IND vs AFG: ಮೈದಾನದಲ್ಲೇ ಗಿಲ್ ಮೇಲೆ ರೋಹಿತ್ ಶರ್ಮಾ ವಾಗ್ದಾಳಿ: ಕಮ್​ಬ್ಯಾಕ್ ಪಂದ್ಯದಲ್ಲಿ ಕೋಪಗೊಂಡ ಹಿಟ್​ಮ್ಯಾನ್

Rohit Sharma Run Out, India vs Afghanistan 1st T20I: ಅಫ್ಘಾನಿಸ್ತಾನ ನೀಡಿದ್ದ 159 ರನ್‌ಗಳ ಗುರಿ ಬೆನ್ನಟ್ಟಲು ಟೀಮ್ ಇಂಡಿಯಾದ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಕ್ರೀಸ್‌ಗೆ ಬಂದರು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ, ರೋಹಿತ್ ಮುಂದೆ ಹೋಗಿ ಮಿಡ್-ಆಫ್ ಕಡೆಗೆ ಚೆಂಡನ್ನು ಅಟ್ಟಿ ರನ್‌ಗಳಿಗಾಗಿ ಓಡಿದರು.

IND vs AFG: ಮೈದಾನದಲ್ಲೇ ಗಿಲ್ ಮೇಲೆ ರೋಹಿತ್ ಶರ್ಮಾ ವಾಗ್ದಾಳಿ: ಕಮ್​ಬ್ಯಾಕ್ ಪಂದ್ಯದಲ್ಲಿ ಕೋಪಗೊಂಡ ಹಿಟ್​ಮ್ಯಾನ್
Rohit Sharma and Shubman Gill
Follow us
Vinay Bhat
|

Updated on: Jan 12, 2024 | 9:40 AM

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ-ಅಫ್ಘಾನಿಸ್ತಾನ (India vs Afghanistan) ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್​ಗಳಿಂದ ಗೆಲುವು ಕಾಣುವ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಟಿ20ಐಗೆ ನಾಯಕನಾಗಿ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ, ಈ ಪಂದ್ಯದಲ್ಲಿ ರೋಹಿತ್ ಬ್ಯಾಟ್ ಸದ್ದು ಮಾಡಲಿಲ್ಲ. ರೋಹಿತ್ ಟಿ20 ಐ ಪುನರಾಗಮನವು ಬ್ಯಾಟಿಂಗ್​ನಲ್ಲಿ ಉತ್ತಮವಾಗಿರಲಿಲ್ಲ. ಎರಡು ಎಸೆತಗಳಲ್ಲಿ ಡಕ್‌ಗೆ ರನೌಟ್ ಆದರು. ಈ ಸಂದರ್ಭ ಇವರು ಕೋಪಗೊಂಡ ಘಟನೆ ಕೂಡ ನಡೆಯಿತು.

ಅಫ್ಘಾನಿಸ್ತಾನ ನೀಡಿದ್ದ 159 ರನ್‌ಗಳ ಗುರಿ ಬೆನ್ನಟ್ಟಲು ಟೀಮ್ ಇಂಡಿಯಾದ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಕ್ರೀಸ್‌ಗೆ ಬಂದರು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಓಪನರ್ ಆಗಬೇಕಿತ್ತು, ಆದರೆ ತೊಡೆಸಂದು ಗಾಯದಿಂದಾಗಿ ಅವರು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಗಿಲ್‌ಗೆ ಓಪನ್ ಮಾಡುವ ಅವಕಾಶ ಸಿಕ್ಕಿತು. ಆದರೆ, ಭಾರತದ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಗಿಲ್ ಮಾಡಿದ ಒಂದು ತಪ್ಪು ಭಾರತ ಉತ್ತಮ ಆರಂಭ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
Image
ಎರಡೂ ಕೈಗಳಿಲ್ಲದಿದ್ದರೂ ಕ್ರಿಕೆಟ್​ ಆಡುವ ಅಮೀರ್ ಹುಸೇನ್, ವಿಶ್ವಕ್ಕೆ ಮಾದರಿ
Image
ಮೊದಲ ಟಿ20 ಪಂದ್ಯ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ರು ಗೊತ್ತೇ?
Image
ಅಫ್ಘಾನ್ ವಿರುದ್ಧ ಭಾರತಕ್ಕೆ 6 ವಿಕೆಟ್​ಗಳ ಸುಲಭ ಜಯ
Image
ಅಫ್ಘಾನ್ ವಿರುದ್ಧ ಸೊನ್ನೆ ಸುತ್ತಿದರೂ ಎರಡೆರಡು ದಾಖಲೆ ಬರೆದ ರೋಹಿತ್..!

IND vs AFG: ಅಫ್ಘಾನ್ ವಿರುದ್ಧ ಸಂಪೂರ್ಣ ವಿಭಿನ್ನ ತಂಡವನ್ನು ಕಣಕ್ಕಿಳಿಸಿದ ರೋಹಿತ್..!

ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ, ರೋಹಿತ್ ಶರ್ಮಾ ಮುಂದೆ ಹೋಗಿ ಮಿಡ್-ಆಫ್ ಕಡೆಗೆ ಚೆಂಡನ್ನು ಅಟ್ಟಿ ರನ್‌ಗಳಿಗಾಗಿ ಓಡಿದರು. ಆಗ ಮಿಡ್ ಆಫ್ ಫೀಲ್ಡರ್ ಡೈವ್ ಮಾಡುವ ಮೂಲಕ ಚೆಂಡನ್ನು ನಿಲ್ಲಿಸಿದರು. ಅತ್ತ ರೋಹಿತ್ ಒಂದು ರನ್​ಗೆಂದು ಗಿಲ್ ಅವರನ್ನು ಕರೆದರು. ಆದರೆ, ಗಿಲ್ ಚೆಂಡನ್ನು ನೋಡುತ್ತಲೇ ಇದ್ದರಷ್ಟೆ ವಿನಃ ರನ್​ಗೆಂದು ಓಡಲಿಲ್ಲ. 2 ಹೆಜ್ಜೆ ಮುಂದೆ ಬಂದು ಪುನಃ ಕ್ರೀಸ್‌ಗೆ ಮರಳಿದರು.

ರೋಹಿತ್ ರನ್‌ಗಾಗಿ ಕೂಗಾಡುತ್ತಿದ್ದರೂ ಗಿಲ್ ಕದಲಲಿಲ್ಲ. ಪರಿಣಾಮ ರೋಹಿತ್ ಕ್ರೀಸ್‌ಗೆ ಮರಳಲು ಸಾಧ್ಯವಾಗದೆ ರನೌಟ್ ಆದರು. ಇದರಿಂದ ಕೋಪಗೊಂಡ ರೋಹಿತ್ ಎಲ್ಲರ ಮುಂದೆ ಶುಭ್​ಮನ್ ಮೇಲೆ ರೇಗಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲಿ ಸಂಪೂರ್ಣ ತಪ್ಪು ಗಿಲ್ ಅವರದ್ದೇ ಆಗಿತ್ತು. ಏಕೆಂದರೆ ರನ್ ಕರೆ ರೋಹಿತ್ ಅವರದ್ದು, ರನೌಟ್ ಆಗುವ ಅಪಾಯದಲ್ಲಿದ್ದಿದ್ದು ಕೂಡ ರೋಹಿತ್ ಅವರೇ. ರೋಹಿತ್ ಕರೆದ ಕೂಡಲೇ ಓಡದೆ ಗಿಲ್ ಚೆಂಡನ್ನು ನೋಡುತ್ತಲೇ ಇದ್ದರು. ಇಷ್ಟೇ ಅಲ್ಲ, ತನ್ನ ತಪ್ಪಿನ ಹೊರತಾಗಿಯೂ, ಗಿಲ್ ನಾಯಕನಿಗೆ ತನ್ನ ವಿಕೆಟ್ ತ್ಯಾಗ ಮಾಡದಿರುವುದು ರೋಹಿತ್‌ಗೆ ಮತ್ತಷ್ಟು ಕೋಪವನ್ನುಂಟುಮಾಡಿತು. ಇದಾದ ಬಳಿಕ ಗಿಲ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೆ 12 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ