Rohit Sharma: ಇನ್ಮುಂದೆ ಹಿಟ್​ಮ್ಯಾನನ್ನು ಹಿಡಿಯುವುದೇ ಕಷ್ಟ: ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆಯಲು ರೋಹಿತ್ ಶರ್ಮಾ ಸಜ್ಜು

Rohit Sharma: ಇನ್ಮುಂದೆ ಹಿಟ್​ಮ್ಯಾನನ್ನು ಹಿಡಿಯುವುದೇ ಕಷ್ಟ: ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆಯಲು ರೋಹಿತ್ ಶರ್ಮಾ ಸಜ್ಜು
Rohit Shrama IND vs SL 2nd T20

IND vs SL T20: ಟೀಮ್ ಇಂಡಿಯಾ ಇಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಕದನದಲ್ಲೂ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಜೊತೆಗೆ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.

TV9kannada Web Team

| Edited By: Vinay Bhat

Feb 26, 2022 | 11:53 AM

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ 2021 ರಿಂದ ಭಾರತ ಕ್ರಿಕೆಟ್ ತಂಡ ಹೊರಬಿದ್ದಿದ್ದೆ ತಡ ನಂತರ ಆಡಿದ ಎಲ್ಲ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್ ಮಾಡಿ ಮೆರೆದಿದೆ. ಅದು ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಎಂಬುದು ವಿಶೇಷ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನೂ ಭಾರತ ವೈಟ್​ವಾಷ್ ಮಾಡಿದ ಸಾಧನೆ ಮಾಡಿತ್ತು. ಇದೀಗ ಶ್ರೀಲಂಕಾ ಸರಣಿ. ಈಗಾಗಲೇ ಮೊದಲ ಪಂದ್ಯದಲ್ಲಿ 62 ರನ್​ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ (Team india) ಇಂದು ನಡೆಯಲಿರುವ ಎರಡನೇ ಕದನದಲ್ಲೂ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಜೊತೆಗೆ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಹೀಗಾಗಿ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಎರಡನೇ ಟಿ20 ಪಂದ್ಯದ (IND vs SL 2nd T20) ಮೇಲೆ ಎಲ್ಲರ ಕಣ್ಣಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.

ರೋಹಿತ್ ಶರ್ಮಾ ನಾಯಕತದಲ್ಲಿ ತವರಿನಲ್ಲಿ ಆಡಿದ 16 ಪಂದ್ಯಗಳಲ್ಲಿ ಭಾರತ 15 ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್​ನ ಇಯಾನ್ ಮಾರ್ಗನ್ ಮತ್ತು ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ. ಇಂದಿನ ಪಂದ್ಯ ಕೂಡ ಗೆದ್ದರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ನಾಯಕ ಎಂಬ ದಾಖಲೆ ಬರೆಯಲಿದ್ದಾರೆ. ಹಿಟ್​ಮ್ಯಾನ್ ಈಗಾಗಲೇ ಕೊಹ್ಲಿಗಿಂತ ಎರಡು ಪಂದ್ಯ ಮತ್ತು ಧೋನಿಗಿಂತ ಐದು ಪಂದ್ಯ ಅಧಿಕ ಗೆದ್ದ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ ರೋಹಿತ್ ನಾಯಕತ್ವದಲ್ಲಿ ಭಾರತ ಈವರೆಗೆ ಆಡಿದ 24 ಪಂದ್ಯಗಳ ಪೈಕಿ 22 ರಲ್ಲಿ ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ಧದ ಸರಣಿಯನ್ನೂ ಗೆದ್ದರೆ 11ನೇ ಬಾರಿ ಸರಣಿ ಗೆದ್ದ ಸಾಧನೆ ಮಾತ್ರವಲ್ಲದೆ, ಸತತವಾಗಿ ಮೂರನೇ ಬಾರಿ ಸರಣಿ ವಶಪಡಿಸಿಕೊಂಡ ದಾಖಲೆ ಬರೆಯಲಿದ್ದಾರೆ. ಅಂತೆಯೆ ರೋಹಿತ್ ಇನ್ನು ಕೇವಲ 19 ರನ್ ಕಲೆಹಾಕಿದರೆ ನಾಯಕನಾಗಿ ಟಿ20 ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನೂ ಪುಡಿ ಮಾಡಲಿದ್ದಾರೆ. ನಾಯಕನಾಗಿ ಕೊಹ್ಲಿ ಒಂದು ಸಾವಿರ ರನ್ ಪೂರೈಸಲು 30 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಸದ್ಯ ರೋಹಿತ್ 27ನೇ ಇನ್ನಿಂಗ್ಸ್​ನಲ್ಲಿ ಈ ದಾಖಲೆ ಮುರಿಯುವ ಅವಕಾಶಬಂದೊದಗಿದೆ.

ಇನ್ನು ಧರ್ಮಶಾಲಾ ಮೈದಾನದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ ಕ್ರಿಕೆಟ್​​ ತಂಡ ಮಾಡಿರುವ ಸಾಧನೆ ಸಾಲಿಗೆ ಸೇರಲಿದೆ. ಟಿ20 ಕ್ರಿಕೆಟ್​​ನಲ್ಲಿ ಪಾಕ್​ ತಂಡ ಇಲ್ಲಿಯವರೆಗೆ 189 ಪಂದ್ಯಗಳಿಂದ 117 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, 100ಕ್ಕೂ ಅಧಿಕ ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ತಂಡವಾಗಿದೆ. ಇನ್ನು ಭಾರತ 157 ಪಂದ್ಯಗಳಿಂದ 99 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಈ ಪಂದ್ಯದಲ್ಲಿ ಗೆದ್ದು 100 ಟಿ-20 ಪಂದ್ಯ ಗೆದ್ದ ಸಾಲಿಗೆ ಸೇರಿಕೊಳ್ಳಲಿದೆ. ಇದರ ಜೊತೆಗೆ ನಾಳೆಯ ಪಂದ್ಯದಲ್ಲಿ ಭಾರತ ಗೆಲುವು ದಾಖಲು ಮಾಡಿದರೆ, ತವರಿನಲ್ಲಿ ನ್ಯೂಜಿಲೆಂಡ್ ತಂಡ ನಿರ್ಮಿಸಿರುವ ಸಾಧನೆಯ ಸಾಲಿಗೆ ಸೇರಲಿದೆ. ನ್ಯೂಜಿಲ್ಯಾಂಡ್​ ತಂಡ ತವರಿನಲ್ಲೇ 73 ಪಂದ್ಯಗಳನ್ನಾಡಿದ್ದು ಇದರಲ್ಲಿ 39ರಲ್ಲಿ ಗೆಲುವು ದಾಖಲು ಮಾಡಿದೆ. ಭಾರತ ಆಡಿರುವ 59 ಪಂದ್ಯಗಳಿಂದ 38 ಪಂದ್ಯಗಳಲ್ಲಿ ಜಯ ಸಾಧಿಸಿದೆ.

IND vs SL T20: ಇಂದು ಭಾರತ- ಶ್ರೀಲಂಕಾ 2ನೇ ಟಿ20 ಪಂದ್ಯ ನಡೆಯುವುದು ಅನುಮಾನ: ಯಾಕೆ ಗೊತ್ತೇ?

IND vs SL 2nd T20: ಈ ಪಂದ್ಯದಲ್ಲಾದರೂ ಇದೆಯೇ ಅವಕಾಶ?: ಎರಡನೇ ಟಿ20ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

Follow us on

Related Stories

Most Read Stories

Click on your DTH Provider to Add TV9 Kannada