- Kannada News Photo gallery Cricket photos rohit sharma flop again in t20 world cup vs australia warm up match
T20 World Cup 2022: ಅಭ್ಯಾಸ ಪಂದ್ಯದಲ್ಲೂ ರೋಹಿತ್ ವಿಫಲ; ತಂಡಕ್ಕೆ ತಲೆನೋವಾದ ನಾಯಕನ ಕಳಪೆ ಫಾರ್ಮ್
Rohit Sharma: ಉಪನಾಯಕ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್, ಮೊದಲ ನಾಲ್ಕು ಓವರ್ಗಳಲ್ಲಿ ಖಾತೆಯನ್ನು ಸಹ ತೆರೆದಿರಲಿಲ್ಲ.
Updated on: Oct 17, 2022 | 3:37 PM

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕುತ್ತರವಾಗಿ ಆಸೀಸ್ ತಂಡ 20 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್ಗಳಿಗೆ ಆಲೌಟ್ ಆಯಿತು.

ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ಸಿಡಿಸಿದರೆ, ಬೌಲಿಂಗ್ನಲ್ಲಿ ಶಮಿ 3 ವಿಕೆಟ್ ಪಡೆದು ಮಿಂಚಿದರು. ಅಂತಿಮ ಹಂತದಲ್ಲಿ ಶಮಿಯ ಅದ್ಭುತ ಬೌಲಿಂಗ್ ಬಿಟ್ಟರೆ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಬೌಲರ್ಗಳು ತೀರ ದುಬಾರಿಯಾದರು. ಇವರೊಂದಿಗೆ ಬ್ಯಾಟಿಂಗ್ ವಿಭಾಗದಲ್ಲೂ ನಾಯಕ ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದರು.

ಉಪನಾಯಕ ರಾಹುಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್, ಮೊದಲ ನಾಲ್ಕು ಓವರ್ಗಳಲ್ಲಿ ಖಾತೆಯನ್ನು ಸಹ ತೆರೆದಿರಲಿಲ್ಲ. 5ನೇ ಓವರ್ನಲ್ಲಿ ಖಾತೆ ತೆರೆದ ರೋಹಿತ್, ಮ್ಯಾಕ್ಸ್ವೆಲ್ ಓವರ್ನಲ್ಲಿ ಒಂದು ಫೋರ್ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆ ಬಳಿಕ ಆಗರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್, ರಾಹುಲ್ ಅರ್ಧಶತಕ ಸಿಡಿಸಿದ್ದರೂ ಸಹ ಅವರ ಖಾತೆಯಲ್ಲಿ ಮಾತ್ರ ಕೇವಲ 1 ರನ್ ಇತ್ತು. ಈ ಇಬ್ಬರು ಸೇರಿ ಒಟ್ಟು 78 ರನ್ಗಳ ಜೊತೆಯಾಟ ನಡೆಸಿದರೆ, ಇದರಲ್ಲಿ ರಾಹುಲ್ ಒಬ್ಬರದ್ದೆ 57 ರನ್ಗಳಿದ್ದವು.

ಕೊನೆಯ ಹತ್ತು ಇನ್ನಿಂಗ್ಸ್ಗಳಿಂದ ರೋಹಿತ್ ಬ್ಯಾಟ್ ಸತತ ವಿಫಲವಾಗುತ್ತಿದೆ. ಇದು ಟೀಂ ಇಂಡಿಯಾದ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಇವರೊಂದಿಗೆ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.



















