
ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ-ಅಫ್ಘಾನಿಸ್ತಾನ (India vs Afghanistan) ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆಲುವು ಕಾಣುವ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಟಿ20ಐಗೆ ನಾಯಕನಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ, ಈ ಪಂದ್ಯದಲ್ಲಿ ರೋಹಿತ್ ಬ್ಯಾಟ್ ಸದ್ದು ಮಾಡಲಿಲ್ಲ. ರೋಹಿತ್ ಟಿ20 ಐ ಪುನರಾಗಮನವು ಬ್ಯಾಟಿಂಗ್ನಲ್ಲಿ ಉತ್ತಮವಾಗಿರಲಿಲ್ಲ. ಎರಡು ಎಸೆತಗಳಲ್ಲಿ ಡಕ್ಗೆ ರನೌಟ್ ಆದರು. ಈ ಸಂದರ್ಭ ಇವರು ಕೋಪಗೊಂಡ ಘಟನೆ ಕೂಡ ನಡೆಯಿತು.
ಅಫ್ಘಾನಿಸ್ತಾನ ನೀಡಿದ್ದ 159 ರನ್ಗಳ ಗುರಿ ಬೆನ್ನಟ್ಟಲು ಟೀಮ್ ಇಂಡಿಯಾದ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಕ್ರೀಸ್ಗೆ ಬಂದರು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಓಪನರ್ ಆಗಬೇಕಿತ್ತು, ಆದರೆ ತೊಡೆಸಂದು ಗಾಯದಿಂದಾಗಿ ಅವರು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಗಿಲ್ಗೆ ಓಪನ್ ಮಾಡುವ ಅವಕಾಶ ಸಿಕ್ಕಿತು. ಆದರೆ, ಭಾರತದ ಇನ್ನಿಂಗ್ಸ್ನ ಎರಡನೇ ಎಸೆತದಲ್ಲಿ ಗಿಲ್ ಮಾಡಿದ ಒಂದು ತಪ್ಪು ಭಾರತ ಉತ್ತಮ ಆರಂಭ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.
IND vs AFG: ಅಫ್ಘಾನ್ ವಿರುದ್ಧ ಸಂಪೂರ್ಣ ವಿಭಿನ್ನ ತಂಡವನ್ನು ಕಣಕ್ಕಿಳಿಸಿದ ರೋಹಿತ್..!
ಇನ್ನಿಂಗ್ಸ್ನ ಎರಡನೇ ಎಸೆತದಲ್ಲಿ, ರೋಹಿತ್ ಶರ್ಮಾ ಮುಂದೆ ಹೋಗಿ ಮಿಡ್-ಆಫ್ ಕಡೆಗೆ ಚೆಂಡನ್ನು ಅಟ್ಟಿ ರನ್ಗಳಿಗಾಗಿ ಓಡಿದರು. ಆಗ ಮಿಡ್ ಆಫ್ ಫೀಲ್ಡರ್ ಡೈವ್ ಮಾಡುವ ಮೂಲಕ ಚೆಂಡನ್ನು ನಿಲ್ಲಿಸಿದರು. ಅತ್ತ ರೋಹಿತ್ ಒಂದು ರನ್ಗೆಂದು ಗಿಲ್ ಅವರನ್ನು ಕರೆದರು. ಆದರೆ, ಗಿಲ್ ಚೆಂಡನ್ನು ನೋಡುತ್ತಲೇ ಇದ್ದರಷ್ಟೆ ವಿನಃ ರನ್ಗೆಂದು ಓಡಲಿಲ್ಲ. 2 ಹೆಜ್ಜೆ ಮುಂದೆ ಬಂದು ಪುನಃ ಕ್ರೀಸ್ಗೆ ಮರಳಿದರು.
ರೋಹಿತ್ ರನ್ಗಾಗಿ ಕೂಗಾಡುತ್ತಿದ್ದರೂ ಗಿಲ್ ಕದಲಲಿಲ್ಲ. ಪರಿಣಾಮ ರೋಹಿತ್ ಕ್ರೀಸ್ಗೆ ಮರಳಲು ಸಾಧ್ಯವಾಗದೆ ರನೌಟ್ ಆದರು. ಇದರಿಂದ ಕೋಪಗೊಂಡ ರೋಹಿತ್ ಎಲ್ಲರ ಮುಂದೆ ಶುಭ್ಮನ್ ಮೇಲೆ ರೇಗಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಲ್ಲಿ ಸಂಪೂರ್ಣ ತಪ್ಪು ಗಿಲ್ ಅವರದ್ದೇ ಆಗಿತ್ತು. ಏಕೆಂದರೆ ರನ್ ಕರೆ ರೋಹಿತ್ ಅವರದ್ದು, ರನೌಟ್ ಆಗುವ ಅಪಾಯದಲ್ಲಿದ್ದಿದ್ದು ಕೂಡ ರೋಹಿತ್ ಅವರೇ. ರೋಹಿತ್ ಕರೆದ ಕೂಡಲೇ ಓಡದೆ ಗಿಲ್ ಚೆಂಡನ್ನು ನೋಡುತ್ತಲೇ ಇದ್ದರು. ಇಷ್ಟೇ ಅಲ್ಲ, ತನ್ನ ತಪ್ಪಿನ ಹೊರತಾಗಿಯೂ, ಗಿಲ್ ನಾಯಕನಿಗೆ ತನ್ನ ವಿಕೆಟ್ ತ್ಯಾಗ ಮಾಡದಿರುವುದು ರೋಹಿತ್ಗೆ ಮತ್ತಷ್ಟು ಕೋಪವನ್ನುಂಟುಮಾಡಿತು. ಇದಾದ ಬಳಿಕ ಗಿಲ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗದೆ 12 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ