Robin Uthappa: ಸಿಎಸ್​ಕೆ ಪರ ಭರ್ಜರಿ ಬ್ಯಾಟಿಂಗ್ ಬಳಿಕ ಕೆಕೆಆರ್ ತಂಡವನ್ನು ನೆನೆದ ಉತ್ತಪ್ಪ

| Updated By: ಝಾಹಿರ್ ಯೂಸುಫ್

Updated on: Oct 11, 2021 | 5:13 PM

IPL 2021: ರಾಬಿನ್ ಉತ್ತಪ್ಪ ಐಪಿಎಲ್​ನಲ್ಲಿ ಆರ್​ಸಿಬಿ, ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದರು. ಅದರಲ್ಲೂ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್​ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು.

Robin Uthappa: ಸಿಎಸ್​ಕೆ ಪರ ಭರ್ಜರಿ ಬ್ಯಾಟಿಂಗ್ ಬಳಿಕ ಕೆಕೆಆರ್ ತಂಡವನ್ನು ನೆನೆದ ಉತ್ತಪ್ಪ
Robin Uthappa
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 14ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ರಾಬಿನ್ ಉತ್ತಪ್ಪ. ಅದರಲ್ಲೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉತ್ತಪ್ಪ ಎಲ್ಲರೂ ಹುಬ್ಬೇರುವಂತೆ ಬ್ಯಾಟ್ ಬೀಸಿದ್ದರು. ಡೆಲ್ಲಿ ಬೌಲರುಗಳನ್ನು ಮನಸೊ ಇಚ್ಛೆ ದಂಡಿಸಿದ ಉತ್ತಪ್ಪ 63 ರನ್​ಗಳನ್ನು ಚಚ್ಚಿದರು. ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಉತ್ತಪ್ಪ ಚೆನ್ನೈಯನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಗೆಲುವಿನ ಬಳಿಕ ಮಾತನಾಡಿದ ಉತ್ತಪ್ಪ, ತಮ್ಮ ಹಿಂದಿನ ತಂಡವನ್ನು ನೆನಪಿಸಿಕೊಂಡಿದ್ದು ವಿಶೇಷ. ಅದರಲ್ಲೂ ಮಾಜಿ ನಾಯಕನನ್ನು ಹಾಡಿಹೊಗಳಿ ಎಲ್ಲರ ಗಮನ ಸೆಳೆದರು.

ಹೌದು, ಗೆಲುವಿನ ನಂತರ ಮಾತನಾಡಿದ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನಲ್ಲಿ ಅತ್ಯಂತ ಸುರಕ್ಷಿತ ತಂಡ ಎಂಬ ಭಾವನೆ ನನ್ನಲ್ಲಿದೆ. ಆದರೆ ಇದಕ್ಕೂ ಮುನ್ನ ನನಗೆ ಇಂತಹ ಭಾವನೆ ನನ್ನಲಿತ್ತು. ಅದು ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲಿ. ಗೌತಿ ಮುನ್ನಡೆಸಿದ ಕೆಕೆಆರ್ ತಂಡದಲ್ಲಿ ನಾನು ತುಂಬಾ ಕಂಫರ್ಟ್​ ಆಗಿದ್ದೆ. ಇದೀಗ ಅದೇ ಅನುಭವ ಮತ್ತೆ ಸಿಗುತ್ತಿದೆ. ಇದರಿಂದಾಗಿ ಅತ್ಯುತ್ತಮವಾಗಿ ಬ್ಯಾಟ್ ಬೀಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ರಾಬಿನ್ ಉತ್ತಪ್ಪ ಐಪಿಎಲ್​ನಲ್ಲಿ ಆರ್​ಸಿಬಿ, ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಆಡಿದ್ದರು. ಅದರಲ್ಲೂ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್​ ತಂಡವು ಚಾಂಪಿಯನ್ ಪಟ್ಟಕ್ಕೇರುವಲ್ಲಿ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಕೆಕೆಆರ್​ ತಂಡದಲ್ಲಿದ್ದ ವೇಳೆ ರಾಬಿನ್ ಉತ್ತಪ್ಪ ಆರೆಂಜ್ ಕ್ಯಾಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಆ ಬಳಿಕ ಉತ್ತಪ್ಪ ಬ್ಯಾಟಿಂಗ್ ಮಂಕಾಗಿತ್ತು. ಇದೀಗ ಸಿಎಸ್​ಕೆ-ಡೆಲ್ಲಿ ನಡುವಣ ಪಂದ್ಯದ ಮೂಲಕ ಮತ್ತೆ ಹಿಂದಿನಂತೆ ಸ್ಪೋಟಕ ಇನಿಂಗ್ಸ್​ ಕಟ್ಟುವಲ್ಲಿ ಉತ್ತಪ್ಪ ಯಶಸ್ವಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಉತ್ತಪ್ಪ ಗೌತಮ್ ಗಂಭೀರ್ ನಾಯಕತ್ವದಡಿಯಲ್ಲಿ ನಾನು ತುಂಬಾ ಕಂಫರ್ಟ್​ ಅನುಭವ ಹೊಂದಿದ್ದೆ. ಇದೀಗ ಸಿಎಸ್​ಕೆ ತಂಡದಲ್ಲೂ ಅದೇ ಅನುಭವ ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ:  KL Rahul: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್​ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!

(Robin Uthappa said CSK is one of the most secured franchise)