T20 World Cup 2021: ಟೀಮ್ ಇಂಡಿಯಾ ಸೋತ ಬೆನ್ನಲ್ಲೇ IPL ಬ್ಯಾನ್ ಮಾಡುವಂತೆ ಆಗ್ರಹ
BAN IPL: ಸದ್ಯ ಸತತ ಎರಡು ಸೋಲನುಭವಿಸಿರುವ ಭಾರತಕ್ಕೆ ಇನ್ನೂ ಮೂರು ಪಂದ್ಯಗಳಿವೆ. ಅಫ್ಘಾನಿಸ್ತಾನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ರೇಟ್ ಹೆಚ್ಚಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
ಟಿ20 ವಿಶ್ವಕಪ್ನಲ್ಲಿ (T20 World Cup 2021) ಪಾಕಿಸ್ತಾನ್ ವಿರುದ್ದ ಸೋತಿದ್ದ ಭಾರತ ಇದೀಗ ನ್ಯೂಜಿಲೆಂಡ್ (India vs New Zealand) ವಿರುದ್ದ ಕೂಡ ಮುಗ್ಗರಿಸಿದೆ. ಈ ಸತತ ಸೋಲಿನೊಂದಿಗೆ ಟೀಮ್ ಇಂಡಿಯಾದ ಸೆಮಿಫೈನಲ್ ಕನಸು ಕೂಡ ಬಹುತೇಕ ಕಮರಿದೆ. ಇತ್ತ ಈ ಸಲ ಟಿ20 ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾದ (Team India) ಕಳಪೆ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಕಾರಣ, ಐಪಿಎಲ್ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಿತ್ತು. ಆದರೆ ಐಪಿಎಲ್ನಲ್ಲಿ ಮಿಂಚಿದ್ದ ಆಟಗಾರರು ಟೀಮ್ ಇಂಡಿಯಾ ಪರ ಆಡುವಾಗ ಕಳಪೆ ಆಟ ಪ್ರದರ್ಶಿಸಿದ್ದಾರೆ. ಅಲ್ಲದೆ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿವೆ. ಏಕೆಂದರೆ ಐಪಿಎಲ್ ಮುಗಿದ ಬಳಿಕ ಬ್ರೇಕ್ ಪಡೆಯದೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ಸಜ್ಜಾಗಿತ್ತು. ಇಲ್ಲಿ ಆಟಗಾರರಿಗೂ ಹಾಗೂ ಬಿಸಿಸಿಐಗೆ ಹಣವೇ ಮುಖ್ಯವಾಗಿತ್ತು ಹೊರತು ದೇಶದ ಪ್ರತಿಷ್ಠೆ ವಿಷಯವಾಗಿರಲಿಲ್ಲ. ಹೀಗಾಗಿ ಐಪಿಎಲ್ ಬ್ಯಾನ್ ಮಾಡುವಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ದದ ಸೋಲಿನೊಂದಿಗೆ ಟ್ವಿಟರ್ನಲ್ಲಿ #BanIPL ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಈ ಹ್ಯಾಷ್ ಟ್ಯಾಗ್ ಈಗಲೂ ಮುಂದುವರೆದಿದ್ದು, ಅನೇಕ ಕ್ರಿಕೆಟ್ ಪ್ರೇಮಿಗಳು ನಮಗೆ ಐಪಿಎಲ್ಗಿಂತ ಟೀಮ್ ಇಂಡಿಯಾದ ಪ್ರದರ್ಶನ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಭಾರತ ತಂಡದ 2 ಪಂದ್ಯಗಳ ಪ್ರದರ್ಶನ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ.
ಸದ್ಯ ಸತತ ಎರಡು ಸೋಲನುಭವಿಸಿರುವ ಭಾರತಕ್ಕೆ ಇನ್ನೂ ಮೂರು ಪಂದ್ಯಗಳಿವೆ. ಅಫ್ಘಾನಿಸ್ತಾನ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ರೇಟ್ ಹೆಚ್ಚಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಒಂದು ವೇಳೆ ಈ ಮೂರು ಪಂದ್ಯಗಳಲ್ಲಿ ಭಾರತ ಜಯಿಸಿದರೂ ಸೆಮಿಫೈನಲ್ಗೇರುವುದು ಅನುಮಾನ. ಏಕೆಂದರೆ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಮೂಲಕ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಮುಂದಿನ 3 ಪಂದ್ಯಗಳಲ್ಲೂ ಜಯ ಸಾಧಿಸಿದರೂ ಸೆಮಿಫೈನಲ್ ಅವಕಾಶಕ್ಕಾಗಿ ಭಾರತ ತಂಡ ಅಫ್ಘಾನಿಸ್ತಾನ್-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶವನ್ನು ಎದುರು ನೋಡಬೇಕು.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(Ban IPL Trends On Twitter After Team India’s 8 Wicket Loss To New Zealand)