IND vs ENG: ಟೀಂ ಇಂಡಿಯಾಕ್ಕೆ ನಾಯಕನೇ ವಿಲನ್; ರನ್ ಗಳಿಸದೇ ತಂಡವನ್ನು ಸಂಕಷ್ಟಕ್ಕೆ ತಳ್ಳಿದ ರೋಹಿತ್

T20 World Cup 2022: ಈ ಇಡೀ ಟೂರ್ನಿಯಲ್ಲಿ ರೋಹಿತ್ ರನ್ ಗಳಿಸಿರಲಿಲ್ಲ. ಆದರೆ, ಇಂದು ತಂಡಕ್ಕೆ ರೋಹಿತ್ ಅವರಿಂದ ಮಹತ್ವದ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಮಾಡಿದಂತೆಯೇ ಈ ಪಂದ್ಯದಲ್ಲೂ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

IND vs ENG: ಟೀಂ ಇಂಡಿಯಾಕ್ಕೆ ನಾಯಕನೇ ವಿಲನ್; ರನ್ ಗಳಿಸದೇ ತಂಡವನ್ನು ಸಂಕಷ್ಟಕ್ಕೆ ತಳ್ಳಿದ ರೋಹಿತ್
Rohit Sharma
Follow us
TV9 Web
| Updated By: ಪೃಥ್ವಿಶಂಕರ

Updated on:Nov 10, 2022 | 4:34 PM

2022 ರ ಟಿ 20 ವಿಶ್ವಕಪ್‌ನ (T20 World Cup 2022) ಎರಡನೇ ಸೆಮಿಫೈನಲ್‌ನಲ್ಲಿ ಆರಂಭಿಕರು ಮತ್ತೆ ವಿಫಲರಾಗಿದ್ದಾರೆ. ಅದರಲ್ಲೂ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಫ್ಲಾಪ್ ಶೋವನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಆರಂಭಿಕರೇ ಮತ್ತೊಮ್ಮೆ ವಿಲನ್ ಆದರು. ಅದರಲ್ಲೂ ಬಲಿಷ್ಠ ತಂಡಗಳೆದುರು ಗಲ್ಲಿ ಕ್ರಿಕೆಟರ್​ನಂತೆ ಬ್ಯಾಟ್ ಬೀಸುವ ಉಪನಾಯಕ ರಾಹುಲ್ ಈ ಪಂದ್ಯದಲ್ಲೂ ಒಂದಂಕ್ಕಿಗೆ ಸುಸ್ತಾಗಿ ಕೇವಲ 2ನೇ ಓವರ್​ನಲ್ಲೇ ಪೆವಿಲಿಯನ್​ಗೆ ಮರಳಿದರು. ಅವರಂತೆಯೇ ಇಡೀ ಟೂರ್ನಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ನಾಯಕ ರೋಹಿತ್ ಶರ್ಮಾ ಕೂಡ ಅಟ್ಟರ್ ಫ್ಲಾಪ್ ಆದರು. ಇಂಗ್ಲೆಂಡ್ ಎದುರು 28 ಎಸೆತಗಳಲ್ಲಿ ಕೇವಲ 27 ರನ್ ಗಳಿಸಿದ ರೋಹಿತ್ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸ ಮಾಡಿದರು.

ಈ ಇಡೀ ಟೂರ್ನಿಯಲ್ಲಿ ರೋಹಿತ್ ರನ್ ಗಳಿಸಿರಲಿಲ್ಲ. ಆದರೆ, ಇಂದು ತಂಡಕ್ಕೆ ರೋಹಿತ್ ಅವರಿಂದ ಮಹತ್ವದ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಮಾಡಿದಂತೆಯೇ ಈ ಪಂದ್ಯದಲ್ಲೂ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ರೋಹಿತ್ 27 ರನ್​ಗಳಿಂದ ಏನು ಪ್ರಯೋಜನ?

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 27 ರನ್ ಗಳಿಸಿದ್ದರು. ಆದರೆ, ಅವರು 8 ಅಥವಾ 9 ಎಸೆತಗಳಲ್ಲಿ ಈ ರನ್ ಗಳಿಸಿದ್ದರೆ, ಅದು ವಿಷಯವಾಗುತ್ತಿತ್ತು. ಆದರೆ ರೋಹಿತ್ ಇದನ್ನು ಮಾಡಲಿಲ್ಲ. ಬದಲಿಗೆ ಇಷ್ಟು ರನ್ ಗಳಿಸಲು ಅವರು ಬರೋಬ್ಬರಿ 28 ಎಸೆತಗಳನ್ನು ಎದುರಿಸಿದರು. ಅಲ್ಲದೆ ಅವರ ಇನ್ನಿಂಗ್ಸ್‌ನಲ್ಲಿ ಸ್ಟ್ರೈಕ್ ರೇಟ್ 100 ಕೂಡ ದಾಟಲಿಲ್ಲ. ರೋಹಿತ್ ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಬಾರಿಸಲಷ್ಟೇ ಶಕ್ತರಾಗಿ ಪೆವಿಲಿಯನ್ ಸೇರಿಕೊಂಡರು.

ರನ್ ಗಳಿಸಲಿಲ್ಲ, ಟೆನ್ಷನ್ ಕೊಟ್ಟರು

ತಂಡದ ಸ್ಕೋರ್ ಬೋರ್ಡ್‌ಗೆ 27 ರನ್ ಕೊಡುಗೆ ನೀಡುವ ಮೂಲಕ ರೋಹಿತ್ ಕೆಲಸವನ್ನು ಸುಲಭಗೊಳಿಸಲಿಲ್ಲ ಆದರೆ ಹೆಚ್ಚು ಕಷ್ಟಕರವಾಗಿಸಿದರು ಎಂಬುದು ಸ್ಪಷ್ಟವಾಗಿದೆ. ಅವರು ಔಟಾದಾಗ ತಂಡದ ಸ್ಕೋರ್ 56 ರನ್ ಆಗಿತ್ತು. ಆದರೆ ಭಾರತದ ಇನಿಂಗ್ಸ್‌ನ 8.5 ಓವರ್‌ಗಳು ಆಗಲೇ ಮುಗಿದಿದ್ದವು. ಇದರರ್ಥ ಆರಂಭಿಕರಿಂದ ನಿರೀಕ್ಷಿತ ರೀತಿಯ ಆರಂಭ ಕಂಡು ಬರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕೇವಲ 96 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ ರೋಹಿತ್ ಅವರ ಬಳಿಕ ಬ್ಯಾಟಿಂಗ್​ಗೆ ಬಂದ ಸೂರ್ಯಕುಮಾರ್ ಯಾದವ್ ಮೇಲೆ ಒತ್ತಡ ಹೇರಿತು.

T20 ವಿಶ್ವಕಪ್​ನಲ್ಲಿ ರೋಹಿತ್ ಪ್ರದರ್ಶನ

ಸೆಮಿಫೈನಲ್ ಸೇರಿದಂತೆ, ರೋಹಿತ್ ಶರ್ಮಾ ಈ ಟಿ20 ವಿಶ್ವಕಪ್​ನಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಕೇವಲ 116 ರನ್ ಮಾತ್ರ ಗಳಿಸಿದ್ದಾರೆ. 20 ರ ಸರಾಸರಿ ರನ್ ಗಳಿಸಿರುವ ರೋಹಿತ್ 106.42 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

Published On - 4:34 pm, Thu, 10 November 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ