ಜಿಮ್​ನಲ್ಲಿ ಬೆವರಿಳಿಸಿದ ರೋಹಿತ್, ಕೊಹ್ಲಿ: ಪಾಕ್ ವಿರುದ್ಧ ಕಣಕ್ಕಿಳಿಯುತ್ತಾರಾ ರಾಹುಲ್? ವಿಡಿಯೋ ನೋಡಿ

|

Updated on: Sep 08, 2023 | 9:10 AM

Asia Cup 2023: ಪಾಕ್​ ವಿರುದ್ಧ ಪಂದ್ಯಕ್ಕೂ ಮುನ್ನ ಬರೀ ರೋಹಿತ್-ಕೊಹ್ಲಿ ಮಾತ್ರ ಪ್ರ್ಯಾಕ್ಟೀಸ್​ನತ್ತ ಹೆಚ್ಚು ಗಮನಹರಿಸಿಲ್ಲ. ಬದಲಿಗೆ ಟೀಂ ಇಂಡಿಯಾ ಪ್ರತೀ ಆಟಗಾರರೂ ಕೂಡ ಶ್ರಮವಹಿಸಿ ನೆಟ್​ ಪ್ರ್ಯಾಕ್ಟೀಸ್​ನಲ್ಲಿ ತೊಡಗಿಕೊಂಡಿದ್ದಾರೆ. ಇದರ ವಿಡಿಯೋ, ಚಿತ್ರಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಜಿಮ್​ನಲ್ಲಿ ಬೆವರಿಳಿಸಿದ ರೋಹಿತ್, ಕೊಹ್ಲಿ: ಪಾಕ್ ವಿರುದ್ಧ ಕಣಕ್ಕಿಳಿಯುತ್ತಾರಾ ರಾಹುಲ್? ವಿಡಿಯೋ ನೋಡಿ
ಟೀಂ ಇಂಡಿಯಾ
Follow us on

ನಡೆಯುತ್ತಿರುವ ಏಷ್ಯಾಕಪ್ (Asia Cup 2023) ಸೂಪರ್ ಫೋರ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕದನಕ್ಕಿಳಿಯುವ ಮುನ್ನ ಭಾರತ ತಂಡವು (India vs Pakistan) ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದೆ. ಈ ಹಿಂದೆ ಗುಂಪು ಹಂತಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಮಳೆಯಿಂದಾಗಿ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತು. ಇದೀಗ ಈ ಉಭಯ ತಂಡಗಳ ನಡುವಿನ ಎರಡನೇ ಕದನಕ್ಕೂ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಕೊಲಂಬೊದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭಾರತೀಯ ಆಟಗಾರರು ಗುರುವಾರ ಒಳಾಂಗಣದಲ್ಲಿ ತರಬೇತಿ ನಡೆಸಬೇಕಾಯಿತು. ಹೀಗಾಗಿ ಬ್ಯಾಟ್ ಹಾಗೂ ಬಾಲ್​ಗೆ ಕೊಂಚ ಬ್ರೇಕ್ ನೀಡಿದ ಟೀಂ ಇಂಡಿಯಾ (Team India) ಆಟಗಾರರು ಜಿಮ್​ನಲ್ಲಿ ಹೆಚ್ಚು ಸಮಯ ಕಳೆದರು.

ನೇಪಾಳ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಗೆಲುವನ್ನಾಚರಿಸಿತ್ತು. ಆರಂಭಿಕರಾಗಿ ಬಂದಿದ್ದ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಇಬ್ಬರೇ ಪಂದ್ಯವನ್ನು ಮುಗಿಸಿದ್ದರು. ಅದಾಗಿ 5 ದಿನಗಳ ಬಿಡುವಿನಲ್ಲಿರುವ ಮೆನ್ ಇನ್ ಬ್ಲೂ, ಸೆಪ್ಟೆಂಬರ್ 10ರಂದು ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರುಗೊಳ್ಳಲಿದೆ. ಕ್ರಿಕೆಟ್​ನಲ್ಲಿ ಭಾರತ-ಪಾಕ್ ಮುಖಾಮುಖಿ ಆಗುತ್ತಿವೆ ಎಂದರೆ ಅತ್ತ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಚಿತ್ತವೆಲ್ಲಾ ನೆಟ್ಟಿರುತ್ತೆ. ಹೀಗಾಗಿಯೇ ರೋಹಿತ್ ಪಡೆ ಭರ್ಜರಿ ಸಿದ್ಧತೆ ನಡೆಸುತ್ತಿದೆ.

ಪ್ರ್ಯಾಕ್ಟೀಸ್ ಸೆಷನ್​ಗೆ ಚಕ್ಕರ್ ಹಾಕಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಜಿಮ್​ನಲ್ಲಿ ಬೆವರಿಳಿಸಿದ ರೋಹಿತ್, ಕೊಹ್ಲಿ!

ಪಾಕಿಸ್ತಾನ ವಿರುದ್ಧದ ಪ್ರತಿಷ್ಠೆಯ ಪಂದ್ಯದಲ್ಲೇ ಹಿಟ್​ಮ್ಯಾನ್​ ರೋಹಿತ್ ಮತ್ತು ಕ್ರಿಕೆಟ್ ಕಿಂಗ್​ ವಿರಾಟ್ ಕೊಹ್ಲಿ ಇಬ್ಬರೂ ಮುಗ್ಗರಿಸಿದ್ದರು. ಏಷ್ಯಾಕಪ್​ 3ನೇ ಪಂದ್ಯದಲ್ಲಿ ಪಾಕ್​ ವಿರುದ್ಧ ಕ್ಯಾಪ್ಟನ್ ರೋಹಿತ್ 11 ರನ್ ಬಾರಿಸಿದರೆ, ಕೊಹ್ಲಿ ಕೇವಲ 4 ರನ್​ಗೆ ನಿರಾಸೆ ಅನುಭವಿಸಿದ್ರು. ಆವತ್ತು ರೋಹಿತ್-ಕೊಹ್ಲಿ ಇಬ್ಬರೂ ಕ್ರಿಕೆಟ್ ಅಭಿಮಾನಿಗಳನ್ನು ನಿರಾಸೆಯ ಕೂಪಕ್ಕೆ ತಳ್ಳಿದ್ದು ನಿಜ. ಆದರೆ, ಮತ್ತೆ ಸೆಪ್ಟೆಂಬರ್ 10ಕ್ಕೆ ಸೂಪರ್ 4ನಲ್ಲಿ ಭಾರತ-ಪಾಕ್​ ಎದುರುಬದುರಾಗುತ್ತಿವೆ. ಈ ಪಂದ್ಯದಲ್ಲಿ ರೋಹಿತ್, ಕೊಹ್ಲಿ ಅಬ್ಬರಿಸಿದರೆ ಅದರ ಗತ್ತೇ ಬೇರೆ. ಇದೇ ಕಾರಣಕ್ಕೆ ರೋಹಿತ್, ಕೊಹ್ಲಿ ಇಬ್ಬರೂ ಹೆಚ್ಚಿನ ಸಮಯವನ್ನು ಪ್ರ್ಯಾಕ್ಟೀಸ್​ನಲ್ಲಿ ಕಳೆಯುತ್ತಿದ್ದಾರೆ. ಜಿಮ್​ನಲ್ಲಿ ಬೆವರಿಳಿಸ್ತಿದ್ದಾರೆ.

ಪ್ರ್ಯಾಕ್ಟೀಸ್​ ವೇಳೆ ಮೈದಾನಕ್ಕಿಳಿದ ರಾಹುಲ್

ಪಾಕ್​ ವಿರುದ್ಧ ಪಂದ್ಯಕ್ಕೂ ಮುನ್ನ ಬರೀ ರೋಹಿತ್-ಕೊಹ್ಲಿ ಮಾತ್ರ ಪ್ರ್ಯಾಕ್ಟೀಸ್​ನತ್ತ ಹೆಚ್ಚು ಗಮನಹರಿಸಿಲ್ಲ. ಬದಲಿಗೆ ಟೀಂ ಇಂಡಿಯಾ ಪ್ರತೀ ಆಟಗಾರರೂ ಕೂಡ ಶ್ರಮವಹಿಸಿ ನೆಟ್​ ಪ್ರ್ಯಾಕ್ಟೀಸ್​ನಲ್ಲಿ ತೊಡಗಿಕೊಂಡಿದ್ದಾರೆ. ಇದರ ವಿಡಿಯೋ, ಚಿತ್ರಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇನ್ನು, ಗಾಯಕ್ಕೀಡಾಗಿದ್ದ ಕನ್ನಡಿಗ ಕೆಎಲ್ ರಾಹುಲ್​ ಸದ್ಯ ಸಂಪೂಣವಾಗಿ ಫಿಟ್​ ಆಗಿದ್ದಾರೆ. ತಂಡದ ಪ್ರ್ಯಾಕ್ಟೀಸ್ ಸೆಶನ್ ವೇಳೆ ರಾಹುಲ್​ ಕೂಡ ಮೈದಾನಕ್ಕಿಳಿದು ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಕೊಲಂಬೋದಲ್ಲಿ ನಡೆಯೋ ಪಾಕ್​ ವಿರುದ್ಧದ ಕುತೂಹಲಕಾರಿ ಪಂದ್ಯದಲ್ಲಿ ರಾಹುಲ್​ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 am, Fri, 8 September 23