ಕೆಲವು ವರ್ಷಗಳ ಹಿಂದೆ ಚಾಟ್ ಶೋ ಒಂದರಲ್ಲಿ ಟೀಮ್ ಇಂಡಿಯಾದಲ್ಲಿ ಅತಿ ಹೆಚ್ಚು ‘ಮರೆತುಹೋಗುವ’ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆಯನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬಳಿ ಕೇಳಲಾಗಿತ್ತು. ಆಗ ಕೊಹ್ಲಿ ಒಂದು ಕ್ಷಣವೂ ಯೋಚಿಸದೆ ತಕ್ಷಣ ಹೇಳಿದ ಹೆಸರು ರೋಹಿತ್ ಶರ್ಮಾ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ಏಷ್ಯಾಕಪ್ ಮುಗಿದ ಬಳಿಕ ಭಾರತೀಯ ಆಟಗಾರರು ಏರ್ಪೋರ್ಟ್ಗೆ ತೆರಳುವಾಗ ನಡೆಯಿತು.
ಭಾನುವಾರ, ಭಾರತ ದಾಖಲೆಯ 8 ನೇ ಏಷ್ಯಾಕಪ್ ಪ್ರಶಸ್ತಿ ಜಯಿಸಿದ ನಂತರ, ರೋಹಿತ್ ಶರ್ಮಾ ಮರೆವಿನ ಸ್ವಭಾವ ಎಲ್ಲರೂ ಕಂಡರು. ಏಷ್ಯಾಕಪ್ ಫೈನಲ್ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಹೆಚ್ಚು ಸಮಯ ವ್ಯರ್ಥ ಮಾಡದೆ ಬೇಗನೇ ಭಾರತಕ್ಕೆ ಹಿಂತಿರುಗಲು ಸಜ್ಜಾಗಿದ್ದರು. ಇದಕ್ಕಾಗಿ ರಾತ್ರಿ ಹೋಟೆಲ್ನಿಂದ ವಿಮಾನ ನಿಲ್ದಾಣಕ್ಕೆ ಹೊರಡಲು ಬಸ್ನಲ್ಲಿ ಕೂತು ತಯಾರಾಗಿದ್ದರು. ಆದರೆ, ಬಸ್ ಅನ್ನು ತಡೆದು ರೋಹಿತ್ ಶರ್ಮಾ ಬಾಗಿಲ ಬಳಿ ಕಾಯುತ್ತಿದ್ದರು.
ಟ್ರೋಫಿ ಎತ್ತಿ ಹಿಡಿಯುವ ಮುನ್ನ ಪೋಸ್ಟ್ ಮ್ಯಾಚ್ನಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ
ರೋಹಿತ್ ಶರ್ಮಾ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ರೂಮ್ನಲ್ಲಿಯೇ ಮರೆತು ಬಸ್ ಏರಿದ್ದರು. ಹೀಗಾಗಿ ಹೋಟೆಲ್ ಅಧಿಕಾರಿಯೊಬ್ಬರು ಅವರ ರೂಮ್ಗೆ ತೆರಳಿ ಪಾಸ್ಪೂರ್ಟ್ ತಂದು ರೋಹಿತ್ಗೆ ನೀಡಿದ ನಂತರ ಬಸ್ ಹೊರಟಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Virat Kohli in 2017 – I haven’t seen anyone forget things like Rohit Sharma does. He even forgets his iPad, passport.
Tonight – Rohit forgot his passport, and a support staff member gave it back to him. (Ankan Kar). pic.twitter.com/3nFsiJwCP4
— Mufaddal Vohra (@mufaddal_vohra) September 17, 2023
2017 ರಲ್ಲಿ, ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಬಗ್ಗೆ ಹೀಗೆ ಹೇಳಿದ್ದರು, “ರೋಹಿತ್ ಶರ್ಮಾ ಅವರ ರೀತಿ ಯಾರೂ ಮರೆಯುವುದನ್ನು ನಾನು ನೋಡಿಲ್ಲ. ಅವನು ತನ್ನ ಐಪ್ಯಾಡ್, ಪಾಸ್‌ಪೋರ್ಟ್ ಅನ್ನು ಸಹ ಮರೆತುಬಿಡುತ್ತಾರೆ,“ ಎಂದು ಹೇಳಿದ್ದರು.
ಏಷ್ಯಾಕಪ್ ಫೈನಲ್ ಪಂದ್ಯ ಕೆಲವೇ ಗಂಟೆಗಳಲ್ಲಿ ಮುಗಿದ ಕಾರಣ ಭಾರತೀಯ ಆಟಗಾರರು ಶ್ರೀಲಂಕಾದಲ್ಲಿ ಹೆಚ್ಚು ಸಮಯ ಕಳೆಯದೆ ನೇರವಾಗಿ ಏರ್ಪೋರ್ಟ್ಗೆ ಬಂದು ಭಾರತಕ್ಕೆ ಮರಳಿದ್ದಾರೆ. ಇಂದು ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ಟೀಮ್ ಇಂಡಿಯಾ ಪ್ಲೇಯರ್ಸ್ ಮುಂಬೈನ ಕಲಿನಾ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಇತರ ಆಟಗಾರರು ತಮ್ಮ ಮನೆಗೆ ತೆರಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ