಗಾಗಿ ನೀಡಿದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲು ಆಫ್ರಿಕಾ ತಂಡವನ್ನು ಕೇವಲ 115 ರನ್​ಗಳಿಗೆ ಕಟ್ಟಿಹಾಕಿದ್ದ ನೇಪಾಳ ತಂಡ, ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿ ವಿರೋಚಿತ ಸೋಲು ಕಂಡಿತು. ಹೀಗಾಗಿ ನೇಪಾಳ ತಂಡದ ಹೋರಾಟಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ವತಃ ದಕ್ಷಿಣ ಅಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ (Dale Steyn) ಕೂಡ ನೇಪಾಳ ವಿರುದ್ಧ ನಮ್ಮ ತಂಡ ಸೋಲಬೇಕಿತ್ತು ಎಂಬ ಹೇಳಿಕೆ ನೀಡಿದ್ದಾರೆ.

ನೇಪಾಳ ಗೆಲ್ಲಬೇಕಿತ್ತು ಎಂದ ಸ್ಟೇನ್

ಈ ಪಂದ್ಯದ ಬಗ್ಗೆ ಮಾತನಾಡಿದ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಸ್ಟೇನ್, ‘ಈ ಪಂದ್ಯವನ್ನು ವೀಕ್ಷಿಸಲು ಅದ್ಭುತವಾಗಿತ್ತು. ನನ್ನ ಪ್ರಕಾರ, ಇದುವರೆಗಿನ ಟೂರ್ನಿಯ ಅತ್ಯುತ್ತಮ ಪಂದ್ಯವಾಗಿತ್ತು. ನಿಜ ಹೇಳಬೇಕೆಂದರೆ, ನಾನು ಯಾವಾಗಲೂ ಅಂಡರ್‌ಡಾಗ್ ತಂಡಗಳ ಅಭಿಮಾನಿಯಾಗಿದ್ದೇನೆ. ಈ ಕಾರಣಕ್ಕಾಗಿ, ದಕ್ಷಿಣ ಆಫ್ರಿಕಾದವನಾಗಿದ್ದರೂ, ನಾನು ನೇಪಾಳದ ಗೆಲುವನ್ನು ಬಯಸಿದ್ದೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ನೇಪಾಳ ಸೋಲಿಸಿದ್ದರೆ, ಈ ಬಾರಿಯ ವಿಶ್ವಕಪ್‌ನ ಅವಿಸ್ಮರಣೀಯ ಕ್ಷಣವಾಗುತ್ತಿತ್ತು. ಸ್ಟ್ಯಾಂಡ್‌ನಲ್ಲಿ ಅಭಿಮಾನಿಗಳು ಅಳುವುದನ್ನು ನಾನು ನೋಡಿದ್ದೇನೆ. ಇದು ಜನರಿಗೆ ಕ್ರಿಕೆಟ್ ಎಂದರೇನು ಎಂಬುದನ್ನು ತೋರಿಸುತ್ತದೆ. ಅವರು ಯಾವಾಗಲೂ 200 ರನ್ ಸ್ಕೋರ್ ನೋಡಲು ಬರುವುದಿಲ್ಲ. ಇದು ನಿಜವಾದ ಕ್ರಿಕೆಟ್. ಜನರು ಈ ಬಗ್ಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ನೇಪಾಳ ಈ ಪಂದ್ಯವನ್ನು ಗೆದ್ದಿದ್ದರೆ ಅದು ಟೂರ್ನಿಯ ಅವಿಸ್ಮರಣೀಯ ಕ್ಷಣವಾಗುತ್ತಿತ್ತು. ಅವರು ಅದ್ಭುತ ಪ್ರದರ್ಶನ ನೀಡಿದ್ದು, ಈ ಗೆಲುವಿಗೆ ಅರ್ಹರಾಗಿದ್ದರು ಎಂದಿದ್ದಾರೆ.

View this post on Instagram

A post shared by ICC (@icc)

ಕೊನೆಯಲ್ಲಿ ಎಡವಿದ ನೇಪಾಳ

ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳದ ಗೆಲುವಿಗೆ ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಮಾರ್ಕ್ರಾಮ್ ಕೊನೆಯ ಓವರ್‌ನ ಜವಾಬ್ದಾರಿಯನ್ನು ವೇಗದ ಬೌಲರ್ ಒಟ್ನೀಲ್ ಬಾರ್ಟ್‌ಮನ್‌ಗೆ ವಹಿಸಿದ್ದರು. ಗುಲ್ಶನ್ ಝಾ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ನೇಪಾಳವನ್ನು ಸ್ಕೋರ್ ಹತ್ತಿರಕ್ಕೆ ಕೊಂಡೊಯ್ದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಕದಿಯುವ ಮೂಲಕ ನೇಪಾಳವನ್ನು ಗೆಲುವಿನ ಸಮೀಪಕ್ಕೆ ತಂದರು. ಐದನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಗೆಲುವಿಗೆ ಕೊನೆಯ ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿತ್ತು. ಆದರೆ ಕ್ಲಾಸೆನ್, ಗುಲ್ಶನ್ ಝಾ ಅವರನ್ನು ರನ್ ಔಟ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ ರೋಚಕ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..