Rohit Sharma: ಮೊದಲ ಎಸೆತದಲ್ಲೇ ಔಟ್ ಆಗಲಿದ್ದ ರೋಹಿತ್ ಶರ್ಮಾ: ರಿತಿಕಾ ನೀಡಿದ ಎಕ್ಸ್​ಪ್ರೆಷನ್ ಭರ್ಜರಿ ವೈರಲ್

| Updated By: Vinay Bhat

Updated on: Nov 01, 2021 | 12:07 PM

Ritika Sajdeh's reaction in IND vs NZ Match: ತಾನು ಎದುರಿಸಿದ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ಔಟಾಗಲಿದ್ದರು. ಆದರೆ, ಆ್ಯಡಂ ಮಿಲ್ನೆ ಸುಲಭ ಕ್ಯಾಚರನ್ನು ಕೈಚೆಲ್ಲಿದರು. ಇದೇ ಸಂದರ್ಭ ರೋಹಿತ್ ಪತ್ನಿ ರಿತಿಕಾ ರೋಹಿತ್ ಔಟಾದರೆಂದು ತಿಳಿದು ಶಾಕಿಂಗ್ ಎಕ್ಸ್​ಪ್ರೆಷನ್ ನೀಡಿದರು.

Rohit Sharma: ಮೊದಲ ಎಸೆತದಲ್ಲೇ ಔಟ್ ಆಗಲಿದ್ದ ರೋಹಿತ್ ಶರ್ಮಾ: ರಿತಿಕಾ ನೀಡಿದ ಎಕ್ಸ್​ಪ್ರೆಷನ್ ಭರ್ಜರಿ ವೈರಲ್
Ritika Sajdeh and Rohit Sharma
Follow us on

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್​ನ (T20 World Cup) ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಭಾರತ (India vs New Zealand) ಹೀನಾಯ ಸೋಲುಕಂಡಿದೆ. ಬ್ಯಾಟಿಂಗ್​ನಲ್ಲಿ ಮತ್ತೆ ಸಂಪೂರ್ಣ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ (Team India) ಈ ಸೋಲಿನ ಮೂಲಕ ತನ್ನ ವಿಶ್ವಕಪ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ‘ಕ್ವಾರ್ಟರ್ ಫೈನಲ್’ ಮಾದರಿಯಂತಿದ್ದ ಪಂದ್ಯದಲ್ಲಿ ಭಾರತ (India) ತಂಡ 8 ವಿಕೆಟ್‌ಗಳಿಂದ ಶರಣಾಯಿತು. ಪ್ರಮುಖವಾಗಿ ಭಾರತ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನಿಭವಿಸಿತು. ಈ ಪೈಕಿ ಉಪ ನಾಯಕ ರೋಹಿತ್ ಶರ್ಮಾ (Rohit Sharma) ಬಂದ ಬೆನ್ನಲ್ಲೇ ಔಟಾಗುವುದರಲ್ಲಿದ್ದರು. ಕ್ಯಾಚ್ ಡ್ರಾಪ್ ಆದ ಕಾರಣ ಸ್ವಲ್ಪದರಲ್ಲೆ ಅಪಾಯದಿಂದ ಪಾರಾದರು. ಈ ಸಂದರ್ಭ ಇವರ ಪತ್ನಿ ರಿತಿಕಾ (Ritika Sajdeh) ನೀಡಿದ ಎಕ್ಸ್​ಪ್ರೆಷನ್ ವಿಡಿಯೋ ಭರ್ಜರಿ ವೈರಲ್ (Viral Video) ಆಗುತ್ತಿದೆ.

ಹೌದು, ಪಂದ್ಯ ಆರಂಭಕ್ಕು ಮುನ್ನ ಮೆಂಟರ್ ಧೋನಿ, ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಕೆಲವು ಬದಲಾವಣೆ ಜೊತೆಗೆ ಪ್ರಯೋಗವನ್ನು ಮಾಡಿ ಕಣಕ್ಕಿಳಿಯಲು ನಿರ್ಧರಿಸಿದರು. ಆದರೆ, ಈ ಪ್ಲಾನ್ ಸಂಪೂರ್ಣ ಕೈಕೊಟ್ಟಿತು. ಭಾರತ ಈ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿತು. ಸೂರ್ಯಕುಮಾರ್ ಅವರಿಗೆ ಗಾಯದ ಸಮಸ್ಯೆಯಾದ್ದರಿಂದ ಇಶಾನ್ ಕಿಶನ್ ಅವರನ್ನ ಆಡಿಸಲಾಯಿತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್​ಗೆ ಅವಕಾಶ ಕೊಡಲಾಯಿತು.

ಆದರೆ, ಈ ಎರಡೂ ಬದಲಾವಣೆಗಳಿಂದ ಭಾರತಕ್ಕೆ ತೃಣಮಾತ್ರವೂ ವರ್ಕೌಟ್ ಆಗಲಿಲ್ಲ. ಇಶಾನ್ ಕಿಶನ್ ಕೇವಲ 4 ರನ್​ಗೆ ಔಟ್ ಆದರು. ಶಾರ್ದೂಲ್ ಠಾಕೂರ್ ಹಾಕಿದ 9 ಎಸೆತದಲ್ಲಿ 17 ರನ್ನಿತ್ತು ದುಬಾರಿ ಎನಿಸಿದರು. ಬ್ಯಾಟಿಂಗ್​ನಲ್ಲೂ ಅವರಿಂದ ಬಂದದ್ದು ಸೊನ್ನೆ ರನ್.

ಇನ್ನಿಂಗ್ಸ್ ಓಪನ್​ಗೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಕಳುಹಿಸಿವ ಪ್ರಯೋಗ ವಿಫಲವಾಯಿತು. ಹೀಗಾಗಿ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ, ತಾನು ಎದುರಿಸಿದ ಮೊದಲ ಎಸೆತದಲ್ಲೇ ಹಿಟ್​ಮ್ಯಾನ್ ಔಟಾಗಲಿದ್ದರು. ಟ್ರೆಂಟ್ ಬೌಲ್ಟ್ ಅವರ ಸ್ಲೋ ಬೌನ್ಸರ್ ಅನ್ನು ಸಿಕ್ಸರ್​ಗೆ ಅಟ್ಟಲು ರೋಹಿತ್ ಯತ್ನಿಸಿದರು. ಆದರೆ, ಚೆಂಡು ಅಷ್ಟೊಂದು ದೂರ ಹೋಗದೆ ಫಿಲ್ಡರ್ ಆ್ಯಡಂ ಮಿಲ್ನೆ ಕೈಬಳಿ ಬಂತು. ಮಿಲ್ನೆ ಸುಲಭ ಕ್ಯಾಚರನ್ನು ಕೈಚೆಲ್ಲಿದರು. ಇದೇ ಸಂದರ್ಭ ರೋಹಿತ್ ಪತ್ನಿ ರಿತಿಕಾ ರೋಹಿತ್ ಔಟಾದರೆಂದು ತಿಳಿದು ಶಾಕಿಂಗ್ ಎಕ್ಸ್​ಪ್ರೆಷನ್ ನೀಡಿದರು. ಬಳಿಕ ಕ್ಯಾಚ್ ಬಿಟ್ಟಿದ್ದನ್ನು ಕಂಡು ನಿರಾಳಗೊಂಡರು.

 

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತ ವಿರಾಟ್ ಕೊಹ್ಲಿ ಬಳಗ ಬ್ಯಾಟಿಂಗ್‌ಗಿಳಿಯಿತು. ವೇಗಿ ಟ್ರೆಂಟ್ ಬೌಲ್ಟ್ (20ಕ್ಕೆ 3) ಹಾಗೂ ಸ್ಪಿನ್ನರ್ ಇಶ್ ಸೋಧಿ (17ಕ್ಕೆ 2) ಮಾರಕ ದಾಳಿಗೆ ನಲುಗಿದ ಭಾರತ ತಂಡ 7 ವಿಕೆಟ್‌ಗೆ 110 ರನ್‌ಗಳಿಸಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ 111 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಮಾರ್ಟಿಕ್ ಗುಪ್ಟಿಲ್ (20) ಹಾಗೂ ಡೆರಿಲ್ ಮಿಚೆಲ್ (49ರನ್, 35ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿ ಉತ್ತಮ ಬಿರುಸಿನ ಆರಂಭ ನೀಡಿದರು.

T20 World Cup Point Table: ಪಾಯಿಂಟ್ ಟೇಬಲ್​ನಲ್ಲಿ ಪಾತಾಳಕ್ಕೆ ಕುಸಿದ ಭಾರತ: ಟಾಪ್​ಗೆ ಬರಲು ಏನು ಮಾಡಬೇಕು?

Jasprit Bumrah: ವಿಶ್ರಾಂತಿ ಬೇಕು: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಶಾಕಿಂಗ್ ಹೇಳಿಕೆ ಕೊಟ್ಟ ಜಸ್​ಪ್ರೀತ್ ಬುಮ್ರಾ

(Ritika Sajdehs reaction video goes viral after Adam Milne dropped Rohit Sharma Catch in IND vs NZ Match)