AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amir Hussain Lone: ಎರಡೂ ಕೈಗಳಿಲ್ಲದಿದ್ದರೂ ಕ್ರಿಕೆಟ್​ ಆಡುವ ಅಮೀರ್ ಹುಸೇನ್, ಪ್ಯಾರಾ ಕ್ರಿಕೆಟ್​ ತಂಡ ಮುನ್ನಡೆಸುವ ಜವಾಬ್ದಾರಿ

ಎಲ್ಲಾ ಇದ್ದರೂ ಏನೂ ಸಾಧಿಸಲಾಗದ ಈ ಕಾಲದಲ್ಲಿ ಕೈಗಳಿಲ್ಲದಿದ್ದರೂ ಕ್ರಿಕೆಟ್​ ಆಡಿ ಇವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಕಾಶ್ಮೀರದ ಖ್ಯಾತ ದಿವ್ಯಾಂಗ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್(Amir Hussain Lone) ಕಥೆ ಇದು. ಕಾಶ್ಮೀರದ ವಾಘಮಾ ಗ್ರಾಮದ 34 ವರ್ಷದ ದಿವ್ಯಾಂಗ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

Amir Hussain Lone: ಎರಡೂ ಕೈಗಳಿಲ್ಲದಿದ್ದರೂ ಕ್ರಿಕೆಟ್​ ಆಡುವ ಅಮೀರ್ ಹುಸೇನ್, ಪ್ಯಾರಾ ಕ್ರಿಕೆಟ್​ ತಂಡ ಮುನ್ನಡೆಸುವ ಜವಾಬ್ದಾರಿ
ಅಮೀರ್
ನಯನಾ ರಾಜೀವ್
|

Updated on: Jan 12, 2024 | 8:14 AM

Share

ಎಲ್ಲಾ ಇದ್ದರೂ ಏನೂ ಸಾಧಿಸಲಾಗದ ಈ ಕಾಲದಲ್ಲಿ ಕೈಗಳಿಲ್ಲದಿದ್ದರೂ ಕ್ರಿಕೆಟ್​ ಆಡಿ ಇವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಕಾಶ್ಮೀರದ ಖ್ಯಾತ ದಿವ್ಯಾಂಗ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್(Amir Hussain Lone) ಕಥೆ ಇದು. ಕಾಶ್ಮೀರದ ವಾಘಮಾ ಗ್ರಾಮದ 34 ವರ್ಷದ ದಿವ್ಯಾಂಗ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಮೀರ್ ಅವರಿಗೆ ನೀಡಲಾಗಿದೆ. 8ನೇ ವಯಸ್ಸಿನಲ್ಲಿ ಗರಗಸದ ಕಾರ್ಖಾನೆ ಅಪಘಾತದಲ್ಲಿ ಎರಡು ತೋಳುಗಳನ್ನು ಕಳೆದುಕೊಂಡಿದ್ದರು, ಆದರೂ ಎದೆಗುಂದದೆ ಯಾರಿಂದಲೂ ಆಗದಿರುವುದನ್ನು ಇವರು ಸಾಧಿಸಿ ತೋರಿಸಿದ್ದಾರೆ.

2013ರಲ್ಲಿ ಅಮೀರ್ ತನ್ನ ಪಾದಗಳನ್ನು ಬಳಸಿ ಬೌಲಿಂಗ್ ಮಾಡಲು ಶುರು ಮಾಡಿದ್ದರು, ಕುತ್ತಿಗೆಯಲ್ಲಿ ಬ್ಯಾಟ್​ನ್ನು ಸಿಕ್ಕಿಸಿಕೊಂಡು ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಶಾರ್ಜಾದಲ್ಲಿ ನಡೆದ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ್ದರು.

ಅವರ ಅಸಾಧಾರಣ ಪ್ರಯಾಣವನ್ನು ಒಪ್ಪಿಕೊಂಡ ಮುಂಬೈ ಮೂಲದ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಪಿಕಲ್ ಎಂಟರ್‌ಟೈನ್‌ಮೆಂಟ್’ ಅಮೀರ್ ಅವರ ಜೀವನಚರಿತ್ರೆಯ ನಿರ್ಮಾಣವನ್ನು ಘೋಷಿಸಿತು. ಅಮೀರ್’ ಎಂಬ ಶೀರ್ಷಿಕೆಯ ಈ ಬಯೋಪಿಕ್ ಅನ್ನು ಬಿಗ್ ಬ್ಯಾಟ್ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಇದನ್ನು ಮಹೇಶ್ ವಿ ಭಟ್ ನಿರ್ದೇಶಿಸಲಿದ್ದಾರೆ.

ಈ ಬಯೋಪಿಕ್ ನಲ್ಲಿ ಅಮೀರ್ ಹುಸೇನ್ ಲೋನ್ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಬಾಲಿವುಡ್ ನಟ ವಿಕ್ಕಿ ಕೌಶಲ್ ಹೇಳಿದ್ದರು.

ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ