AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG 1st T20I: ಮೊದಲ ಟಿ20 ಪಂದ್ಯ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ರು ಗೊತ್ತೇ?

Rohit Sharma post match presentation: ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಸುಮಾರು ಒಂದು ವರ್ಷದ ಬಳಿಕ ಟಿ20ಗೆ ಕಮ್​ಬ್ಯಾಕ್ ಮಾಡಿ ಗೆಲುವು ಕಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ನೋಡಿ.

IND vs AFG 1st T20I: ಮೊದಲ ಟಿ20 ಪಂದ್ಯ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ರು ಗೊತ್ತೇ?
rohit sharma post match IND vs AFG
Vinay Bhat
|

Updated on: Jan 12, 2024 | 8:00 AM

Share

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಭಾರತ (India vs Afghanistan) ಭರ್ಜರಿ ಆಗಿ ಆರಂಭಿಸಿದೆ. ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಜಯ ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಶಿವಂ ದುಬೆ ಅರ್ಧಶತಕ ಸಿಡಿಸಿ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಅಕ್ಷರ್ ಪಟೇಲ್ ಸ್ಪಿನ್ ದಾಳಿ ನಡೆಸಿದರು. ರೋಹಿತ್ ಶರ್ಮಾ ಸುಮಾರು ಒಂದು ವರ್ಷದ ಬಳಿಕ ಟಿ20ಗೆ ಕಮ್​ಬ್ಯಾಕ್ ಮಾಡಿ ಗೆಲುವು ಕಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ನೋಡಿ.

”ತುಂಬಾನೆ ಚಳಿ ಇತ್ತು. ಚೆಂಡು ಬೆರಳಿನ ತುದಿಗೆ ಹೊಡೆದಾಗ ನೋವಾಯಿತು. ಆದರೆ, ಈಗ ನಾನು ಚೆನ್ನಾಗಿದ್ದೇನೆ. ಬಹಳಷ್ಟು ಧನಾತ್ಮಕ ಅಂಶಗಳನ್ನು ಈ ಆಟದಿಂದ ನಾವು ಪಡೆದುಕೊಂಡಿದ್ದೇವೆ, ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ. ಈ ಪರಿಸ್ಥಿತಿ ಸುಲಭವಾಗಿರಲಿಲ್ಲ. ನಮ್ಮ ಸ್ಪಿನ್ನರ್‌ಗಳು ನಿಜವಾಗಿಯೂ ಉತ್ತಮವಾಗಿ ಬೌಲ್ ಮಾಡಿದರು ಮತ್ತು ಸೀಮರ್‌ಗಳು ಸಹ ತಮ್ಮ ಕೆಲಸವನ್ನು ಮಾಡಿದರು,” ಎಂದು ರೋಹಿತ್ ಹೇಳಿದ್ದಾರೆ.

ತನ್ನ ರನೌಟ್ ಬಗ್ಗೆ ಮಾತನಾಡಿದ ರೋಹಿತ್, ”ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಆಗ ಹತಾಶರಾಗುತ್ತೀರಿ, ನಾವು ತಂಡಕ್ಕಾಗಿ ರನ್ ಗಳಿಸಲು ಬಯಸುತ್ತೇವೆ. ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಆದರೆ, ನಾವು ಪಂದ್ಯವನ್ನು ಗೆದ್ದಿದ್ದೇವೆ, ಅದು ಹೆಚ್ಚು ಮುಖ್ಯವಾಗಿದೆ. ನಾನು ಗಿಲ್ ಇನ್ನಷ್ಟು ಆಡಬೇಕು ಎಂದು ಬಯಸಿದ್ದೆ, ದುರದೃಷ್ಟವಶಾತ್ ಅವರು ದೊಡ್ಡ ಇನ್ನಿಂಗ್ಸ್‌ ಆಡಲಿಲ್ಲ,” ಎಂಬುದು ಹಿಟ್​ಮ್ಯಾನ್ ಮಾತು.

IND vs AFG 1st T20 Highlights: ಅಫ್ಘಾನ್ ವಿರುದ್ಧ ಮೊದಲ ಟಿ20 ಗೆದ್ದ ಭಾರತ

”ಶಿವಂ ದುಬೆ, ಜಿತೇಶ್ ಬ್ಯಾಟಿಂಗ್ ಮಾಡಿದ ರೀತಿ ಉತ್ತಮವಾಗಿತ್ತು. ತಿಲಕ್ ಹಾಗೂ ರಿಂಕು ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ನಾವು ವಿಭಿನ್ನವಾದೂದನ್ನು ಪ್ರಯತ್ನಿಸಲು ಬಯಸುತ್ತೇವೆ. ಬೌಲಿಂಗ್​ನಲ್ಲಿ ಕೆಲ ಪ್ರಯೋಗ ನಡೆಸಿದೆವು. ಸುಂದರ್ 19 ನೇ ಓವರ್ ಬೌಲ್ ಮಾಡಿದರು. ಎಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಪ್ರಯತ್ನಿಸುತ್ತೇವೆ ಮತ್ತು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಇಂದು ನಮಗೆ ಒಳ್ಳೆಯ ದಿನವಾಗಿತ್ತು,” ಎಂದು ರೋಹಿತ್ ಶರ್ಮಾ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ನಬಿ 42 ರನ್​ಗಳ ಕೊಡುಗೆ ನೀಡಿದರು. ಭಾರತ ಒರ ಅಕ್ಷರ್ -ಮುಖೇಶ್ 2 ವಿಕೆಟ್ ಪಡೆದರು. ಭಾರತ 17.3 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯ ಸಾಧಿಸಿತು. ದುಬೆ 40 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ