ಟಿ20 ವಿಶ್ವಕಪ್ನಲ್ಲಿ (T20 World Cup 2022) ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಅತಿಥೇಯ ಆಸ್ಟ್ರೇಲಿಯ ತಂಡವನ್ನು 6 ರನ್ಗಳಿಂದ ಸೋಲಿಸುವುದರೊಂದಿಗೆ ಹಾಲಿ ಚಾಂಪಿಯನ್ಗಳಿಗೆ ಸೋಲಿನ ಶಾಕ್ ನೀಡಿದೆ. ಕೊನೆಯ ಹಂತದವರೆಗೂ ಗೆಲುವಿನ ಟ್ರ್ಯಾಕ್ನಲ್ಲಿದ್ದ ಆಸೀಸ್ ತಂಡದ ಸೋಲಿಗೆ ಶಮಿ (Mohammed Shami) ಎಸೆದ 20ನೇ ಓವರ್ ಪ್ರಮುಖ ಕಾರಣವಾಯಿತು. ಅಂತಿಮ ಓವರ್ ಬೌಲ್ ಮಾಡಿದ ಶಮಿ ಮೊದಲ ಎರಡು ಎಸೆತಗಳಲ್ಲಿ 4 ರನ್ ಬಿಟ್ಟುಕೊಟ್ಟರೆ ಇನ್ನುಳಿದ 4 ಎಸೆತಗಳಲ್ಲಿ ಆಸೀಸ್ ತಂಡದ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಡೆತ್ ಓವರ್ ಬೌಲಿಂಗ್ನಲ್ಲಿ ಸಮಸ್ಯೆ ಎದುರಿಸುತ್ತಿದ್ದ ರೋಹಿತ್ ಪಡೆಗೆ ಶಮಿ ಆಗಮನ ಆನೆ ಬಲವನ್ನು ತಂದಿದೆ. ಪಂದ್ಯದ ಬಳಿಕ ಶಮಿ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma), ಶಮಿ 20ನೇ ಓವರ್ ಬೌಲಿಂಗ್ ಮಾಡಲು ಕಾರಣ ಏನೆಂಬದನ್ನು ಬಹಿರಂಗ ಪಡಿಸಿದ್ದಾರೆ.
ವಾಸ್ತವವಾಗಿ ಈ ಮೊದಲು ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಶಮಿ, ಇಂಜುರಿಗೊಂಡ ಬುಮ್ರಾ ಬದಲಿಗೆ ಮುಖ್ಯ ತಂಡದಲ್ಲಿ ಆಯ್ಕೆಯಾಗಿದ್ದರು. ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನಾಡದ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದಾಗ ಹಲವರು ಟೀಕಾ ಪ್ರಹಾರ ನಡೆಸಿದ್ದರು. ಆದರೆ ವರ್ಷದ ಬಳಿಕ ಆಖಾಡಕ್ಕಿಳಿದರೂ, ಇಂದಿನ ಪಂದ್ಯದಲ್ಲಿ ಶಮಿ ತೋರಿದ ಪ್ರದರ್ಶನ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿತು.
ಇದನ್ನೂ ಓದಿ: T20 World Cup 2022: ಅಭ್ಯಾಸ ಪಂದ್ಯದಲ್ಲೂ ರೋಹಿತ್ ವಿಫಲ; ತಂಡಕ್ಕೆ ತಲೆನೋವಾದ ನಾಯಕನ ಕಳಪೆ ಫಾರ್ಮ್
11 ರನ್ಗಳನ್ನು ಸೇವ್ ಮಾಡುವ ಟಾಸ್ಕ್ ಇತ್ತು
ಅದಾಗ್ಯೂ ಇಂದಿನ ಪಂದ್ಯದಲ್ಲಿ ಶಮಿ ಮುಖ್ಯ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. 13ನೇ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಮೊದಲು ಟೀಂ ಇಂಡಿಯಾ ಆಡಿದ್ದ 2 ಅಭ್ಯಾಸ ಪಂದ್ಯಗಳಲ್ಲೂ ಶಮಿ ಆಡಿರಲಿಲ್ಲ. ಇದಕ್ಕೆ ಕಾರಣವೂ ಇದ್ದು, ಈ ಪಂದ್ಯದ 2 ದಿನಕ್ಕೂ ಮುಂಚೆ ಶಮಿ ತಂಡವನ್ನು ಸೇರಿಕೊಂಡಿದ್ದರು. ಈ ಪಂದ್ಯದಲ್ಲಿ 20ನೇ ಓವರ್ ಬೌಲ್ ಮಾಡುವ ಅವಕಾಶ ಪಡೆದ ಶಮಿ ಮುಂದೆ 11 ರನ್ಗಳನ್ನು ಸೇವ್ ಮಾಡುವ ಟಾಸ್ಕ್ ಇತ್ತು.
ಮೊದಲ ಎರಡು ಎಸೆತಗಳಲ್ಲಿ ತಲಾ ಎರಡೆರಡು ರನ್ ಬಿಟ್ಟುಕೊಟ್ಟ ಶಮಿ, ತನ್ನ ಮೂರನೇ ಎಸೆತದಲ್ಲಿ ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆ ಬಳಿಕ ಆಸ್ಟನ್ ಆಗರ್ ಅವರನ್ನು ರನೌಟ್ ಮಾಡುವಲ್ಲಿ ಶಮಿ ಯಶಸ್ವಿಯಾದರು. ಉಳಿದ ಇನ್ನೇರಡು ಎಸೆತಗಳಲ್ಲಿ ಜೋಶ್ ಇಂಗ್ಲಿಸ್ ಹಾಗೂ ಕೇನ್ ರಿಚರ್ಡ್ಸನ್ ವಿಕೆಟ್ ತೆಗೆದ ಶಮಿ ರೋಹಿತ್ ಪಡೆಗೆ 6 ರನ್ಗಳ ಅದ್ಭುತ ಜಯ ತಂದುಕೊಟ್ಟರು.
Mohammed Shami bowled a world class 20th over. Just brilliant how accurate he was with his bowling, great signs for India ahead of the group matches.
2,2,W,W,W,W by Shami in the 20th over while defending 11 runs.#INDvsAUS #Shami pic.twitter.com/IoZcOuwOQ2
— Syed Aamir Quadri (@aamir28_) October 17, 2022
ಶಮಿಗೆ ಇದು ಸವಾಲಿನ ಓವರ್ ಆಗಿತ್ತು
ಪಂದ್ಯ ಮುಗಿದ ಬಳಿಕ ಶಮಿಗೆ ಕೊನೆಯ ಓವರ್ ಬೌಲ್ ಮಾಡಲು ಹೇಳಿದ್ಯಾಕೆ ಎಂಬುದಕ್ಕೆ ವಿವರಣೆ ನೀಡಿದ ನಾಯಕ ರೋಹಿತ್, ಶಮಿ ಬಹಳ ದಿನಗಳ ಬಳಿಕ ಟಿ20 ಕ್ರಿಕೆಟ್ಗೆ ಮರಳುತ್ತಿದ್ದಾರೆ. ಆದ್ದರಿಂದ ಅವರಿಗೆ 1 ಓವರ್ ಬೌಲ್ ಮಾಡಲು ಅವಕಾಶ ಕೊಡಬೇಕು ಎಂದು ನಾನು ನಿರ್ಧರಿಸಿದ್ದೆ. ಇದಕ್ಕೆ ತಕ್ಕಂತೆ ಕೊನೆಯ ಓವರ್ನಲ್ಲಿ ನಾವು ಗೆಲ್ಲಲ್ಲು 6 ಎಸೆತಗಳಲ್ಲಿ 11 ರನ್ಗಳನ್ನು ಬಚಾವ್ ಮಾಡುವ ಸವಾಲಿತ್ತು. ವರ್ಷದ ಬಳಿಕ ತಂಡಕ್ಕೆ ಮರಳುತ್ತಿರುವ ಶಮಿಗೆ ಇದು ಸವಾಲಿನ ಓವರ್ ಆಗಿತ್ತು. ಹಾಗಾಗಿ ನಾನು ಅವರಿಗೆ ಕೊನೆಯ ಓವರ್ ಬೌಲ್ ಮಾಡುವುದಕ್ಕೆ ಹೇಳಿದೆ. ಕೊನೆಯ ಓವರ್ನಲ್ಲಿ ಶಮಿ ಏನು ಮಾಡಿದರು ಎಂಬುದನ್ನು ನೀವು ಸಹ ನೋಡಿದ್ದೀರಿ ಎಂದು ರೋಹಿತ್ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ