IND vs AFG 1st T20 Highlights: ಅಫ್ಘಾನ್ ವಿರುದ್ಧ ಮೊದಲ ಟಿ20 ಗೆದ್ದ ಭಾರತ

ಪೃಥ್ವಿಶಂಕರ
|

Updated on:Jan 11, 2024 | 10:16 PM

India vs AFG 1st T20I Highlights in Kannada: ಹೊಸ ವರ್ಷದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆ ಅವರ ಆಲ್‌ರೌಂಡ್ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

IND vs AFG 1st T20 Highlights: ಅಫ್ಘಾನ್ ವಿರುದ್ಧ ಮೊದಲ ಟಿ20 ಗೆದ್ದ ಭಾರತ
ಭಾರತ- ಅಫ್ಘಾನಿಸ್ತಾನ

ಹೊಸ ವರ್ಷದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆ ಅವರ ಆಲ್‌ರೌಂಡ್ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಭಾರತೀಯ ಬೌಲರ್‌ಗಳು ಮೊದಲು ಅಫ್ಘಾನಿಸ್ತಾನವನ್ನು ಕೇವಲ 158 ಕ್ಕೆ ಸೀಮಿತಗೊಳಿಸಿದರು. ಆ ನಂತರ ಶಿವಂ ದುಬೆ-ಜಿತೇಶ್ ಶರ್ಮಾ ಅವರ ಬಲವಾದ ಇನ್ನಿಂಗ್ಸ್‌ನಿಂದ 18 ನೇ ಓವರ್‌ನಲ್ಲಿಯೇ ಟೀಂ ಇಂಡಿಯಾ ಗೆಲುವಿನ ದಡ ಸೇರಿತು. ಇದರೊಂದಿಗೆ 14 ತಿಂಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ವಾಪಸಾದ ನಾಯಕ ರೋಹಿತ್ ಶರ್ಮಾ ಗೆಲುವಿನ ರುಚಿ ಸವಿದಿದ್ದಾರೆ.

LIVE NEWS & UPDATES

The liveblog has ended.
  • 11 Jan 2024 10:15 PM (IST)

    ಭಾರತಕ್ಕೆ 6 ವಿಕೆಟ್‌ ಜಯ

    ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ 6 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್‌ಗಳ ಜಯ ಸಾಧಿಸಿತು.

  • 11 Jan 2024 10:09 PM (IST)

    ಶಿವಂ ದುಬೆ ಅರ್ಧಶತಕ

    ಭಾರತ ತಂಡದ ಆಲ್ ರೌಂಡರ್ ಶಿವಂ ದುಬೆ ಅಫ್ಘಾನಿಸ್ತಾನ ವಿರುದ್ಧ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಿವಂ ದುಬೆ ಅವರ ಎರಡನೇ ಅರ್ಧಶತಕವಾಗಿದೆ.

  • 11 Jan 2024 09:53 PM (IST)

    ಜಿತೇಶ್ ಔಟ್

    ಭಾರತಕ್ಕೆ ನಾಲ್ಕನೇ ಹೊಡೆತ ಬಿದ್ದಿದೆ. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಜಿತೇಶ್ ಶರ್ಮಾ 31 ರನ್ ಗಳಿಸಿ ಕ್ಯಾಚ್ ಔಟ್ ಆದರು.

  • 11 Jan 2024 09:53 PM (IST)

    ಭಾರತದ ಶತಕ ಪೂರ್ಣ

    12 ಓವರ್‌ಗಳ ನಂತರ ಭಾರತ ತಂಡದ ಸ್ಕೋರ್ 3 ವಿಕೆಟ್‌ಗೆ 102 ರನ್ ಆಗಿದೆ. ಶಿವಂ ದುಬೆ 33 ಮತ್ತು ಜಿತೇಶ್ ಶರ್ಮಾ 18 ರನ್‌ಗಳಿಸಿ ಆಡುತ್ತಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

  • 11 Jan 2024 09:45 PM (IST)

    ದುಬೆ-ಜಿತೇಶ್ ಸೂಪರ್ ಬ್ಯಾಟಿಂಗ್

    ಭಾರತ 11 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ. ಪ್ರಸ್ತುತ ಜಿತೇಶ್ ಶರ್ಮಾ 11 ರನ್ ಹಾಗೂ ಶಿವಂ ದುಬೆ 28 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಭಾರತಕ್ಕೆ 54 ಎಸೆತಗಳಲ್ಲಿ 69 ರನ್‌ಗಳ ಅಗತ್ಯವಿದೆ.

  • 11 Jan 2024 09:45 PM (IST)

    76 ರನ್‌ಗಳ ಅಗತ್ಯ

    10 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಗೆಲುವಿಗೆ 60 ಎಸೆತಗಳಲ್ಲಿ 76 ರನ್‌ಗಳ ಅಗತ್ಯವಿದೆ. ಶಿವಂ ದುಬೆ 20 ಎಸೆತಗಳಲ್ಲಿ 26 ರನ್ ಹಾಗೂ ಜಿತೇಶ್ ಶರ್ಮಾ 4 ಎಸೆತಗಳಲ್ಲಿ 6 ರನ್ ಗಳಿಸಿ ಆಡುತ್ತಿದ್ದಾರೆ.

  • 11 Jan 2024 09:29 PM (IST)

    ತಿಲಕ್ ವರ್ಮಾ ಔಟ್

    ಭಾರತಕ್ಕೆ ಮೂರನೇ ಹೊಡೆತ ಬಿದ್ದಿದೆ. ತಿಲಕ್ ವರ್ಮಾ ಔಟಾಗಿದ್ದಾರೆ. ಒಂಬತ್ತನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗುಲ್ಬದಿನ್ ನೈಬ್ ಅದ್ಭುತ ಕ್ಯಾಚ್ ಪಡೆದರು.

    ತಿಲಕ್ ವರ್ಮಾ- 26 (22b 2×4 1×6

  • 11 Jan 2024 09:14 PM (IST)

    ಭಾರತದ ಅರ್ಧಶತಕ ಪೂರ್ಣ

    7ನೇ ಓವರ್​ನಲ್ಲಿ ಭಾರತ ತನ್ನ ಅರ್ಧಶತಕದ ಗಡಿ ದಾಟಿದೆ. ಈ ಓವರ್​ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಂತು.

  • 11 Jan 2024 09:10 PM (IST)

    ಪವರ್ ಪ್ಲೇ ಅಂತ್ಯ

    ಭಾರತದ ಪವರ್ ಪ್ಲೇ ಅಂತ್ಯಗೊಂಡಿದೆ. ಈ 6 ಓವರ್​ಗಳಲ್ಲಿ ತಂಡ 2 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಕಲೆಹಾಕಿದೆ. ಮುಜೀಬ್ ಬೌಲ್ ಮಾಡಿದ 6ನೇ ಓವರ್​ ಮೇಡನ್ ಆಯಿತು.

  • 11 Jan 2024 09:03 PM (IST)

    ಎರಡನೇ ವಿಕೆಟ್ ಪತನ

    4ನೇ ಓವರ್​ನಲ್ಲಿ ಭಾರತದ ಎರಡನೇ ವಿಕೆಟ್ ಪತನವಾಗಿದೆ. ಆರಂಭಿಕ ಗಿಲ್ 12 ಎಸೆತಗಳಲ್ಲಿ 23 ರನ್ ಸಿಡಿಸಿ ಸ್ಟಂಪ್ ಔಟ್ ಆದರು.

    ಭಾರತ 28-2

  • 11 Jan 2024 08:59 PM (IST)

    ಗಿಲ್ ಬೌಂಡರಿ

    3ನೇ ಓವರ್​ನಲ್ಲಿ ಗಿಲ್ 2 ಬೌಂಡರಿ ಬಾರಿಸಿದರು. ಈ ಓವರ್​ನಲ್ಲಿ ಒಟ್ಟು 11 ರನ್ ಬಂದವು.

    ಭಾರತ 19-1

  • 11 Jan 2024 08:51 PM (IST)

    ರೋಹಿತ್ ಔಟ್

    ಭಾರತಕ್ಕೆ ಮೊದಲ ಓವರ್​ನಲ್ಲೇ ಮೊದಲ ಹೊಡೆತ ಬಿದ್ದಿದೆ. ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ರನ್ ಔಟ್ ಆಗಿದ್ದಾರೆ.

  • 11 Jan 2024 08:34 PM (IST)

    ಭಾರತಕ್ಕೆ 159 ರನ್ ಟಾರ್ಗೆಟ್

    ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದೆ. ಈ ಮೂಲಕ ಭಾರತಕ್ಕೆ 159 ರನ್ ಟಾರ್ಗೆಟ್ ನೀಡಿದೆ. 20 ಓವರ್​ನಲ್ಲಿ 3 ಬೌಂಡರಿ ಕೂಡ ಬಂದವು.

  • 11 Jan 2024 08:24 PM (IST)

    ನಬಿ ಔಟ್

    18ನೇ ಓವರ್​ನ ಕೊನೆಯ ಎಸೆತದಲ್ಲಿ ನಬಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ರಿಂಕುಗೆ ಕ್ಯಾಚಿತ್ತು ನಿರ್ಗಮಿಸಿದರು. ನಬಿ 27 ಎಸೆತಗಳಲ್ಲಿ 42 ರನ್ ಸಿಡಿಸಿದರು.

  • 11 Jan 2024 08:23 PM (IST)

    ನಬಿ ಸ್ಫೋಟಕ ಬ್ಯಾಟಿಂಗ್

    16 ಓವರ್‌ಗಳಲ್ಲಿ ಅಫ್ಘಾನಿಸ್ತಾನ ಮೂರು ವಿಕೆಟ್ ಕಳೆದುಕೊಂಡು 120 ರನ್ ಗಳಿಸಿದೆ. ಮೊಹಮ್ಮದ್ ನಬಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 22 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿದ್ದಾರೆ.

  • 11 Jan 2024 08:20 PM (IST)

    ನಾಲ್ಕನೇ ವಿಕೆಟ್ ಪತನ

    ಅಫ್ಘಾನಿಸ್ತಾನ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಮುಖೇಶ್ ಕುಮಾರ್ ಎಸೆತದಲ್ಲಿ 29 ರನ್ ಗಳಿಸಿದ್ದ ಒಮರ್ಜಾಯ್ ಔಟಾದರು.

  • 11 Jan 2024 08:10 PM (IST)

    ಅಫ್ಘಾನ್ ತಂಡದ ಶತಕ ಪೂರ್ಣ

    ಅಫ್ಘಾನಿಸ್ತಾನ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 105 ರನ್ ಗಳಿಸಿದೆ. ಮೊಹಮ್ಮದ್ ನಬಿ ಮತ್ತು ಒಮರ್ಜಾಯ್ ಜೋಡಿ ಕ್ರೀಸ್‌ನಲ್ಲಿದೆ.

  • 11 Jan 2024 08:02 PM (IST)

    12 ಓವರ್‌ಗಳ ಆಟ ಅಂತ್ಯ

    ಅಫ್ಘಾನಿಸ್ತಾನ 12 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ. ಒಮರ್ಜಾಯ್ 9 ಎಸೆತಗಳಲ್ಲಿ 14 ರನ್ ಗಳಿಸಿ ಆಡುತ್ತಿದ್ದಾರೆ. ನಬಿ 7 ಎಸೆತಗಳಲ್ಲಿ 4 ರನ್ ಗಳಿಸಿ ಆಡುತ್ತಿದ್ದಾರೆ. ಟೀಂ ಇಂಡಿಯಾದ ಬೌಲರ್‌ಗಳು ಮತ್ತೊಮ್ಮೆ ವಿಕೆಟ್‌ಗಳ ಹುಡುಕಾಟದಲ್ಲಿದ್ದಾರೆ.

  • 11 Jan 2024 07:48 PM (IST)

    ರಹಮತ್ ಶಾ ಔಟ್

    ಭಾರತ ಕ್ರಿಕೆಟ್ ತಂಡಕ್ಕೆ ಮೂರನೇ ಯಶಸ್ಸು ಸಿಕ್ಕಿದೆ. ರಹಮತ್ ಶಾ ಔಟಾಗಿದ್ದಾರೆ. ಅಕ್ಷರ್​ ಪಟೇಲ್​ ತಮ್ಮ 2ನೇ ವಿಕೆಟ್ ಕಬಳಿಸಿದ್ದಾರೆ. 10 ಓವರ್​ಗಳ ನಂತರ ಅಫ್ಘಾನ್ ತಂಡ 3 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ.

  • 11 Jan 2024 07:38 PM (IST)

    2ನೇ ವಿಕೆಟ್ ಪತನ

    ಅಫ್ಘಾನ್ ತಂಡದ 2ನೇ ವಿಕೆಟ್ ಪತನವಾಗಿದೆ ನಾಯಕ ಇಬ್ರಾಹಿಂ ಜರ್ಧಾನ್ ದುಬೆ ಬೌಲಿಂಗ್​ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ಔಟಾದರು.

  • 11 Jan 2024 07:36 PM (IST)

    ಗುರ್ಬಾಝ್ ಔಟ್

    8ನೇ ಓವರ್​ನ ಕೊನೆಯ ಎಸೆತದಲ್ಲಿ ಗುರ್ಬಾಝ್ ಸ್ಟಂಪ್ ಔಟ್ ಆದರು. ಅಕ್ಷರ್ ಪಟೇಲ್ ಮೊದಲ ವಿಕೆಟ್ ಪಡೆದರು.

  • 11 Jan 2024 07:35 PM (IST)

    ಅರ್ಧಶತಕ ಪೂರ್ಣ

    ಅಫ್ಘಾನ್ ತಂಡ 8ನೇ ಓವರ್ನಲ್ಲಿ ತನ್ನ 50 ರನ್ ಪೂರೈಸಿತು. ಗುರ್ಬಾಝ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು 50 ರ ಗಡಿ ದಾಟಿಸಿದರು.

  • 11 Jan 2024 07:33 PM (IST)

    ಮೊದಲ ವಿಕೆಟ್‌ಗಾಗಿ ಹುಡುಕಾಟ

    ಭಾರತ ತಂಡ ಮೊದಲ ವಿಕೆಟ್‌ಗಾಗಿ ಹುಡುಕಾಟ ನಡೆಸುತ್ತಿದೆ. ಇಬ್ರಾಹಿಂ ಜದ್ರಾನ್ ಮತ್ತು ಗುರ್ವಾಜ್ ಕ್ರೀಸ್‌ನಲ್ಲಿದ್ದಾರೆ. 7ನೇ ಓವರ್​ನಲ್ಲಿ ಇಬ್ರಾಹಿಂ 1 ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು.

  • 11 Jan 2024 07:28 PM (IST)

    ಪವರ್ ಪ್ಲೇ ಅಂತ್ಯ

    ಅಫ್ಘಾನ್ ತಂಡದ ಬ್ಯಾಟಿಂಗ್ ಪವರ್ ಪ್ಲೇ ಮುಗಿದಿದೆ. ಈ 6 ಓವರ್​ಗಳಲ್ಲಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 33 ರನ್ ಕಲೆಹಾಕಿದೆ. ಸ್ವಲ್ಪ ಮಟ್ಟಿಗೆ ಟೀಂ ಇಂಡಿಯಾ ತನ್ನ ಫೀಲ್ಡಿಂಗ್​ನಲ್ಲಿ ಎಡವುತ್ತಿದೆ.

  • 11 Jan 2024 07:24 PM (IST)

    ನಾಲ್ಕನೇ ಓವರ್ ಮುಕ್ತಾಯ

    ಅಕ್ಷರ್ ಪಟೇಲ್ ಬೌಲ್ ಮಾಡಿದ ನಾಲ್ಕನೇ ಓವರ್​ನಲ್ಲಿ 1 ಬೌಂಡರಿ ಸೇರಿದಂತೆ 7 ರನ್‌ಗಳು ಬಂದವು.

  • 11 Jan 2024 07:23 PM (IST)

    ನಿಧಾನಗತಿಯ ಆರಂಭ

    ಅಫ್ಘಾನಿಸ್ತಾನದ ನಿಧಾನಗತಿಯ ಆರಂಭ, ತಂಡಕ್ಕೆ ದೊಡ್ಡ ಹೊಡೆತದ ಅಗತ್ಯವಿದೆ.

  • 11 Jan 2024 07:23 PM (IST)

    ಬೌಂಡರಿ

    ಮುಖೇಶ್ ಕುಮಾರ್ ಬೌಲ್ ಮಾಡಿದ ಎರಡನೇ ಓವರ್‌ನಲ್ಲಿ 1 ಬೌಂಡರಿ ಸೇರಿದಂತೆ 6 ರನ್ ಬಂದವು.

  • 11 Jan 2024 07:17 PM (IST)

    ಮೇಡನ್ ಓವರ್

    ಮೊದಲ ಓವರ್‌ನಲ್ಲಿ ಅರ್ಷದೀಪ್ ಯಾವುದೇ ರನ್ ನೀಡಲಿಲ್ಲ. ಆರು ಎಸೆತಗಳನ್ನು ಆಡಿದ ರಹಮಾನುಲ್ಲಾ ಗುರ್ಬಾಜ್ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ.

  • 11 Jan 2024 07:03 PM (IST)

    ಪಂದ್ಯ ಆರಂಭ

    ಪಂದ್ಯ ಆರಂಭಗೊಂಡಿದ್ದು, ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಇಬ್ರಾಹಿಂ ಜದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕ್ರೀಸ್‌ನಲ್ಲಿದ್ದಾರೆ.

  • 11 Jan 2024 06:46 PM (IST)

    ಅಫ್ಘಾನಿಸ್ತಾನ ತಂಡ

    ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಹಮತ್ ಶಾ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಗುಲ್ಬದಿನ್ ನೈಬ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್ ಮತ್ತು ಮುಜೀಬ್ ಉರ್ ರಹಮಾನ್.

  • 11 Jan 2024 06:44 PM (IST)

    ಭಾರತ ತಂಡ

    ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್.

  • 11 Jan 2024 06:31 PM (IST)

    ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 11 Jan 2024 06:09 PM (IST)

    6:30ಕ್ಕೆ ಟಾಸ್

    ಭಾರತ -ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.

  • Published On - Jan 11,2024 6:08 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ