ICC ODI Rankings: ಒಂಬತ್ತೇ ದಿನದಲ್ಲಿ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ..!
ICC ODI Rankings: ಒಂಬತ್ತು ದಿನಗಳ ಹಿಂದೆ ಪಾಕಿಸ್ತಾನವು ಏಕದಿನದಲ್ಲಿ ನಂಬರ್-1 ತಂಡವಾಗಿ ಹೊರಹೊಮ್ಮಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಸ್ಥಾನವನ್ನು ಪಾಕ್ ಕಳೆದುಕೊಂಡಿದೆ. ಆದರೆ, ಏಕದಿನದಲ್ಲಿ ಕಳೆದುಹೋದ ತನ್ನ ಕಿರೀಟವನ್ನು ಮರಳಿ ಪಡೆಯಲು ಪಾಕಿಸ್ತಾನಕ್ಕೆ ಇನ್ನೂ ಅವಕಾಶವಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೆಪ್ಟೆಂಬರ್ 10 ರಂದು ಒಂದು ಪಂದ್ಯವನ್ನು ಆಡಬೇಕಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿದರೆ ಮತ್ತೆ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಬಹುದಾಗಿದೆ.
ಏಷ್ಯಾಕಪ್ (Asia Cup 2023) ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಹಾಗೂ ಭಾರತ (India vs Pakistan) ಸೆಪ್ಟೆಂಬರ್ 10 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇಡೀ ವಿಶ್ವವೇ ಈ ಕ್ರಿಕೆಟ್ ಕದನಕ್ಕಾಗಿ ಕಾದು ಕುಳಿತಿದೆ. ಆದರೆ ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಶಾಕ್ ಎದುರಾಗಿದೆ. 9 ದಿನಗಳ ಹಿಂದೆ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದ ಪಾಕಿಸ್ತಾನ ಇದೀಗ ಆ ಸ್ಥಾನವನ್ನು ಕಳೆದುಕೊಂಡಿದೆ. ಇದೇ 9 ದಿನಗಳ ಹಿಂದೆ ನಂ.1 ಸ್ಥಾನವನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇದೀಗ ಏಕದಿನ ರ‍್ಯಾಂಕಿಂಗ್‌ನಲ್ಲಿ (ICC ODI Rankings) ಮತ್ತೆ ಮೊದಲ ಸ್ಥಾನಕ್ಕೇರಿದೆ. ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಆಸ್ಟ್ರೇಲಿಯಾ ಏಕದಿನ ಶ್ರೇಯಾಂಕದಲ್ಲಿ ನಂಬರ್-1 ಸ್ಥಾನವನ್ನು ಪುನಃ ಪಡೆದುಕೊಂಡಿದೆ.
ಮೇಲೆ ಹೇಳಿದಂತೆ ಒಂಬತ್ತು ದಿನಗಳ ಹಿಂದೆ ಪಾಕಿಸ್ತಾನವು ಏಕದಿನದಲ್ಲಿ ನಂಬರ್-1 ತಂಡವಾಗಿ ಹೊರಹೊಮ್ಮಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಸ್ಥಾನವನ್ನು ಪಾಕ್ ಕಳೆದುಕೊಂಡಿದೆ. ಆದರೆ, ಏಕದಿನದಲ್ಲಿ ಕಳೆದುಹೋದ ತನ್ನ ಕಿರೀಟವನ್ನು ಮರಳಿ ಪಡೆಯಲು ಪಾಕಿಸ್ತಾನಕ್ಕೆ ಇನ್ನೂ ಅವಕಾಶವಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೆಪ್ಟೆಂಬರ್ 10 ರಂದು ಒಂದು ಪಂದ್ಯವನ್ನು ಆಡಬೇಕಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿದರೆ ಮತ್ತೆ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಬಹುದಾಗಿದೆ.
‘ನಿಮ್ಮಿಂದ ನಷ್ಟವಾಗಿದೆ ಪರಿಹಾರ ಕೊಡಿ’; ಹೊಸ ಕ್ಯಾತೆ ತೆಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಆಸ್ಟ್ರೇಲಿಯಾ ನಂ.1
ಇನ್ನು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಒಂದೇ ರೇಟಿಂಗ್ ಹೊಂದಿವೆಯಾದರೂ, ಆಸೀಸ್ನ ಗೆಲುವಿನ ಶೇಕಡವಾರು ಹೆಚ್ಚಿದೆ. ಹೀಗಾಗಿ ಆಸ್ಟ್ರೇಲಿಯಕ್ಕೆ ನಂ.1 ಸ್ಥಾನ ಸಿಕ್ಕಿದೆ. ಹಾಗೆಯೇ ಒಂದು ಸ್ಥಾನ ಕೆಳಗಿಳಿದಿರುವ ಪಾಕಿಸ್ತಾನ 119 ರೇಟಿಂಗ್ ಪಾಯಿಂಟ್ಗಳ ಜೊತೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ 114 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಕ್ರಮವಾಗಿ 4, 5 ಮತ್ತು 6ನೇ ಸ್ಥಾನವನ್ನು ಪಡೆದುಕೊಂಡಿವೆ.
ಪಾಕ್ ತಂಡಕ್ಕೆ ಮತ್ತೆ ನಂ.1 ಆಗುವ ಅವಕಾಶ
ಇದೀಗ ನಂಬರ್ 1 ಸ್ಥಾನದಿಂದ ಕೆಳಗಿಳಿದಿರುವ ಪಾಕಿಸ್ತಾನಕ್ಕೆ ಮತ್ತೆ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಅವಕಾಶ ಇನ್ನು ಎರಡೇ ದಿನದಲ್ಲಿ ಸಿಗಲಿದೆ. ಪ್ರಸ್ತುತ ಏಷ್ಯಾಕಪ್ ಆಡುತ್ತಿರುವ ಪಾಕಿಸ್ತಾನ, ಇದೇ ಭಾನುವಾರದಂದು ಭಾರತದೆದುರು ಸೂಪರ್ 4 ಸುತ್ತಿನಲ್ಲಿ ಮತ್ತೊಂದು ಪಂದ್ಯವನ್ನು ಆಡಲಿದೆ. ಆ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ, ಆಸ್ಟ್ರೇಲಿಯಕ್ಕಿಂತ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ ನಂ.1 ಸ್ಥಾನಕ್ಕೇರಲಿದೆ. ಆದರೆ ಆ ಸ್ಥಾನವೂ ಬಹಳ ದಿನಗಳ ಉಳಿಯಲು ಸಾಧ್ಯವಿಲ್ಲ. ಏಕೆಂದರೆ? ಪ್ರಸ್ತುತ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಆಸೀಸ್ನ ಗೆಲುವಿನ ಸರಣಿ ಮುಂದುವರೆದರೆ ಮತ್ತೆ ಪಾಕಿಸ್ತಾನ ನಂ.1 ಸ್ಥಾನವನ್ನು ಬಿಟ್ಟುಕೊಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Fri, 8 September 23