
ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) 2025 ರ ಐಪಿಎಲ್ (IPL 2025) ಆರಂಭ ತುಂಬಾ ಕೆಟ್ಟದಾಗಿತ್ತು. ಸತತ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ರೋಹಿತ್ರನ್ನು ತಂಡದಿಂದ ಕೈಬಿಡಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಈಗ ಲಯ ಕಂಡುಕೊಂಡಿರುವ ರೋಹಿತ್ ಶರ್ಮಾ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 53 ರನ್‌ಗಳ ಇನ್ನಿಂಗ್ಸ್ ಆಡಿದರು. ಕೇವಲ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೋಹಿತ್ಗೆ ಇದು ಈ ಸೀಸನ್ನ ಮೂರನೇ ಅರ್ಧಶತಕವಾಗಿದೆ. ಇದು ಮಾತ್ರವಲ್ಲದೆ ಈ ಇನ್ನಿಂಗ್ಸ್‌ನೊಂದಿಗೆ, ರೋಹಿತ್ ಮುಂಬೈ ಇಂಡಿಯನ್ಸ್ ಪರ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
ರಾಜಸ್ಥಾನ್ ಪರ 53 ರನ್‌ಗಳ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ 6000 ರನ್ ಪೂರ್ಣಗೊಳಿಸಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಫ್ರಾಂಚೈಸಿಗಾಗಿ 6000 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದರು. ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ಪರ 8871 ರನ್ ಗಳಿಸಿದ್ದಾರೆ.
ಮೊದಲ ಐದು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕ್ರಮವಾಗಿ 76*, 70, 12, 53 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ರಾಜಸ್ಥಾನ ವಿರುದ್ಧ ರೋಹಿತ್ ಶರ್ಮಾ ನಿಧಾನಗತಿಯ ಆರಂಭ ಪಡೆದರಾದರೂ ಪಿಚ್ ಅರ್ಥ ಮಾಡಿಕೊಂಡ ಬಳಿಕ ಹೊಡಿಬಡಿ ಆಟವನ್ನು ಮುಂದುವರೆಸಿದರು. ಇದು ಮಾತ್ರವಲ್ಲದೆ ರಯಾನ್ ರಿಕಲ್ಟನ್ ಅವರೊಂದಿಗೆ ಮೊದಲ ವಿಕೆಟ್‌ಗೆ 116 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
IPL 2025: 1 ರನ್ ಬಾರಿಸಲು 8.75 ಲಕ್ಷ ರೂ ವೇತನ ಪಡೆದ ಗ್ಲೆನ್ ಮ್ಯಾಕ್ಸ್‌ವೆಲ್
ವಾಸ್ತವವಾಗಿ ಈ ಪಂದ್ಯದಲ್ಲಿ ರೋಹಿತ್ ಎರಡನೇ ಓವರ್ನಲ್ಲೇ ಔಟಾಗಿದ್ದರು. ವೇಗಿ ಫಜಲ್ಹಕ್ ಫಾರೂಕಿ ಬೌಲಿಂಗ್ನಲ್ಲಿ ರೋಹಿತ್ ಎಲ್ಬಿಡಬ್ಲ್ಯೂ ಔಟ್ ಆಗಿದ್ದರು. ಅಂಪೈರ್ ಕೂಡ ರೋಹಿತ್ ಔಟೆಂದು ತೀರ್ಪು ನೀಡಿದ್ದರು. ಆದರೆ ಕೊನೆಯ ಸೆಕೆಂಡಿನಲ್ಲಿ ರೋಹಿತ್ ರಿವ್ಯೂ ತೆಗೆದುಕೊಂಡರು. ಇತ್ತ ರಿವ್ಯೂವ್ನಲ್ಲಿ ಫಾರೂಕಿ ಅವರ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿದ್ದು ಸ್ಪಷ್ಟವಾದ್ದರಿಂದ ರೋಹಿತ್ ಕೂದಲೆಳೆಯ ಅಂತರದಲ್ಲಿ ಪಾರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ