AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG: ಅಫ್ಘಾನ್ ವಿರುದ್ಧ ಸಂಪೂರ್ಣ ವಿಭಿನ್ನ ತಂಡವನ್ನು ಕಣಕ್ಕಿಳಿಸಿದ ರೋಹಿತ್..!

IND vs AFG: ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

IND vs AFG: ಅಫ್ಘಾನ್ ವಿರುದ್ಧ ಸಂಪೂರ್ಣ ವಿಭಿನ್ನ ತಂಡವನ್ನು ಕಣಕ್ಕಿಳಿಸಿದ ರೋಹಿತ್..!
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on:Jan 11, 2024 | 6:54 PM

Share

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಮೊಹಾಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಸಂಪೂರ್ಣ ಸಜ್ಜಾಗಿದೆ. ಭಾರತ ತಂಡ ಪಂದ್ಯಕ್ಕೂ ಮುನ್ನ ಕಠಿಣ ಕಸರತ್ತು ನಡೆಸಿತ್ತು. 2024ರ ಟಿ20 ವಿಶ್ವಕಪ್‌ನ ತಯಾರಿಗಾಗಿ ಈ ಸರಣಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ರೋಹಿತ್ ಶರ್ಮಾ ((Rohit Sharma)) ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಟೀಂ ಇಂಡಿಯಾಕ್ಕೆ ಮರಳಲು ಇದೇ ಕಾರಣ. ಆದರೆ ಮೊದಲ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ಇದೀಗ ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಸಂಪೂರ್ಣ ವಿಭಿನ್ನ ತಂಡ

ಅಫ್ಘಾನಿಸ್ತಾನ ವಿರುದ್ಧ ನಾಯಕ ರೋಹಿತ್ ಶರ್ಮಾ ಸಂಪೂರ್ಣ ವಿಭಿನ್ನ ತಂಡವನ್ನು ಇಂದು ಕಣಕ್ಕಿಳಿಸುತ್ತಿದ್ದಾರೆ. ಇಂಜುರಿಯಿಂದಾಗಿ ಆರಂಭಿಕ ಯಶಸ್ವಿ ಜೈಸ್ವಾಲ್ ಮೊದಲ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಜೈಸ್ವಾಲ್ ಇಂಜುರಿಯಿಂದ ಹೊರಬಿದ್ದಿದ್ದರೆ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್​ಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ. ಅವರು ಬದಲು ಜಿತೇಶ್ ಶರ್ಮಾಗೆ ವಿಕೆಟ್ ಕೀಪಿಂಗ್ ಜವಬ್ದಾರಿ ನೀಡಲಾಗಿದೆ. ಹಾಗೆಯೇ ಕುಲ್ದೀಪ್ ಯಾದವ್​ಗೂ ಈ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.

IND vs AFG 1st T20 Live Score: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಮೂವರು ಸ್ಪಿನ್ನರ್

ಮೊಹಾಲಿ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುವುದರಿಂದ ಟೀಂ ಇಂಡಿಯಾದಲ್ಲಿ ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ರವಿ ಬಿಷ್ಣೋಯಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಬೆಂಚ್ ಕಾಯ್ದಿದ ಬೌಲಿಂಗ್ ಆಲ್​ರೌಂಡರ್ ಶಿವಂ ದುಬೆಗೆ ಈ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್ ಮತ್ತು ಮುಜೀಬ್ ಉರ್ ರಹಮಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Thu, 11 January 24