IND vs AFG: ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ 6 ಆಟಗಾರರಿಗೆ ಇದು ಮೊದಲ ಟಿ20 ಪಂದ್ಯ..!
IND vs AFG: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಂಡಳಿ 16 ಆಟಗಾರರ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದೆ. ಇವರಲ್ಲಿ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಮುಖೇಶ್ ಕುಮಾರ್ರಂತಹ ಯುವ ಆಟಗಾರರು ರೋಹಿತ್ ನಾಯಕತ್ವದಲ್ಲಿ ಇನ್ನೂ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ.
ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಅಂದರೆ ಜನವರಿ 11 ರಿಂದು ನಡೆಯಲಿದೆ. ಉಭಯ ತಂಡಗಳ ಕದನಕ್ಕೆ ಮೊಹಾಲಿ ಮೈದಾನ ಸಜ್ಜಾಗಿದೆ. ಈ ಸರಣಿಯೊಂದಿಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit Sharma) 14 ತಿಂಗಳ ನಂತರ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಈ 14 ತಿಂಗಳಲ್ಲಿ ಟೀಂ ಇಂಡಿಯಾ (Team India) ಪರ ಹಲವು ಯುವ ಆಟಗಾರರು ಟಿ20 ತಂಡದಲ್ಲಿ ಆಡಿದ್ದಾರೆ. ಆದರೆ 14 ತಿಂಗಳ ನಂತರ ಟಿ20 ಮಾದರಿಯಲ್ಲಿ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ 6 ಆಟಗಾರರು ಮೊದಲ ಟಿ20 ಪಂದ್ಯವನ್ನು ಆಡಲಿದ್ದಾರೆ.
ಆ 6 ಆಟಗಾರರು ಯಾರು ಗೊತ್ತಾ?
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಂಡಳಿ 16 ಆಟಗಾರರ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದೆ. ಇವರಲ್ಲಿ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ ಮತ್ತು ಮುಖೇಶ್ ಕುಮಾರ್ರಂತಹ ಯುವ ಆಟಗಾರರು ರೋಹಿತ್ ನಾಯಕತ್ವದಲ್ಲಿ ಇನ್ನೂ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಈ ಎಲ್ಲಾ ಆಟಗಾರರು ಕಳೆದ ವರ್ಷವಷ್ಟೇ ಟಿ20 ಮಾದರಿಗೆ ಪದಾರ್ಪಣೆ ಮಾಡಿದ್ದರು. ಇದೀಗ ಈ 6 ಆಟಗಾರರು ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಟಿ20 ಪಂದ್ಯವನ್ನು ಆಡುವ ಅವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
Breaking: ಮೊದಲ ಟಿ20 ಪಂದ್ಯಕ್ಕೆ ಕಿಂಗ್ ಕೊಹ್ಲಿ ಅಲಭ್ಯ! ಖಚಿತ ಪಡಿಸಿದ ದ್ರಾವಿಡ್
ನಾಯಕನಾಗಿ ರೋಹಿತ್ ದಾಖಲೆ
ರೋಹಿತ್ ಶರ್ಮಾ ಇದುವರೆಗೆ 51 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಟೀಂ ಇಂಡಿಯಾ 39 ಪಂದ್ಯಗಳನ್ನು ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡದ ಗೆಲುವಿನ ಶೇಕಡವಾರು 76.47 ರಷ್ಟಿದೆ. ಹಾಗೆಯೇ ನಾಯಕನಾಗಿ ಬ್ಯಾಟಿಂಗ್ನಲ್ಲೂ ಅಬ್ಬರಿಸಿರುವ ರೋಹಿತ್ ಶರ್ಮಾ ಒಟ್ಟು 1527 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್ನಿಂದ 2 ಶತಕ ಹಾಗೂ 10 ಅರ್ಧಶತಕಗಳೂ ಸೇರಿವೆ. ಇದನ್ನು ಹೊರತುಪಡಿಸಿ ಟೀಂ ಇಂಡಿಯಾ ಪರ ಒಟ್ಟು 148 ಟಿ20 ಪಂದ್ಯಗಳನ್ನು ಆಡಿರುವ ರೋಹಿತ್, 4 ಶತಕಗಳನ್ನು ಒಳಗೊಂಡಂತೆ 3853 ರನ್ ಕಲೆಹಾಕಿದ್ದಾರೆ.
ಟಿ20 ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Thu, 11 January 24